ಧನುಶ್ ಜೊತೆ ಮತ್ತೆ ನಟಿಸಲು ಕಾತರನಾಗಿದ್ದೇನೆಂದ ಹಾಲಿವುಡ್ ಸ್ಟಾರ್ ನಟ

ನಟ ಧನುಶ್ ಭಾರತ ಅತ್ಯುತ್ತಮ ನಟರಲ್ಲಿ ಒಬ್ಬರು. ತಮಿಳಿನ ಈ ನಟ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಾಸ್- ಕ್ಲಾಸ್ ಎನ್ನದೆ ಉತ್ತಮ ಕಥೆ ಹಿಂದೆ ಓಡುವ ಧನುಷ್ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಧನುಶ್‌ರ ಪ್ರತಿಭೆಗೆ ತಲೆಬಾಗಿ ಬಾಲಿವುಡ್‌ನಿಂದಲೂ ಹಲವು ಆಫರ್‌ಗಳು ಬಂದಿವೆ. ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟ ಧನುಶ್. ಇದೀಗ ಧನುಶ್, ಬಾಲಿವುಡ್ ಅನ್ನು ಮೀರಿ ಹಾಲಿವುಡ್‌ಗೆ ಕಾಲಿಟ್ಟಿದ್ದಾರೆ.

ಈಗಾಗಲೇ 'ದಿ ಎಕ್ಸ್‌ಟ್ರಾಡಿನರಿ ಜರ್ನಿ ಆಫ್ ಫಕೀರ್' ಹೆಸರಿನ ಇಂಗ್ಲೀಷ್‌ ಸಿನಿಮಾದಲ್ಲಿ ನಟಿಸಿರುವ ಧನುಶ್, ಇದೀಗ ಅಪ್ಪಟ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್'ನಲ್ಲಿ ನಟಿಸಿದ್ದಾರೆ. 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ಧನುಶ್ ಜೊತೆಗೆ ಕ್ರಿಸ್ ಇವಾನ್, ರೊನಾಲ್ಡ್ ರಾಸ್ಲಿಂಗ್ಸ್‌ ಅಂಥಹಾ ದೊಡ್ಡ ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಧನುಶ್ ಬಗ್ಗೆ ಹಾಲಿವುಡ್‌ನ ಸ್ಟಾರ್ ನಟ ಮೆಚ್ಚುಗೆಯ ಮಾತನಾಡಿದ್ದಾರೆ.

'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ಖ್ಯಾತ ನಟ ರೊನಾಲ್ಡ್ ಗೋಸ್ಲಿಂಗ್ ನಟಿಸಿದ್ದು, ಭಾರತೀಯ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರೊನಾಲ್ಡ್, ಧನುಶ್ ಅವರ ನಟನೆಯನ್ನು, ಅವರ ವ್ಯಕ್ತಿತ್ವವನ್ನು ಬಹುವಾಗಿ ಹೊಗಳಿದ್ದಾರೆ. ''ಧನುಶ್ ಒಬ್ಬ ಅದ್ಭುತವಾದ ನಟ, ಅವರೊಂದಿಗೆ ಮತ್ತೊಮ್ಮೆ ಸಿನಿಮಾದಲ್ಲಿ ನಟಿಸಲು ನಾನು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ.

ಧನುಶ್ ಒಬ್ಬ ಅದ್ಭುತ ವ್ಯಕ್ತಿ: ರೊನಾಲ್ಡ್ ಗೊಸ್ಲಿಂಗ್

ಧನುಶ್ ಒಬ್ಬ ಅದ್ಭುತ ವ್ಯಕ್ತಿ: ರೊನಾಲ್ಡ್ ಗೊಸ್ಲಿಂಗ್

''ಧನುಶ್ ಒಬ್ಬ ಅದ್ಭುತವಾದ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತವಾದ ಅನುಭವ. ಅವರೊಟ್ಟಿಗೆ ಕೆಲಸ ಮಾಡಿದ್ದು ನನಗೆ ಪೂರ್ಣ ತೃಪ್ತಿ ಆಗಲಿಲ್ಲ. ಹಾಗಾಗಿ ಅವರೊಟ್ಟಿಗೆ ಇನ್ನೊಂದು ಸಿನಿಮಾ ಮಾಡುವ ಆಸೆಯಲ್ಲಿದ್ದೇನೆ. ಬಹಳ ಶಿಸ್ತಿನ ಮನುಷ್ಯ, ಚಿತ್ರೀಕರಣದ ಸಂದರ್ಭದಲ್ಲಿ ಒಂದೂ ತಪ್ಪನ್ನು ಮಾಡಲಿಲ್ಲ. ಏನು ಕೊರಿಯಾಗ್ರಫಿ ಮಾಡಿದ್ದರೊ ಅದನ್ನು ಚೂರೂ ಸಹ ಆಚೀಚೆ ಇಲ್ಲದೆ ನಟಿಸಿದರು'' ಎಂದು ಹೊಗಳಿದರು ರೊನಾಲ್ಡ್.

ಧನುಶ್‌ ಜೊತೆ ಮತ್ತೆ ಕೆಲಸ ಮಾಡಲು ಉತ್ಸುಕ: ರೊನಾಲ್ಡ್‌

ಧನುಶ್‌ ಜೊತೆ ಮತ್ತೆ ಕೆಲಸ ಮಾಡಲು ಉತ್ಸುಕ: ರೊನಾಲ್ಡ್‌

''ಅತ್ಯುತ್ತಮ ನಟನಾಗಿರುವ ಜೊತೆಗೆ ಧನುಶ್ ಒಳ್ಳೆಯ ಹಾಸ್ಯಪ್ರಜ್ಞೆ ಇರುವ ವ್ಯಕ್ತಿ. ಅವರೊಟ್ಟಿಗೆ ಇರುವುದು ಬಹಳ ಖುಷಿಯ ವಿಷಯ. ಅವರೊಟ್ಟಿಗೆ ಇರುವುದು ಆರಾಮದಾಯಕ ಅನುಭವ. ನಾನು ಅವರ ಕಂಪೆನಿಯನ್ನು ಬಹಳ ಎಂಜಾಯ್ ಮಾಡಿದೆ. ಅವರೊಟ್ಟಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತೇನೆ'' ಎಂದಿದ್ದಾರೆ ರೊನಾಲ್ಡ್.

ಭಾರತ ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ: ರೊನಾಲ್ಡ್

ಭಾರತ ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ: ರೊನಾಲ್ಡ್

ಧನುಶ್ ಮಾತ್ರವೇ ಅಲ್ಲ, ಭಾರತೀಯ ಸಿನಿಮಾಗಳ ಬಗ್ಗೆಯೂ ಗೌರವ ಹೊಂದಿರುವ ರೊನಾಲ್ಡ್‌, ''ನಾನು ಭಾರತೀಯ ಸಿನಿಮಾ ಒಂದರಲ್ಲಿ ನಟಿಸಲು ಉತ್ಸುಕನಾಗಿದ್ದೇನೆ. ರೋಸೋ ಬ್ರದರ್ಸ್‌ಗೆ ಹೇಳುತ್ತೇನೆ ನನಗೆ ಭಾರತದಲ್ಲಿ ಒಂದು ಸಿನಿಮಾ ಹುಡುಕಿಕೊಡಿ ಎಂದು. ಅವರು ಹುಡುಕಿ ಕೊಟ್ಟರೆ ಖಂಡಿತ ನಟಿಸುತ್ತೇನೆ'' ಎಂದಿದ್ದಾರೆ ರೊನಾಲ್ಡ್ ಗೋಸ್ಲಿಂಗ್. ಅಂದಹಾಗೆ ರೋಸೋ ಸಹೋದರರು ಅವೇಂಜರ್ಸ್‌ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ದಿ ಗ್ರೇ ಮ್ಯಾನ್' ಸಿನಿಮಾ ನಿರ್ದೇಶಕ ಮಾಡಿರುವವರು ಸಹ ಅವರೇ.

ಜುಲೈ 22 ರಂದು ಬಿಡುಗಡೆ ಆಗಲಿದೆ ಸಿನಿಮಾ

ಜುಲೈ 22 ರಂದು ಬಿಡುಗಡೆ ಆಗಲಿದೆ ಸಿನಿಮಾ

ರೊನಾಲ್ಡ್‌ ಗೋಸ್ಲಿಂಗ್ ಹಾಲಿವುಡ್‌ನ ಜನಪ್ರಿಯ ನಟ. ಆಸ್ಕರ್ ವಿಜೇತ 'ಲಾ ಲಾ ಲ್ಯಾಂಡ್' ಸಿನಿಮಾ ಸೇರಿದಂತೆ, 'ದಿ ಬಿಗ್ ಶಾರ್ಟ್', 'ದಿ ನೋಟ್‌ಬುಕ್', 'ಬ್ಲೇಡ್ ರನ್ನರ್' 'ಡ್ರೈವ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ಧನುಶ್ ಜೊತೆ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್ಸ್, ರೊನಾಲ್ಡ್ ಗಾಸ್ಲಿಂಗ್ ಹಾಗೂ ಅನ್ನಾ ಡೆ, ಜೂಲಿಯಾ ಬಟರ್ಸ್ ಇನ್ನೂ ಹಲವು ಖ್ಯಾತನಾಮರು ನಟಿಸಿದ್ದಾರೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಜುಲೈ 22 ರಂದು ಬಿಡುಗಡೆ ಆಗಲಿದೆ.

Recommended Video

Vikrant Rona | Anup Bhandari |Salman Khan| ಎಸ್.ಪಿ.ಬಾಲಸುಬ್ರಹ್ಮಣ್ಯಂರನ್ನು ನೆನೆದ ಸಲ್ಮಾನ್ ಖಾನ್ *PressMeet

More from Filmibeat

English summary
Hollywood actor Ronald Gosling praised Tamil star actor Dhanush. Ronald Gosling and Dhanush acted in The Gray Man Hollywood movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X