ಬೋಟ್ ನಲ್ಲಿ ತೆರಳಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ನಾಪತ್ತೆ
ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ನಾಪತ್ತೆಯಾಗಿದ್ದಾರೆ. 4 ವರ್ಷದ ಪುತ್ರ ಜೋಸಿ ಜೊತೆ ಬೋಟ್ ನಲ್ಲಿ ತೆರಳಿದ್ದ ನಟಿ ನಯಾ ಕಣ್ಮರೆಯಾಗಿದ್ದಾರೆ. ನಯಾ ತೆರಳಿದ್ದ ಬೋಟ್ ಮತ್ತು ಪುತ್ರ ಸಿಕ್ಕಿದ್ದಾರೆ. ನಯಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
Recommended Video
ಜುಲೈ 7 ಮಧ್ಯಾಹ್ನ ನಟಿ ನಯಾ ಪುತ್ರನನ್ನು ಕರೆದುಕೊಂಡು ಬಾಡಿಗೆ ಬೋಟ್ ನಲ್ಲಿ ಹೊರಟಿದ್ದರು. ಆದರೆ ಸರಿಯಾದ ಸಮಯಕ್ಕೆ ವಾಪಸ್ ಆಗದ ಹಿನ್ನಲೆ ಸರೋವರದ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆಗ ಕ್ಯಾಲಿಫೋರ್ನಿಯಾದ ಪಿರು ಸರೋವರದ ಮಧ್ಯೆ ಬೋಟ್ ಪತ್ತೆಯಾಗಿದೆ. ಬೋಟ್ ನಲ್ಲಿ ಪುತ್ರ ಏಕಾಂಗಿಯಾಗಿ ತೇಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಪುತ್ರನನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಆದರೆ ನಯಾ ಇನ್ನೂ ಪತ್ತೆಯಾಗಿಲ್ಲ. ಜಲಾಶಯದಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೆ ನಟಿಯನ್ನು ಹುಡುಕಲಾಗುತ್ತಿದ್ದು, ರಾತ್ರಿಯೆಲ್ಲ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಆದರೂ ನಟಿ ಪತ್ತೆಯಾಗಿಲ್ಲ. ಮಗನೊಂದಿಗೆ ನಯಾ ಸರೋವರದಲ್ಲಿ ಈಜುತ್ತಿದ್ದರು ಎಂದು ಹೇಳಲಾಗುತ್ತಿದೆ.

ನಟಿ ನಯಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜೊತೆಗೆ ಗ್ಲೀ ಎನ್ನುವ ಸಂಗೀತ ಸರಣಿ ಮೂಲಕ ಪ್ರಖ್ಯಾತಿಗಳಿಸಿದ್ದರು. ನಯಾ ಕೊನೆಯದಾಗಿ ಜುಲೈ 7ರಂದು ಪುತ್ರನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ "ನಾವಿಬ್ಬರು" ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.


Click it and Unblock the Notifications











