For Quick Alerts
  ALLOW NOTIFICATIONS  
  For Daily Alerts

  ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿ

  |

  ಹಾಲಿವುಡ್‌ನ ಖ್ಯಾತ ನಟಿ ಎನ್ ಹಿಚ್ ಕಾರು ಅಪಘಾತಕ್ಕೀಡಾಗಿದ್ದು, ನಟಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರು ಬದುಕುಳಿಯುವುದು ಕಷ್ಟವೆಂದು ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

  ನಟಿ ಎನ್ ಹಿಚ್ ಚಲಾಯಿಸುತ್ತಿದ್ದ ಕಾರು ಕಳೆದ ವಾರ ಲಾಸ್ ಎಂಜಲಿಸ್‌ನಲ್ಲಿ ಅಪಘಾತಕ್ಕೀಡಾಗಿದೆ. ವಿಪರೀತ ವೇಗದಲ್ಲಿ ಕಾರು ಚಲಾಯಿಸಿದ್ದ ಎನ್ ಹಿಚ್ ಕಾರನ್ನು ಮನೆಯೊಂದಕ್ಕೆ ಗುದ್ದಿದ್ದರು. ಮನೆಯ ಒಳಗಿನವರಿಗೆ ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲವಾದರು ಕಾರು ಗುದ್ದಿದ ಕೂಡಲೇ ದಟ್ಟ ಬೆಂಕಿ ಕಾರನ್ನು ಅವರಿಸಿಕೊಂಡಿತ್ತು.

  ಸ್ಥಳೀಯರು ನಟಿಗೆ ಸಹಾಯ ಮಾಡಲು ಯತ್ನಿಸಿದರಾದರೂ ಬೆಂಕಿ ಆವರಿಸಿದ ಕಾರಣದಿಂದ ಸಹಾಯ ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ನಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸುಟ್ಟಗಾಯಗಳಾಗಿದ್ದರೂ ಆಶ್ಚರ್ಯಕರ ರೀತಿಯಲ್ಲಿ ನಟಿ ಇನ್ನೂ ಬದುಕಿದ್ದರು.

  ಆದರೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ನಟಿ ಕೋಮಾಕ್ಕೆ ಜಾರಿದ್ದಾರೆ. ಅವರು ಬದುಕುಳಿಯುವುದು ಬಹುತೇಕ ಅಸಂಭವ ಎಂದು ವೈದ್ಯರು ಹೇಳಿದ್ದು, ಅವರ ಅಂಗಾಂಗ ದಾನಕ್ಕೆ ಕುಟುಂಬ ಸದಸ್ಯರು ಯೋಜಿಸಿದ್ದಾರೆ.

  ನಟಿ ಎನ್ ಹಿಚ್‌ರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ನಟಿಯು ಕೊಕೇನ್ ಮಾದಕ ವಸ್ತು ಸೇವಿಸಿ ಕಾರು ಚಲಾಯಿಸುತ್ತಿದ್ದುದಾಗಿ ಖಾತ್ರಿಯಾಗಿದೆ. ಆರಂಭದಲ್ಲಿ ಎನ್, ಮದ್ಯಪಾನ ಸೇವಿಸಿ ಕಾರು ಚಲಾಯಿಸಿದ್ದಾರೆ ಎನ್ನಲಾಗಿತ್ತು.

  ಎನ್ ಹಿಚ್ ಹಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. 'ಸೈಕೊ' (1998), 'ಸಿಕ್ಸ್ ಡೇಸ್, ಸೆವೆನ್ ನೈಟ್ಸ್' ಸೇರಿದಂತೆ ಹಲವು ಜನಪ್ರಿಯ ಹಾಲಿವುಡ್ ಸಿನಿಮಾಗಳು, ಟಿವಿ ಶೋಗಳಲ್ಲಿ ಎನ್ ಹಿಚ್ ನಟಿಸಿದ್ದಾರೆ. ಜನಪ್ರಿಯ ಟಿವಿ ಟಾಕ್ ಶೋ ನಿರೂಪಕಿ ಎಲೆನ್ ಡಿ ಜನರಸ್‌ ಅವರ ಗರ್ಲ್‌ಫ್ರೆಂಡ್ ಸಹ ಆಗಿದ್ದರು ಎನ್ ಆದರೆ ಈ ಜೋಡಿ ಬ್ರೇಕ್‌ಅಪ್ ಮಾಡಿಕೊಂಡಿತು.

  ಆ ಬಳಿಕ ಕ್ಯಾಮೆರಾಮನ್ ಒಬ್ಬರನ್ನು ವಿವಾಹವಾದ ಎನ್ ಹಿಚ್ ಬಳಿಕ ಅವರಿಂದಲೂ ವಿಚ್ಛೇಧನ ಪಡೆದರು. ಬಳಿಕ 2009 ರಲ್ಲಿ ನಟ ಜೇಮ್ಸ್ ಟಪ್ಪರ್ ಅನ್ನು ಎನ್ ಹಿಚ್ ವಿವಾಹವಾದರು. 2018 ರಲ್ಲಿ ಈ ಜೋಡಿ ಬೇರ್ಪಟ್ಟಿತು. ಎನ್ ಹಿಚ್‌ರ ಅಪಘಾತದ ಕುರಿತಂತೆ ಹಲವು ಹಾಲಿವುಡ್ ಸೆಲೆಬ್ರಿಟಿಗಳು ವಿಷಾಧ ವ್ಯಕ್ತಪಡಿಸಿದ್ದಾರೆ. ಆಕೆಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

  Recommended Video

  ಗುರೂಜಿಯಾ ಹೊಸ ಅವತಾರ ನೋಡಿದ್ರೆ ಶಾಕ್‌ ಆಗೋದು ಪಕ್ಕಾ | Bigg boss OTT *Bigg Boss
  English summary
  Hollywood actress, Tv star Anne Heche met with car accident. She is in critical health condition. Doctors says she can not recover.
  Friday, August 12, 2022, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X