ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವೆ ? ಕನ್ನಡಿಗ ರವಿ ಬಸ್ರೂರ್ ಸಂಗೀತ ಕದ್ದ ಹಾಲಿವುಡ್ ಮಂದಿ?

ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು.. ಕೊರಿಯನ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ಚಿತ್ರ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ. ಇನ್ನು ಕೆಲವರಲ್ಲಿ ಎಷ್ಟು ಧೈರ್ಯ ಇರುತ್ತೆ ಅಂದರೆ ಕದ್ದು ಚಿತ್ರ ಮಾಡಿದ್ದು ಅಲ್ಲದೆ....

ಆ ಚಿತ್ರವನ್ನು ಅನೇಕ ಪ್ರಶಸ್ತಿಗಳಿಗೆ ಕಳಿಸುತ್ತಾರೆ. ಚಿತ್ರೋತ್ಸವದ ಆಯ್ಕೆ ಸಮಿತಿ ಮುಂದೆ ಕಳಿಸುತ್ತಾರೆ. ಸದ್ಯ.. ಈ ರೋಗ ಹಾಲಿವುಡ್‌ನವರಿಗೆ ಕೂಡ ಅಮರಿಕೊಂಡಂತೆ ಇದೆ.

Hollywood Caught Fans Claim The Lost Bus Copied Prabhas Blockbuster Salaar BGM

ಹೆಮ್ಮೆಯ ವಿಚಾರ ಅಂದರೆ ಈ ಹಾಲಿವುಡ್‌ನವರಿಗೆ ಬೇರೆ ಯಾರ ಚಿತ್ರದ ಮೇಲೂ ಕಣ್ಣು ಬಿದ್ದಿಲ್ಲ. ಭಾರತದ ಬೇರೆ ಯಾರ ಸಂಗೀತ ನಿರ್ದೇಶಕರು ನುಡಿಸಿದ ಸಂಗೀತ ಕೂಡ ಇಷ್ಟ ಆಗಿಲ್ಲ. ಬದಲಿಗೆ ಇವರ ಕಣ್ಣು ಬಿದ್ದಿದ್ದು ಕನ್ನಡದ ನಿರ್ದೇಶಕನ ಕಲಾಕೃತಿಯ ಮೇಲೆ. ಕನ್ನಡದ ಸಂಗೀತ ನಿರ್ದೇಶಕನ ಸಂಗೀತದ ಮೇಲೆ.

ಹೌದು, ಅಸಲಿಗೆ ಹಾಲಿವುಡ್‌ನಲ್ಲಿ '' ದಿ ಲಾಸ್ಟ್ ಬಸ್'' ಎಂಬ ಚಿತ್ರ ಕಳೆದ ಸೆಪ್ಟೆಂಬರ್ 19ರಂದು ಆಯ್ದ ಕೆಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದು. ಮ್ಯಾಥ್ಯೂ ಮೆಕಾನಾಘೆ, ಅಮೆರಿಕಾ ಫೆರೇರಾ, ಯೂಲ್ ವಾಜ್ಕ್ವೆಜ್ ಮತ್ತು ಆಶ್ಲಿ ಅಟ್ಕಿನ್ಸನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪೌಲ್ ಗ್ರೀನ್‌ಗ್ರಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯ ಈ ಚಿತ್ರ ಆಪಲ್ ಟಿವಿ+ ನಲ್ಲಿ ಪ್ರಸಾರವಾಗುತ್ತಿದೆ.

ಹೀಗೆ ಪ್ರಸಾರವಾಗುತ್ತಿರುವ ಈ ಚಿತ್ರದ ಸಂಗೀತ ಪ್ರಶಾಂತ್ ನೀಲ್ ನಿರ್ದೇಶನದ ''ಸಲಾರ್ -ಭಾಗ 1''ರ ಯಥಾವತ್ತು ನಕಲು ಎನ್ನುವ ಅನುಮಾನ ಹಲವರನ್ನು ಈಗ ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ.

ಈ ಚಿತ್ರದ ಎರಡು ಹಾಡು ಮತ್ತು ಹಿನ್ನೆಲೆ ಸಂಗೀತ ಸಲಾರ್ ಚಿತ್ರದ್ದೇ ಎಂಬ ವಾದವನ್ನು ಸದ್ಯ ಹಲವರು ಮಾಡುತ್ತಿದ್ದು ಈ ಚಿತ್ರದ ಪ್ರೋಮೊದಲ್ಲಿ 1;13ಕ್ಕೆ ಬರುವ ಸಂಗೀತವನ್ನು ಉಲ್ಲೇಖ ಮಾಡುತ್ತಿದ್ದಾರೆ. ಇದಲ್ಲದೇ 1;34 ಮತ್ತು 1;22 ಸೆಕೆಂಡ್‌ಗೆ ಬರುವ ಹಿನ್ನೆಲೆ ಸಂಗೀತವನ್ನು ಕೂಡ ಹೋಲಿಕೆ ಮಾಡುತ್ತಿದ್ದಾರೆ.

Hollywood Caught Fans Claim The Lost Bus Copied Prabhas Blockbuster Salaar BGM

ಕೃತಿಚೌರ್ಯದ ಈ ಆರೋಪದ ಕುರಿತು ''ದಿ ಲಾಸ್ಟ್ ಬಸ್'' ಚಿತ್ರತಂಡ ಸದ್ಯಕ್ಕೆ ಇನ್ನೂ ಯಾವ ಸ್ಪಷ್ಟೀಕರಣ ನೀಡದಿದ್ದರೂ ಕೂಡ ಹಲವರು ಹಾಲಿವುಡ್‌ನವರ ಈ ನಡೆಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮತ್ತೂ ಕೆಲವರು ಹಿಂದೆ ಎಲ್ಲಾ ಭಾರತದ ಚಿತ್ರಗಳಲ್ಲಿ ಹಾಲಿವುಡ್ ನೆರಳಿರುತ್ತಿತ್ತು. ಆದರೆ ಈಗ ಹಾಲಿವುಡ್‌ ಚಿತ್ರದಲ್ಲಿ ಭಾರತದ ಸಿನಿಮಾ ಅದರಲ್ಲಿಯೂ ಕನ್ನಡಿಗರು ತೆಲುಗಿನಲ್ಲಿ ಮಾಡಿದ ''ಸಲಾರ್'' ಚಿತ್ರದ ಮ್ಯೂಸಿಕ್‌ನ ಬಳಸಲಾಗಿದೆ ಅಂದರೆ ಅದು ಸಾಮಾನ್ಯ ಮಾತಲ್ಲ. ರವಿ ಬಸ್ರೂರ್ ಅವರ ಸಾಧನೆಗೆ ಹಿಡಿದ ಕೈಗನ್ನಡಿ ಇದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಹೊಂಬಾಳೆ ಸಂಸ್ಥೆಯಾಗಲಿ ಅಥವಾ ಪ್ರಶಾಂತ್ ನೀಲ್ ಮತ್ತು ರವಿ ಬಸ್ರೂರ್ ಆಗಲಿ ಈ ವಿಚಾರದ ಕುರಿತು ಸದ್ಯ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ನಿರ್ದೇಶನದ ''ವೀರಚಂದ್ರಹಾಸ'' ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ತೆಲುಗು ಮಾಧ್ಯಮಗಳಿಗೆ ರವಿ ಬಸ್ರೂರ್ ಸಂದರ್ಶನ ನೀಡಿದ್ದರು.

ಈ ಸಮಯದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದ ರವಿ ಬಸ್ರೂರ್ ''ಸಲಾರ್'' ಚಿತ್ರ ಬಿಡುಗಡೆಯಾದ ನಂತರದಿಂದ ಹಾಲಿವುಡ್‌ನಿಂದ ನನಗೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಅಮೆರಿಕ ಪ್ರೊಡಕ್ಷನ್ ಹೌಸ್​ಗಳಿಂದ 3-4 ಫೋನ್​ಗಳು ಬಂದಿರುವುದಾಗಿ ಹೇಳಿದ್ದರು. ಈಗ ನೋಡಿದರೆ ಹೇಳದೇ ಕೇಳದೇ ಹಾಲಿವುಡ್‌ನವರು ರವಿ ಬಸ್ರೂರ್ ಅವರ ಸಂಗೀತವನ್ನು ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ರವಿ ಬಸ್ರೂರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Hollywood's The Lost Bus is under fire for allegedly copying the intense background music from Prabhas' massive hit, Salaar. See the viral clips and the stunning moments where the scores overlap.
Read more about: copyright plagiarism ravi basrur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X