For Quick Alerts
  ALLOW NOTIFICATIONS  
  For Daily Alerts

  ದೆಹಲಿ ವಾಯು ಮಾಲಿನ್ಯದ ಬಗ್ಗೆ ಆಸ್ಕರ್ ವಿನ್ನರ್ ಹಾಲಿವುಡ್ ನಟ ಹೇಳಿದ್ದೇನು?

  |

  ರಾಷ್ಟ್ರದ ರಾಜಧಾನಿ ದೆಹಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆಯಾಗುತ್ತಿದೆ. ಕಲುಷಿತ ಗಾಳಿಯಿಂದ ದಟ್ಟ ಹೊಗೆತುಂಬಿದ್ದು ಕತ್ತಲು ಆವರಿಸಿದೆ. ಇದರಿಂದ ಶಾಲೆಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲು ಚರ್ಚೆಯಾಗುತ್ತಿದೆ.

  ಇತ್ತೀಚಿಗಷ್ಟೆ ನಟಿ ಪ್ರಿಯಾಂಕಾ ಚೋಪ್ರ ವಾಯು ಮಾಲಿನ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಈಗ ಹಾಲಿವುಡ್ ಖ್ಯಾತ ನಟ ಮತ್ತು ಹವಮಾನ ಕಾರ್ಯಕರ್ತ ಲಿಯೊನಾರ್ಡೊ ಡಿಕಾಪ್ರಿಯೊ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಬೇಸರದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಬೇಸರ

  ದೀರ್ಘವಾದ ಪೋಸ್ಟ್ ಹಾಕಿರುವ ಡಿಕಾಪ್ರಿಯೊ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಭುಜದ ಮೇಲೆ ಮಗನನ್ನು ಎತ್ತಿಕೊಂಡಿರುವ ತಂದೆ, ಮಗನ ಕೈಯಲ್ಲಿ "ನನಗೆ ಉತ್ತಮ ಭವಿಷ್ಯಬೇಕು" ಎನ್ನುವ ಫಲಕ ಹಿಡಿದಿರುವ ಪೋಸ್ಟ್ ಅನ್ನು ಡಿಕಾಪ್ರಿಯೊ ಶೇರ್ ಮಾಡಿದ್ದಾರೆ.

  ಈ ಪೋಸ್ಟ್ ಕೆಳಗೆ "ದೆಹಲಿಯಲ್ಲಿ ಅಪಾಯಕಾರಿ ಮಟ್ಟ ತಲುಪಿರುವ ವಾಯು ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 1500ಕ್ಕೂ ಹೆಚ್ಚು ಮಂದಿ ದೆಹಲಿಯ ಇಂಡಿಯಾ ಗೇಟ್ ಬಳಿ ಜಮಾಯಿಸಿದ್ದರು. ಆರೋಗ್ಯ ಸಂಸ್ಥೆಯ ಪ್ರಕಾರ ವಾಯು ಮಾಲಿನ್ಯ ಪ್ರತಿವರ್ಷ ಸುಮಾರು ಮಿಲಿಯನ್ ಜನರ ಬಲಿ ಪಡೆಯುತ್ತಿದೆ. ವಾಯು ಮಾಲಿನ್ಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು" ಬರೆದುಕೊಂಡಿದ್ದಾರೆ.

  ಭಾರತ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಲಿಯೊನಾರ್ಡೊ ಡಿಕಾಪ್ರಿಯೊ ಪ್ರತಿಕ್ರಿಯೆ ನೀಡುತ್ತಿರುವುದು ಇದೆ ಮೊದಲೆನಲ್ಲ. ಈ ಹಿಂದೆ ಚೆನ್ನೈ ನೀರಿನ ಸಮಸ್ಯೆಯ ಬಗ್ಗೆಯು ಮಾತನಾಡಿದ್ದರು. ಸದ್ಯ ದೆಹಲಿಯಲ್ಲಿ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಾಯು ಮಾಲಿನ್ಯದ ಮಟ್ಟ ಎಲ್ಲಿಗೆ ಮುಟ್ಟುತ್ತೊ ಗೊತ್ತಿಲ್ಲ.

  English summary
  Hollywood actor Leonardo DiCaprio react about delhi air pollution.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X