ಹುಡುಗನಾಗಿ ಬದಲಾದ ಖ್ಯಾತ ನಟಿ; ಸಿಕ್ಸ್ ಪ್ಯಾಕ್ ಫೋಟೋ ಶೇರ್ ಮಾಡಿ ಸಂತಸ
ಹಾಲಿವುಡ್ ನ ಸ್ಟಾರ್ ನಟಿ ಎಲೆನ್ ಈಗ ಹುಡುಗನಾಗಿ ಬದಲಾಗಿದ್ದಾರೆ. ಸರ್ಜರಿ ಬಳಿಕ ಹುಡುಗನಾಗಿ ಬದಲಾಗಿರುವ ಎಲೆನ್ ಸಿಕ್ಸ್ ಪ್ಯಾಕ್ ಮಾಡಿ ಸಂಭ್ರಮಿಸಿದ್ದಾರೆ. ಸಿಕ್ಸ್ ಪ್ಯಾಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಹಾಲಿವುಡ್ ನ ಪ್ರಸಿದ್ಧ ಇನ್ಸೆಪ್ಷನ್ ಮತ್ತು ಜುನೋ ಚಿತ್ರಗಳಲ್ಲಿ ನಟಿಸಿದ್ದ ಎಲೆನ್ ಈಗ ಹುಡುಗನಾಗಿ ಬದಲಾದ ಬಳಿಕ ಎಲಿಯಟ್ ಪೇಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಎಲಿಯಟ್ ಪೇಜ್ ಟ್ರಾನ್ಸ್ ಜಂಡರ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಲಿಯಟ್, ಬಾಲ್ಯದಲ್ಲಿ ತನ್ನ ದೇಹದಲ್ಲಿನ ಬದಲಾವಣೆ ಗಮನಿಸಿದಾಗ ತುಂಬ ಹಿಂಸೆ ಆಗುತ್ತಿತ್ತು. ಹುಡುಗನ ಹಾಗೆ ವರ್ತಿಸುತ್ತಿದ್ದೆ. ಹಾಲಿವುಡ್ ನಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ವೈಯಕ್ತಿಕ ಜೀವನದಲ್ಲಿ ತುಂಬಾ ಅಪ್ ಸೆಟ್ ಆಗುತ್ತಿದ್ದೆ ಎಂದಿದ್ದಾರೆ.

2007ರಲ್ಲಿ ಜುನೋ ಚಿತ್ರದ ಪ್ರಚಾರದ ಸಮಯದಲ್ಲಿ ಆಸ್ಕರ್ ರೆಡ್ ಕಾರ್ಪೆಟ್ ವೇಳೆ ಧರಿಸಿದ್ದ ಉಡುಗೆ ಚಿತ್ರವನ್ನು ನಾನು ನೋಡಿಲ್ಲ. ಇನ್ಸೆಪ್ಷನ್ ಚಿತ್ರದ ಪ್ರದರ್ಶನ ವೇಳೆಯೂ ಧರಿಸಿದ್ದ ಉಡುಪು ನನಗೆ ಪ್ಯಾನಿಕ್ ಅಟ್ಯಾಕ್ ಮಾಡಲು ಪ್ರಾರಂಭಿಸಿತು. ಪಾರ್ಟಿ ಬಳಿಕ ತುಂಬಾ ಹೆದರುತಿದ್ದೆ. ಮಹಿಳೆರ ಉಡುಪಿನಲ್ಲಿ ಕಂಫರ್ಟ್ ಆಗಿರುತ್ತಿರಲಿಲ್ಲ ಎಂದು ಹೇಳಿದ್ದಾರೆ.
2014ರಲ್ಲಿ ಎಲಿಯಟ್ ಪೇಜ್ ಸಲಿಂಗಕಾಮಿ ಎಂದು ಬಹಿರಂಗ ಪಡಿಸಿದ್ದರು. 2018ರಲ್ಲಿ ಎಲಿಯಟ್ ಕೆನಡಾದ ಡ್ಯಾನ್ಸರ್ ಎಮ್ಮಾ ಪೋರ್ಟರ್ ಅವರನ್ನು ವಿವಾಹವಾದರು. ಆದರೆ 2021ರಲ್ಲಿ ವಿಚ್ಛೇದನ ನೀಡಿ ದೂರ ಆಗಿದ್ದಾರೆ.
Recommended Video
ಇದೀಗ ಸಂಪೂರ್ಣವಾಗಿ ಹುಡುಗನಾಗಿ ಬದಲಾಗಿರುವ ಎಲ್ಟ್ ನನ್ನ ಜೀವನ ಸಂಪೂರ್ಣವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.


Click it and Unblock the Notifications











