For Quick Alerts
  ALLOW NOTIFICATIONS  
  For Daily Alerts

  'ಸೂಪರ್ ಮ್ಯಾನ್', 'ಎಕ್ಸ್ ಮ್ಯಾನ್', 'ಲೀಥಲ್ ವೆಪನ್' ನಿರ್ದೇಶಕ ರಿಚರ್ಡ್ ನಿಧನ

  |

  'ಸೂಪರ್ ಮ್ಯಾನ್', 'ಎಕ್ಸ್ ಮ್ಯಾನ್' ಸಿನಿಮಾ ಸರಣಿಗಳು ಇಂದು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಸಿನಿಮಾಗಳು. ಈ ಸಿನಿಮಾಗಳನ್ನು ದಶಕಗಳ ಹಿಂದೆಯೇ ನಿರ್ದೇಶನ ಮಾಡಿದ್ದ ಹಾಲಿವುಡ್‌ನ ಹೆಸರಾಂತ ನಿರ್ದೇಶಕ ರಿಚರ್ಡ್ ಡೋನರ್ ನಿಧನ ಹೊಂದಿದ್ದಾರೆ.

  95 ವರ್ಷವಾಗಿದ್ದ ರಿಚರ್ಡ್ ಡೋನರ್ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ರಿಚರ್ಡ್ ನಿಧನದ ವಿಷಯವನ್ನು ಲಾರೆನ್ ಶಲರ್ ಡೋನರ್ ಮಾಧ್ಯಮಗಳಿಗೆ ತಿಳಿಸಿದ್ದು, ''ಸೋಮವಾರ ಅವರು ಶಾಂತಿಯಿಂದ ಇಹಲೋಕ ತ್ಯಜಿಸಿದರು'' ಎಂದು ಹೇಳಿದ್ದಾರೆ.

  1978 ರಲ್ಲಿ ರಿಚರ್ಡ್ ಡೋನರ್ 'ಸೂಪರ್ ಮ್ಯಾನ್' ಸಿನಿಮಾ ಮಾಡಿದರು. ವಾರ್ನರ್ ಬ್ರದರ್ಸ್ ಮಾಡಿದ ಮೊದಲ ಸೂಪರ್ ಮ್ಯಾನ್ ಸಿನಿಮಾ ಇದು. ಈ ಸಿನಿಮಾ ಮೂಲಕವೇ 'ಸೂಪರ್ ಮ್ಯಾನ್' ಪಾತ್ರಕ್ಕೆ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡರು. ಆ ನಂತರ 'ಸೂಪರ್ ಮ್ಯಾನ್ 2' ಸಿನಿಮಾವನ್ನು ರಿಚರ್ಡ್ ನಿರ್ದೇಶನ ಮಾಡಿದರು.

  'ಸೂಪರ್ ಮ್ಯಾನ್' ಮಾತ್ರವೇ ಅಲ್ಲದೆ 'ಎಕ್ಸ್-ಮ್ಯಾನ್' ಸಿನಿಮಾದ ಜೊತೆಗೆ ಬಂಧ ಹೊಂದಿರುವ ಡೋನರ್, 2000 ರಲ್ಲಿ ಬಿಡುಗಡೆ ಆದ ಮೊದಲ 'ಎಕ್ಸ್ ಮ್ಯಾನ್' ಸಿನಿಮಾದ ಸಹ ನಿರ್ಮಾಪಕ ಆಗಿದ್ದರು. ಡೋನರ್ ಪತ್ನಿ ಲಾರೆನ್ ಶಲರ್ ಡೋನರ್ 'ಎಕ್ಸ್ ಮ್ಯಾನ್' ಸರಣಿಯ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರಿಚರ್ಡ್ ಡೋನರ್ ಅದಕ್ಕೆ ಎಕ್ಸಿಗ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು.

  ಅದರ ಬಳಿಕ 'ಲೀಥಲ್ ವೆಪನ್' ಹೆಸರಿನ ಸೂಪರ್ ಹಿಟ್ ಸಿನಿಮಾವನ್ನು ಸಹ ರಿಚರ್ಡ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಹಾಲಿವುಡ್‌ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಹೆಸರು ಗಳಿಸಿಕೊಂಡಿತು.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat

  ರಿಚರ್ಡ್ ನಿಧನಕ್ಕೆ ಹಾಲಿವುಡ್‌ನ ಖ್ಯಾತ ನಿರ್ದೇಶಕ ಸ್ಟಿವನ್ ಸ್ಪೀಲ್‌ಬರ್ಗ್ ಸೇರಿ ಹಲವಾರು ಖ್ಯಾತ ನಿರ್ದೇಶಕರು, ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ವಾರ್ನರ್ ಬ್ರದರ್ಸ್ ಸಂಸ್ಥೆ ಸಹ ಸಂತಾಪ ಸೂಚಿಸಿದೆ.

  English summary
  Hollywood famous director Richard Donner died at on Monday he was 91 years of age. He directed 'Superman', 'Superman2', 'Lethal Weapon' and many others hit movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X