ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ ಕೊಡ್ತಾರೆ ; ಜಗತ್ತು ಗೆದ್ದ ದಿ ರಾಕ್ ಮೇಲೆ ಗಂಭೀರ ಆರೋಪ..!

ದಿ ರಾಕ್ ನಿಮಗೆ ಗೊತ್ತಿರಬೇಕು. WWEನ ದಂತಕಥೆ. ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ನಲ್ಲಿ ಇವರನ್ನ ಪೀಪಲ್ಸ್ ಚಾಂಪಿಯನ್ ಎಂದೇ ಕರೆಯಲಾಗುತ್ತೆ.

10 ಬಾರಿ ವಿಶ್ವ ಚಾಂಪಿಯನ್‌ಶಿಪ್, ಎರಡು ಇಂಟರ್-ಕಾಂಟಿನೆಂಟಲ್ ಪ್ರಶಸ್ತಿಗಳು ಮತ್ತು ಐದು ಟ್ಯಾಗ್-ಟೀಮ್ ಕಿರೀಟಗಳನ್ನು ಗೆದ್ದು, ಹೆಚ್ಚು ಕಡಿಮೆ ಎರಡು ದಶಕ WWE ರಿಂಗ್ ಜೊತೆ ಒಡನಾಟ ಹೊಂದಿರುವ ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್, ಅಂಗೈಯಲ್ಲಿ ಆಕಾಶ ತೋರಿಸುವ ಶೂರರನ್ನೊಂದಿರುವ ಹಾಲಿವುಡ್ ಪ್ರಮುಖ ಆಕ್ಟರ್ ಕೂಡ ಹೌದು.

hollywood-accuses-dwayne-johnson-aka-the-rock-of-urinating-inside-a-water-bottle-during-the-film-sho

ದಿ ಸ್ಕಾರ್ಪಿಯನ್ ಕಿಂಗ್‌ನಿಂದ ಹಿಡಿದು ಬ್ಲಾಕ್ ಆಡಮ್‌ವರೆಗೆ ಕಳೆದ ಎರಡು ದಶಕದಲ್ಲಿ ಹತ್ತಾರು ಸಿನಿಮಾ ಮಾಡಿರುವ, ವೈವಿಧ್ಯಮಯ ಪಾತ್ರಗಳನ್ನ ಮಾಡಿರುವ ದಿ ರಾಕ್ ಮೇಲೀಗ ಗಂಭೀರವಾದ ಆರೋಪ ಕೇಳಿ ಬಂದಿದೆ. ಅದು ಮೂರ್ತ ವಿಸರ್ಜನೆಗೆ ಸಂಬಂಧಿಸಿದ್ದು ಅನ್ನುವುದು ವಿಚಿತ್ರ.

ಹೌದು, ಹಾಲಿವುಡ್‌ನ ಅಂಗಳದಲ್ಲಿ ಎಲ್ಲರು ಮಾತನಾಡಿಕೊಳ್ಳುತ್ತಿರುವಂತೆ ಮತ್ತು ಅಲ್ಲಿ ಸುದ್ದಿಯಾದಂತೆ, ನೀರಿನ ಬಾಟಲಿಯಲ್ಲಿ ದಿ ರಾಕ್​ ಮೂತ್ರ ವಿಸರ್ಜನೆ ಮಾಡ್ತಾರೆ. ಇಷ್ಟೇ ಅಲ್ಲ ಆ ಬಾಟಲಿಯನ್ನ ಬೇರೆಯವರ ಕೈಗೆ ಕೊಟ್ಟು ಎಸೆಯುವಂತೆ ಆದೇಶವನ್ನೂ ಕೊಡ್ತಾರಂತೆ ದಿ ರಾಕ್

hollywood-accuses-dwayne-johnson-aka-the-rock-of-urinating-inside-a-water-bottle-during-the-film-sho

ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ, ಕ್ಯಾರವ್ಯಾನ್ ಇವರಿಂದ ದೂರ ಇದ್ದರೆ.. ದಿ ರಾಕ್ ಸಾರ್ವಜನಿಕ ಶೌಚಾಲಯ ಉಪಯೋಗಿಸಲು ಒಪ್ಪುವುದಿಲ್ಲ ಬದಲಿಗೆ ಬಾಟಲಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆ ನಂತರ ತಮ್ಮ ಆಪ್ತ ಸಹಾಯಕರನ್ನು ಕರೆದು, ಅವರ ಕೈಗೆ ಮೂತ್ರದ ಬಾಟಲಿಯನ್ನು ಕೊಟ್ಟು ಎಸೆಯಲು ಹೇಳುತ್ತಾರೆ ಎಂಬ ವಿಚಾರ ಸದ್ಯಕ್ಕೆ ಸಪ್ತಸಾಗರದಾಚೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಅವರ ಈ ಅಸಹ್ಯಕರ ಮತ್ತು ಅಸಭ್ಯ ವರ್ತನೆಗೆ ಹಾಲಿವುಡ್‌ನಲ್ಲಿ ಸದ್ಯಕ್ಕೆ ಅನೇಕರು ಕೆಂಡವನ್ನ ಕಾರುತ್ತಿದ್ದಾರೆ. ನಿಮ್ಮ ಈ ವರ್ತನೆಗೆ ನಿಮಗೆ ನಾಚಿಕೆಯಾಗಲ್ಲವಾ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ. ಇನ್ನೂ ದಿ ರಾಕ್ ವಿರುದ್ಧ ಹಾಲಿವುಡ್‌ ನೆಲದಲ್ಲಿ ಆಕ್ರೋಶದ ಅಲೆ ವ್ಯಕ್ತವಾಗುತ್ತಿದ್ದಂತೆ, ದಿ ರಾಕ್ ಅವರ ಹಳೆಯ ವಿಡಿಯೋ ಒಂದು ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ತಮಗೆ ಇದೆ ಎಂದು ಖುದ್ದು ದಿ ರಾಕ್ ಅಂದರೆ ಡ್ವೇನ್​ ಜಾನ್ಸನ್​ ಒಪ್ಪಿಕೊಂಡಿದ್ದಾರೆ. ರಾಕ್ ಅವರ ಈ ವರ್ತನೆಯನ್ನ ಅವತ್ತು ಕೂಡ ಅನೇಕರು ಖಂಡಿಸಿದ್ದರು ಅನ್ನುವುದು ನಿಮ್ಮ ಗಮನದಲ್ಲಿರಲಿ

ಕೇವಲ ಇದೊಂದೇ ಆರೋಪ ಅಲ್ಲ, ಚಿತ್ರದ ಚಿತ್ರೀಕರಣಕ್ಕೆ ತುಂಬಾ ಅಂದರೆ ತುಂಬಾ ತಡವಾಗಿ ಬರುವ ಅಭ್ಯಾಸವನ್ನು ಕೂಡ ದಿ ರಾಕ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪವನ್ನು ಹಾಲಿವುಡ್‌ನ ಅನೇಕರು ಮಾಡಿದ್ದಾರೆ. ಅದರಲ್ಲಿಯೂ 2021ರಲ್ಲಿ ಬಂದ ರೆಡ್ ನೋಟಿಸ್ ಚಿತ್ರದ ಚಿತ್ರೀಕರಣಕ್ಕೆ ಡ್ವೇನ್​ ಜಾನ್ಸನ್ ಐದಾರು ಘಂಟೆ ತಡವಾಗಿ ಬರುತ್ತಿದ್ದರು ಅನ್ನುವ ಮಾತು ಕೂಡ ಈಗ ಕೇಳಿ ಬಂದಿದೆ. ಇದರಿಂದ ನಿರ್ಮಾಪಕರಿಗೆ ಹತ್ ಹತ್ರ ನೂರು ಕೋಟಿ ಹೆಚ್ಚುವರಿ ನಷ್ಟವಾಗಿದೆ ಎಂಬ ಆರೋಪವನ್ನೂ ಇತ್ತೀಚೆಗೆ ದಿ ರಾಕ್ ಅವರ ಮೇಲೆ ಮಾಡಲಾಗಿದೆ.

ಇನ್ನೂ ಸದ್ಯ ದಿ ರಾಕ್ ರೆಡ್ ಓನ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಈ ಚಿತ್ರದ ಚಿತ್ರೀಕರಣಕ್ಕೂ ದಿ ರಾಕ್ ನಿರಂತರವಾಗಿ 06-07 ಘಂಟೆ ತಡವಾಗಿ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ರಾಕ್ ಅವರ ಈ ನಡೆಯಿಂದ ಚಿತ್ರಕ್ಕೆ 50 ಕೋಟಿ ಖರ್ಚು ಹೆಚ್ಚಾಗಿದೆ ಎಂದು ಚಿತ್ರತಂಡವೇ ಹೇಳಿರುವುದಾಗಿ ಹಾಲಿವುಡ್ ನಲ್ಲಿ ವರದಿಯಾಗಿದೆ. ಇದೆಲ್ಲದಕ್ಕೂ ಮುನ್ನ ಫಾಸ್ಟ್​ ಆ್ಯಂಡ್​ ಫ್ಯೂರಿಯಸ್​' ಸಿನಿಮಾದ ಚಿತ್ರೀಕರಣದ ವೇಳೆ ನಟ ವಿನ್​ ಡೀಸೆಲ್​ ಮತ್ತು ಡ್ವೇನ್​ ಜಾನ್ಸನ್​ ನಡುವೆ ಗಲಾಟೆ ಆಗಿದ್ದು ಕೂಡ ಇದೇ ಟೈಮ್ ಮ್ಯಾನೇಜ್ಮೆಂಟ್ ವಿಚಾರಕ್ಕೆ

More from Filmibeat

English summary
Hollywood accuses Dwayne Johnson, known as The Rock, of urinating inside a water bottle during the film shoot. Hollywood Also Questioned His Time Management.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X