»   » 18ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡು ಖಿನ್ನಳಾದ ನಟಿ

18ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡು ಖಿನ್ನಳಾದ ನಟಿ

By: Sonu Gowda
Subscribe to Filmibeat Kannada

ಹಾಲಿವುಡ್ ನಟಿಯರು ಹೆಚ್ಚಾಗಿ ತಮ್ಮ 'ವರ್ಜಿನಿಟಿ' (ಕನ್ಯತ್ವ) ವನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿರುತ್ತಾರೆ. ಹೆಚ್ಚಾಗಿ ಕೆಲವು ಹೇಳಿಕೊಳ್ಳುತ್ತಾರೆ, ಆದರೆ ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ.

ಇದೀಗ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಮ್ಮ ವರ್ಜಿನಿಟಿಯನ್ನು ಕಳೆದುಕೊಂಡ ಕಥೆಯನ್ನು ಹಾಲಿವುಡ್ ನಟಿ ಕಾರಾ ಡೆಲೆವೀನ್ (Cara Delevingne) ಅವರು ಬಿಚ್ಚಿಟ್ಟಿದ್ದಾರೆ. ಬರೀ 18 ವರ್ಷದವರಾಗಿರುವಾಗಲೇ ನಟಿ ಕಮ್ ಮಾಡೆಲ್ ಕಾರಾ ಅವರು ತಮ್ಮ ವರ್ಜಿನಿಟಿಯನ್ನು ಕಳೆದುಕೊಂಡಿದ್ದರಂತೆ.[ಧುಮ್ಮುಕ್ಕಿದ ಇಂಗ್ಲಿಷ್ ಸೂಪರ್ ಮಾಡೆಲ್ ಸೌಂದರ್ಯ]

Hollywood Actress-Model Cara Delevingne lost her virginity at 18

ಸದ್ಯಕ್ಕೆ 23ರ ಹರೆಯದ ಕಾರಾ ಅವರು ತಮ್ಮ ಹಳೇ ಕಥೆಯನ್ನು ನಿಯತಕಾಲಿಕವೊಂದಕ್ಕೆ ಹೇಳಿಕೊಂಡಿದ್ದಾರೆ. ಸಿಂಗರ್ ಹಾಗೂ ಗೀತರಚನಕಾರರಾಗಿದ್ದ ವಿನ್ಸಂಟ್ ಎಂಬುವವರ ಜೊತೆ ಡೇಟಿಂಗ್ ಮಾಡುತ್ತಿದ್ದ ಕಾರಾ ಡೆಲೆವೀನ್ ಅವರು ತಮ್ಮ 18ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡು ಸಾಕಷ್ಟು ಸಮಸ್ಯೆ ಎದುರಿಸಿದ್ರಂತೆ.

ಇದರಿಂದಾಗಿ ತುಂಬಾ ಖಿನ್ನತೆಯಿಂದ ಬಳಲುತ್ತಿದ್ದು, "ಇದರಿಂದ ಹೊರ ಬರಲು ಮಾತ್ರೆಗಳನ್ನು ಸೇವಿಸಿ ಒಂದು ಬಾರಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದೆ" ಎಂದು ಕಾರಾ ಡೆಲೆವೀನ್ ತಿಳಿಸಿದ್ದಾರೆ.

Hollywood Actress-Model Cara Delevingne lost her virginity at 18

"ಈ ಘಟನೆ ನಡೆದ ನಂತರ ನಾನು ವಿನ್ಸೆಂಟ್ ನನ್ನು ದೂರ ಮಾಡಿ ದ್ವೇಷಿಸಲು ಆರಂಭಿಸಿದೆ. ಈ ನೋವಿನಿಂದ ಹಾಗೂ ಖಿನ್ನತೆಯಿಂದ ಹೊರಬರಲು ಸತತ ಎರಡು ವರ್ಷಗಳ ಕಾಲ ಮಾತ್ರೆ ತೆಗೆದುಕೊಂಡೆ" ಎಂದು ನಟಿ ಕಮ್ ರೂಪದರ್ಶಿ ಕಾರಾ ಅವರು ಮನಬಿಚ್ಚಿ ಹೇಳಿಕೊಂಡಿದ್ದಾರೆ.

Hollywood Actress-Model Cara Delevingne lost her virginity at 18

'ನನ್ನ ವರ್ಜಿನಿಟಿ ಕಳೆದುಕೊಂಡಿದ್ದ ವೇಳೆ 1 ವಾರಗಳ ಕಾಲ ನನ್ನ ಭಾವನೆಗಳು ಸಹಜ ಸ್ಥಿತಿಯಲ್ಲಿ ಇರಲಿಲ್ಲ. ಜೋರಾಗಿ ಅಳುತ್ತಿದ್ದೆ, ಸುಮ್ಮ-ಸುಮ್ಮನೆ ನಗುತ್ತಿದ್ದೆ, ಒಟ್ನಲ್ಲಿ ನಾನೇನೂ ಮಾಡುತ್ತಿದ್ದೇನೆ, ಅನ್ನೋ ಪರಿಜ್ಞಾನವೇ ನನಗಿರಲಿಲ್ಲ'.

Hollywood Actress-Model Cara Delevingne lost her virginity at 18

"ಆದಾದ ನಂತರ ನಾನೇ ಮೆಲ್ಲ-ಮೆಲ್ಲನೇ ಸುಧಾರಿಸಿಕೊಂಡು, ಆತ್ಮವಿಶ್ವಾಸ ತಂದುಕೊಂಡು ಗಟ್ಟಿಯಾದೆ. ಜೊತೆಗೆ ಬದುಕುವುದು ಹೇಗೆ ಎಂಬುದನ್ನು ಕಲಿತೆ' ಎಂದು ಕಾರಾ ಅವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

English summary
Model-turned-actress Cara Delevingne has revealed that she lost her virginity at the age of 18. After she quit taking the anti-depressants she had been on for 2 years.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada