ಲೈಂಗಿಕ ದೌರ್ಜನ್ಯ ಹಾಲಿವುಡ್ ನಟನಿಗೆ ಮೂರು ವರ್ಷ ಜೈಲು
'ಡಂಕಿರ್ಕ್', 'ಫ್ಯಾಂಟ್ಯಾಸ್ಟಿಕ್ ಬೀಸ್ಟ್ಸ್' ಸೇರಿ ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟ ಕೆವಿನ್ ಗುತ್ತರ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕೆವಿನ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಆದರೆ ಆರೋಪವನ್ನು ತಳ್ಳಿಹಾಕಿರುವ ಕೆವಿನ್, 'ಕಾಯಿಲೆಯಿಂದ ಬಳಲುತ್ತಿದ್ದ ಆ ಯುವತಿಗೆ ನಾನು ಸಹಾಯ ಮಾಡಿದೆ ಅಷ್ಟೆ' ಎಂದಿದ್ದಾರೆ. ಆದರೆ ಆ ಯುವತಿಯ ಒಳವಸ್ತ್ರಗಳಲ್ಲಿ ಕೆವಿನ್‌ನ ಡಿಎನ್‌ಎ ಪತ್ತೆಯಾಗಿದೆ.

ಘಟನೆ ನಡೆದಿರುವುದು 2017. ಯುವತಿ ಹೇಳಿರುವಂತೆ ಕಿವಿನ್ ಹಾಗೂ ಇನ್ನೊಬ್ಬರನ್ನು ಭೇಟಿಯಾಗಲು ತಾನು ಬಂದಿದ್ದು ಅಲ್ಲಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಆಕೆಗೆ ಹಠಾತ್ತನೆ ಆರೋಗ್ಯ ಕೆಟ್ಟಿದೆ. ಕೆವಿನ್ ಹೊರತಾಗಿ ಇದ್ದ ಮತ್ತೊಬ್ಬ ವ್ಯಕ್ತಿ ಔಷಧ ತರಲು ಹೋದಾಗ ಕೆವಿನ್ ರೂಮಿನಲ್ಲಿಯೇ ಉಳಿದುಕೊಂಡಿದ್ದಾನೆ.
ಯುವತಿ ಹೇಳಿರುವಂತೆ ನನ್ನನ್ನು ಬೆಡ್ ಮೇಲೆ ಮಲಗಿಸಿ ನನ್ನ ಮೇಲ್ವಸ್ತ್ರವನ್ನು ತೆಗೆದು ನನ್ನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಲಾಯಿತು ಎಂದಿದ್ದಾಳೆ. 'ಕೆವಿನ್, ಯುವತಿಯ ಪಾನೀಯಕ್ಕೆ ಮತ್ತು ಬರುವ ಔಷಧಿ ಬೆರೆಸಿದ್ದಾನೆ' ಎಂದು ಯುವತಿ ಪರ ವಕೀಲರು ಆರೋಪಿಸಿದ್ದರು.
Recommended Video
ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ಡಂಕಿರ್ಕ್', 'ಫೆಂಟಾಸ್ಟಿಕ್ ಬೀಸ್ಟ್' ಸರಣಿಯ ಎರಡು ಸಿನಿಮಾಗಳು. 'ಸನ್‌ಶೈನ್ ಆನ್ ಲೀತ್', ಕೆವಿನ್ ನಟಿಸಿದ್ದ ಪ್ರಮುಖ ಸಿನಿಮಾಗಳು. ನೆಟ್‌ಫ್ಲಿಕ್ಸ್‌ನ ಹೊಸ ಸಿನಿಮಾದಲ್ಲಿಯೂ ಕೆವಿನ್ ನಟಿಸುತ್ತಿದ್ದಾರೆ.


Click it and Unblock the Notifications











