For Quick Alerts
  ALLOW NOTIFICATIONS  
  For Daily Alerts

  ಕೊರೊನಾ: ಸಾವಿನ ಕದತಟ್ಟಿ ಹಿಂದಿರುಗಿದ ಹಾಲಿವುಡ್ ನಟಿಯ ಬಹಿರಂಗ ಪತ್ರ

  |

  ಕೊರೊನಾ ಯಾರನ್ನೂ ಬಿಟ್ಟಿಲ್ಲ. ಬ್ರಿಟನ್ ರಾಜಾ ಚಾರ್ಲ್ಸ್‌ ಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಲಿವುಡ್‌ ಸೆಲಿಬ್ರಿಟಿಗಳಿಗೂ ಹಲವರಿಗೆ ಕೊರೊನಾ ಪಾಸಿಟಿವ್ ಆಗಿದೆ.

  ಖ್ಯಾತ ಹಾಲಿವುಡ್ ನಟಿ ಓಲ್ಗಾ ಕುರಿಲಿಂಕೋ ಮಾರ್ಚ್ 16 ರಂದು ಕೊರೊನಾ ಧೃಡವಾಗಿತ್ತು. ಆಕೆಯನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ಓಲ್ಗಾ ಗೆ ಕೊರೊನಾ ಧೃಡವಾಗಿದ್ದರಿಂದ ಅಭಿಮಾನಿಗಳು ಆಘಾತವ್ಯಕ್ತಪಡಿಸಿದ್ದರು.

  ಆದರೆ ಒಂದೇ ವಾರದಲ್ಲಿ ಓಲ್ಗಾ ಕುರಿಲಿಂಕೋ ಕೊರೊನಾದಿಂದ ಮುಕ್ತಿ ಪಡೆದಿದ್ದಾರೆ. ಹೌದು ಕೇವಲ ಕೆಲವೇ ದಿನದಲ್ಲಿ ಅವರು ಕೊರೊನಾ ದಿಂದ ಚೇತರಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

  ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಓಲ್ಗಾ, 'ನಾನು ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ'' ಎಂದಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಮಗನೊಂದಿಗಿನ ಚಿತ್ರವನ್ನು ಸಹ ಅಪ್‌ಲೋಡ್ ಮಾಡಿದ್ದಾರೆ.

  ಅನುಭವ ಹಂಚಿಕೊಂಡಿರುವ ಓಲ್ಗಾ

  ಅನುಭವ ಹಂಚಿಕೊಂಡಿರುವ ಓಲ್ಗಾ

  ಚಿತ್ರದೊಂದಿಗೆ ಕೊರೊನಾ ಪೀಡಿತೆಯಾಗಿದ್ದಾಗಿನ ಅನುಭವನದ ಬಗ್ಗೆಯೂ ಬರೆದುಕೊಂಡಿರುವ ಓಲ್ಗಾ, ''ಮೊದಲ ವಾರ ವಿಪರೀತ ಜ್ವರ ಮತ್ತು ವಿಪರೀತ ತಲೆನೋವು ಇತ್ತು. ವಿಪರೀತವಾದ ತಲೆನೋವು ಕಾಡಿಸಿಬಿಟ್ಟಿತು ಎಂದು ಅವರು ಬರೆದುಕೊಂಡಿದ್ದಾರೆ.

  ಎರಡನೇ ವಾರಕ್ಕೆ ಕೆಮ್ಮು ಆರಂಭ

  ಎರಡನೇ ವಾರಕ್ಕೆ ಕೆಮ್ಮು ಆರಂಭ

  ಎರಡನೇ ವಾರ ಪ್ರಾರಂಭವಾಗುವ ವೇಳೆಗೆ ಕೆಮ್ಮು ಬಂದಿತು. ವಿಪರೀತ ಸುಸ್ತಾಗುತ್ತಿತ್ತು. ಆದರೆ ಎರಡನೇ ವಾರ ಅಂತ್ಯವಾಗುವ ವೇಳೆಗೆ ಪೂರ್ಣ ಹುಷಾರಾಗಿಬಿಟ್ಟೆ ಎಂದು ನಟಿ ಬರೆದಿದ್ದಾರೆ. ಕೊರೊನಾ ನೆಗೆಟಿವ್ ಬಂದ ಮೇಲೂ ಕೆಲ ದಿನ ಬೆಳಗಿನ ಸಮಯ ಕೆಮ್ಮು ಬರುತ್ತದೆ ಆದರೆ ನಂತರ ಬರುವುದಿಲ್ಲ. ಹುಷಾರಾದ ಮೇಲೆ ಮಗನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

  ಯಾವುದೇ ಚಿಕಿತ್ಸೆ ಹೇಳಿರಲಿಲ್ಲ ವೈದ್ಯರು

  ಯಾವುದೇ ಚಿಕಿತ್ಸೆ ಹೇಳಿರಲಿಲ್ಲ ವೈದ್ಯರು

  ಮತ್ತೊಂದು ಪೋಸ್ಟ್‌ನಲ್ಲಿ ತಮ್ಮ ಖಾಯಿಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ವೈದ್ಯರು ನನಗೆ ಯಾವುದೇ ಚಿಕಿತ್ಸೆ ನೀಡಲಿಲ್ಲ, ಬದಲಿಗೆ ಜ್ವರ ಹಾಗೂ ಮೈ-ಕೈ ನೋವು ಹೆಚ್ಚಾದರೆ ಪ್ಯಾರೆಸಿಟಮಾಲ್‌ ತೆಗೆದುಕೊಳ್ಳುವಂತೆ ಹೇಳಿದ್ದರು. ನಾನು ಹಾಗೆಯೇ ಮಾಡಿದೆ. ಜೊತೆಗೆ ವಿಟಮಿನ್ಸ್, ಸಪ್ಲಿಮೆಂಟ್ಸ್ ತೆಗೆದುಕೊಂಡೆ, ನೆನಪಿರಲಿ ಇವು ಕೊರೊನಾ ವನ್ನು ಗುಣಪಡಿಸುವುದಿಲ್ಲ ಬದಲಿಗೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆಯಷ್ಟೆ ಎಂದಿದ್ದಾರೆ ನಟಿ.

  ಆಸ್ಪತ್ರೆ ಪ್ರವೇಶ ಸಹ ದೊರೆತಿರಲಿಲ್ಲ ನಟಿಗೆ

  ಆಸ್ಪತ್ರೆ ಪ್ರವೇಶ ಸಹ ದೊರೆತಿರಲಿಲ್ಲ ನಟಿಗೆ

  ಓಲ್ಗಾ ಗೆ 102 ಫ್ಯಾರನೈಟ್ ಜ್ವರವಿದ್ದರೂ ಸಹ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಿಲ್ಲವಂತೆ, ಆಸ್ಪತ್ರೆಯ ಬೆಡ್‌ಗಳು ರೋಗಿಗಳಿಂದ ತುಂಬಿ ಹೋಗಿದ್ದ ಕಾರಣ ಓಲ್ಗಾ ಗೆ ಬೆಡ್ ನಿರಾಕರಿಸಲಾಯಿತಂತೆ. ಮನೆಯಲ್ಲಿದ್ದುಕೊಂಡೆ ಚಿಕಿತ್ಸೆ ಪಡೆದುಕೊಂಡರಂತೆ ಓಲ್ಗಾ.

  ಹಲವು ಖ್ಯಾತ ಸಿನಿಮಾಗಳಲ್ಲಿ ಮಾಡಿದ್ದಾರೆ

  ಹಲವು ಖ್ಯಾತ ಸಿನಿಮಾಗಳಲ್ಲಿ ಮಾಡಿದ್ದಾರೆ

  ನಲವತ್ತು ವರ್ಷದ ಓಲ್ಗಾ ಹಿಟ್ ಮ್ಯಾನ್, ಕ್ವಾಂಟಮ್ ಆಫ್ ಸೋಲ್ಸ್, ಮ್ಯಾಕ್ಸ್ ಪೇಯ್ನ್, ಸೆವೆನ್ ಸೈಕೋಪಾಥ್ಸ್, ಮುಮೆಂಟಮ್, ಜಾನಿ ಇಂಗ್ಲಿಷ್, ದಿ ಎಂಪರರ್ ಆಫ್ ಪ್ಯಾರಿಸ್, ದಿ ರೂಂ ಇನ್ನೂ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕ್ಷನ್ ಚಿತ್ರಗಳಿಗೆ ಇವರು ಖ್ಯಾತರು.

  English summary
  Bond Movie actress Olga Kurylenko tested positive for coronavirus last Monday. Now she said that she is completely recovered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X