For Quick Alerts
  ALLOW NOTIFICATIONS  
  For Daily Alerts

  ಪಾತ್ರಕ್ಕಾಗಿ ಬೆತ್ತಲಾದ ನಟಿಗೆ ನಿರ್ಮಾಪಕರಿಂದ ಒತ್ತಡ: ಬೇಸರ ಹೊರಹಾಕಿದ ನಾಯಕಿ

  |

  ಪಾತ್ರಕ್ಕಾಗಿ ಕೆಲವು ಕಲಾವಿದರು ಏನು ಬೇಕಾದರು ಮಾಡಲು ಸಿದ್ಧರಾಗಿರುತ್ತಾರೆ. ಇತ್ತೀಚಿಗೆ ಹಾಲಿವುಡ್ ಖ್ಯಾತ ನಟಿ ಎಮಿಲಿಯಾ ಕ್ಲಾರ್ಕ್ ಪಾತ್ರಕ್ಕಾಗಿ ಬೆತ್ತಲಾಗಿದ್ದರು. ಈ ವಿಚಾರವೆ ಈಗ ಆಕೆಗೆ ಮುಳುವಾಗಿ ಕಾಡುತ್ತಿದೆ. ಹೌದು, ಒಮ್ಮೆ ಬೆತ್ತಲಾದ ನಟಿಗೆ ನಿರ್ದೇಶಕರು ಮತ್ತು ನಿರ್ಮಾಪಕರು ಮತ್ತೆ ಮತ್ತೆ ಬೆತ್ತಲಾಗುವಂತೆ ಪೀಡಿಸುತ್ತಿದ್ದಾರಂತೆ.

  ಹಾಲಿವುಡ್ ನ ಖ್ಯಾತ ಸೀರಿಸ್ 'ಗೇಮ್ ಆಫ್ ಥ್ರೋನ್' ಮೂಲಕ ಖ್ಯಾತಿಗಳಿಸಿದ್ದ ನಟಿ ಎಮಿಲಿಯಾ ಕ್ಲಾರ್ಕ್ ಸಿನಿರಸಿಕರ ಮನ ಸೆಳೆದಿದ್ದರು. ಡ್ರ್ಯಾಗನ್ ಗಳ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಕ್ಲಾರ್ಕ್ ಕೆಲವು ದೃಶ್ಯಗಳಲ್ಲಿ ಬೆತ್ತಲಾಗಿ ಕಾಣಿಸಿಕೊಂಡು ಯುವಕರ ನಿದ್ದೆಗೆಡಿಸಿದ್ದರು. ಗೇಮ್ ಆಫ್ ಥ್ರೋನ್ ನಂತಹ ಪ್ರಸಿದ್ಧ ಸೀರಿಸ್ ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು, ಅದ್ಭುತವಾಗಿ ನಟಿಸಿ ಮೆಚ್ಚುಗೆ ಪಡೆದಿದ್ದ ಎಮಿಲಿಯಾ ಈಗ ಮತ್ತೆ ಮತ್ತೆ ಬೆತ್ತಲಾಗುವಂತಾಗಿದೆ.

  ಎಡಿಟೆಡ್ ಫೋಟೋಗಳನ್ನೇ ಹಾಕುತ್ತಿದ್ದ ಬೆಡಗಿ: ನೆಟ್ಟಿಗರಿಂದ ಮಂಗಳಾರತಿಎಡಿಟೆಡ್ ಫೋಟೋಗಳನ್ನೇ ಹಾಕುತ್ತಿದ್ದ ಬೆಡಗಿ: ನೆಟ್ಟಿಗರಿಂದ ಮಂಗಳಾರತಿ

  ಇದಕ್ಕೆ ಕಾರಣ ನಿರ್ಮಾಪಕರು ಮತ್ತು ನಿರ್ದೇಶಕರು. ಈ ಬಗ್ಗೆ ಮೌನ ಮುರಿದಿರುವ ಎಮಿಲಿಯಾ, ಒಮ್ಮೆ ಬೆತ್ತಲಾದ ಕಾರಣ, ನಿರ್ದೇಶಕರು ಸುಖಾಸುಮ್ಮನೆ ಬೆತ್ತಲಾಗುವ ಪಾತ್ರಗಳನ್ನು ಇಟ್ಟು ಆಫರ್ ಮಾಡುತ್ತಿದ್ದಾರಂತೆ. ಈ ವಿಚಾರವಾಗಿ ಬೇಸರ ಹೊರಹಾಕಿದ್ದಾರೆ ನಟಿ ಎಮಿಲಿಯಾ.

  "ನಿರ್ದೇಶಕರು ಸಿನಿಮಾಗಾಗಿ ಬೆತ್ತಲಾಗುವಂತೆ ಹೇಳುತ್ತಿದ್ದಾರೆ. ಆದರೆ ಅಂತಹ ದೃಶ್ಯಗಳು ಸಿನಿಮಾಗೆ ಅವಶ್ಯಕತೆ ಇದೆಯೋ ಇಲ್ಲವೊ ಗೊತ್ತಿಲ್ಲ, ಆದರೆ ಬೆತ್ತಲೆ ದೃಶ್ಯಗಳನ್ನು ತುರುಕುತ್ತಿದ್ದಾರೆ. 'ಗೇಮ್ ಆಫ್ ಥ್ರೋನ್' ನಲ್ಲಿ ನಟಿಸುವ ಅವಕಾಶ ಸಿಕ್ಕಾಗ ತುಂಬಾ ಸಂತಸದಿಂದ ಒಪ್ಪಿಕೊಂಡೆ. ಆ ಪಾತ್ರಕ್ಕೆ ಬೆತ್ತಲಾಗುವ ಅವಶ್ಯಕತೆ ಇತ್ತು ಹಾಗಾಗಿ ಮಾಡಿದೆ. ಆದರೀಗ ಎಲ್ಲಾ ನಿರ್ದೇಶಕರು ಬೆತ್ತಲಾಗುವಂತಹ ಪಾತ್ರಗಳನ್ನು ನೀಡುತ್ತಿದ್ದಾರೆ" ಎಂದು ಬೇಸರ ಹೊರಹಾಕಿದ್ದಾರೆ.

  English summary
  Hollywood famous actress Emilia Clarke upset from producer for pressured her to do nude scenes after ‘Game of Thrones’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X