For Quick Alerts
  ALLOW NOTIFICATIONS  
  For Daily Alerts

  ಬಾಂಡ್ ಸರಣಿಗೆ ಇನ್ಮುಂದೆ ಹುಡುಗಿಯರೆ ಹೀರೋ ಆಗಲಿ: ಪಿಯರ್ಸ್ ಬ್ರಾನ್ಸನ್

  |

  ಹಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ಜೇಮ್ಸ್ ಬಾಂಡ್ ಸರಣಿಯ 25ನೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. 25ನೇ ಸರಣಿಗೆ "ನೋ ಟೈಂ ಟು ಡೈ" ಎಂದು ಟೈಟಲ್ ಇಡಲಾಗಿದೆ. ಬಾಂಡ್ ಸಿನಿ ಪ್ರಿಯರು ಸುಮಾರು ನಾಲ್ಕು ವರ್ಷದಿಂದ ಮುಂದಿನ ಸರಣಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

  ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್' | FILMIBEAT KANNADA

  ಇದರ ನಡುವೆ 1995ರಿಂದ 2002ರವರೆಗೂ ಬಾಂಡ್ ಸರಣಿಯ ನಾಯಕನಾಗಿದ್ದ ನಟ ಪಿಯರ್ಸ್ ಬ್ರಾನ್ಸನ್ ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಬಾಂಡ್ ಸರಣಿ ಬಗ್ಗೆ ಮಾತನಾಡಿರುವ ನಟ ಪಿಯರ್ಸ್, "ಬಾಂಡ್ ಸರಣಿಯಿಂದ ಹುಡುಗರು ಹೊರಬರಬೇಕು. ಮುಂದಿನ ಸರಣಿಯಲ್ಲಿ ಹುಡುಗಿಯರು ನಾಯಕಿಯಾಗಬೇಕು" ಎಂದು ಹೇಳಿದ್ದಾರೆ.

  ಜೇಮ್ಸ್ ಬಾಂಡ್ ಸೀರಿಸ್ ನ 25ನೇ ಸಿನಿಮಾ ಅನೌನ್ಸ್

  ಹೌದು, "ಕಳೆದ 40 ವರ್ಷಗಳಿಂದ ಬಾಂಡ್ ಸರಣಿಯಲ್ಲಿ ಹುಡುಗರೆ ನಾಯಕರಾಗಿ ಮಿಂಚುತ್ತಿದ್ದಾರೆ. 25ನೇ ಸರಣಿ ನಂತರ ಹುಡುಗಿಯರಿಗೆ ಅವಕಾಶ ಕೊಡಿ, ಬಾಂಡ್ ಸರಣಿ ಮತ್ತಷ್ಟು ಇಂಟ್ರಸಿಂಗ್ ಮತ್ತು ಆಕರ್ಷಕವಾಗಿರಲಿದೆ" ಎಂದು ಹೇಳಿದ್ದಾರೆ.

  ಪಿಯರ್ಸ್ ಬ್ರಾನ್ಸನ್ ನಾಲ್ಕು ಬಾಂಡ್ ಸರಣಿಯ ನಾಯಕನಾಗಿ ಮಿಂಚಿದ್ದರು. ಇವರ ನಂತರ ಡೇನಿಯಲ್ ಕ್ರೇಗ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ನಾಲ್ಕು ಸರಣಿಯಲ್ಲಿ ಮಿಂಚಿರುವ ಡೇನಿಯಲ್ ಈಗ ಐದನೆ ಸರಣಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 2015ರಲ್ಲಿ 24ನೇ ಬಾಂಡ್ ಸಿನಿಮಾ ಸ್ಪೆಕ್ಟರ್ ರಿಲೀಸ್ ಆಗಿತ್ತು. 25ನೇ ಬಾಂಡ್ ಸಿನಿಮಾ "ನೋ ಟೈಂ ಟು ಡೈ" ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗುತ್ತಿದೆ.

  English summary
  James Bond fame Hollywood actor Pierce Brosnan said that a woman should now take on James Bond next series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X