ಎರಡನೇ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ ನಟ ಜಾನಿ ಡೆಪ್

ಹಾಲಿವುಡ್ ನ ಖ್ಯಾತ ಚಿತ್ರ ನಟ ಜಾನಿ ಡೆಪ್ ತಮ್ಮ ಪತ್ನಿ ಅಂಬರ್ ಹರ್ಡಿ ಮೇಲೆ 50 ಮಿಲಿಯನ್ ಯುಎಸ್ ಡಾಲರ್ಸ್ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ತಮ್ಮ ವಿರುದ್ದ ಪತ್ನಿ ಹರ್ಡಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜಾನಿ ಡೆಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೂಪದರ್ಶಿ ಅಂಬರ್ ಹರ್ಡಿ ನಟ ಜಾನಿ ಡೆಪ್ ಅವರ ಎರಡನೇ ಪತ್ನಿಯಾಗಿದ್ದರು. ಆದರೆ, 2016ರಲ್ಲಿ ಈ ಜೋಡಿ ಬೇರೆ ಬೇರೆ ಆಗಿದ್ದರು. 2016ರ ಮೇ ತಿಂಗಳಿನಲ್ಲಿ ಹರ್ಡಿ ತನಗೆ ಪತಿ ಜಾನಿ ಡೆಪ್ ಹಿಂಸೆ ನೀಡಿದ್ದಾರೆ, ಕೌಟುಂಬಿಕ ಕಲಹದಿಂದ ತಮಗೆ ಮಾನಸಿಕ ಕಿರುಕುಳ ಆಗಿದೆ ಎಂದು ಆರೋಪ ಮಾಡಿದ್ದರು.

ಇದರ ನಂತರ ಕಳೆದ ಡಿಸೆಂಬರ್ 18 ರಂದು ಮತ್ತೆ ಜಾನಿ ಡೆಪ್ ಸಂಬಂಧಿಸಿದ ಹೇಳಿಕೆ ನೀಡಿದ್ದರು. ಆದರೆ, ಈ ಬಾರಿ ಜಾನಿ ಡೆಪ್ ಪತ್ನಿಯ ವಿರುದ್ದ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ತಮ್ಮ ಹೆಸರನ್ನು ಹಾಳು ಮಾಡಲು ಈ ರೀತಿ ಮಾಡುತ್ತಿದ್ದಾರೆ, ನಾನು ಪತ್ನಿ ಹರ್ಡಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಿಲ್ಲ ಎಂದಿದ್ದಾರೆ. ಕಳೆದ ಶುಕ್ರವಾರ ಜಾನಿ ಡೆಪ್ 50 ಮಿಲಿಯನ್ ಯುಸ್ ಡಾಲರ್ ಮಾನನಷ್ಟ ಮೊಕದ್ದಮೆ ಕೇಸ್ ಅನ್ನು ಹೆಂಡತಿಯ ವಿರುದ್ಧವಾಗಿ ಹಾಕಿದ್ದಾರೆ.

hollywood actor johnny depp filed defamation case against his ex wife amber heard

ಜಾನಿ ಡೆಪ್ 55 ವರ್ಷದವರಾಗಿದ್ದು, ಹರ್ಡಿ 32 ವರ್ಷ ವಯಸ್ಸಾಗಿದೆ. ಈ ಜೋಡಿ ಮೊದಲು 2011ರಲ್ಲಿ ಭೇಟಿ ಮಾಡಿದ್ದರು. ಬಳಿಕ ಪ್ರೀತಿಸಿ 2015 ರಲ್ಲಿ ಮದುವೆ ಆಗಿದ್ದರು. ಆದರೆ, ವಿವಾಹದ ನಂತರ ಒಂದು ವರ್ಷದಲ್ಲಿಯೇ ಈ ಜೋಡಿ ವಿಚ್ಚೇದನ ಪಡೆದಿದ್ದರು.

hollywood actor johnny depp filed defamation case against his ex wife amber heard

ಜಾನಿ ಡೆಪ್ ಬಗ್ಗೆ ಹರ್ಡಿ ಮಾಡಿರುವ ಆರೋಪದ ಬಗ್ಗೆ ಮೊದಲ ಪತ್ನಿ ವಸೆಸ್ಸಾ ಸಹ ಪ್ರತಿಕ್ರಿಯೆ ನೀಡಿದ್ದರು. ತಮ್ಮ ಪತಿಯ ಪರ ಮಾತನಾಡಿದ್ದ ಅವರು ಜಾನಿ ಡೆಪ್ ಈ ರೀತಿಯ ನಡೆದುಕೊಳ್ಳುವ ವ್ಯಕ್ತಿ ಅಲ್ಲ ಎಂದು ಹೇಳಿದ್ದರು.

More from Filmibeat

English summary
Hollywood actor Johnny Depp filed defamation case against his ex wife, actress Amber Heard. The actress made 'hoax' allegations of domestic abuse against Depp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X