ಸೆಪ್ಟೆಂಬರ್ ನಲ್ಲಿ ವಿಶ್ವದಾದ್ಯಂತ 'ನೇಕೆಡ್ ಸೋಲ್ಜರ್'

ಈಗ ಇದೇ ಸಂಸ್ಥೆ ತಮ್ಮ ಹಿಂದಿನ ಚಿತ್ರಗಳ ಮುಂದುವರಿದ ಭಾಗವಾಗಿ 'ನೇಕೆಡ್ ಸೋಲ್ಜರ್' ಚಿತ್ರವನ್ನು ತೆರೆಗೆ ತರುತ್ತಿದೆ. ಈ ಚಿತ್ರದಲ್ಲಿ ಏಷ್ಯಾ ಯೂರೋಪಿಯನ್ ಮಾರ್ಷಲ್ ಆರ್ಟ್ಸ್ ಲೇಡಿ ಚಾಂಪಿಯನ್ ಜೆನ್ನಿಫರ್ ಟೀಸ್ ಅಭಿನಯಿಸಿದ್ದಾರೆ.
ಜೆನ್ನಿಫರ್ ತಮ್ಮ ಅಂದಚೆಂದಗಳ ಚಂದಮಾಮನ ಜೊತೆಗೆ ಆಕ್ಷನ್ ಸೀನ್ ಗಳಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಾರ್ಲೆಸ್ ಏಂಜಿಲ್ಸ್, ಟಾಮ್ ರೈಡರ್, ಮ್ಯಾಟ್ರಿಕ್ಸ್ ಚಿತ್ರಗಳ ಮಾದರಿಯಲ್ಲಿ ಈ ಚಿತ್ರದ ಆಕ್ಷನ್ ಸೀನ್ ಗಳನ್ನು ತೆರೆಗೆ ತರಲಾಗಿದೆ.
ಇದಿಷ್ಟೇ ಅಲ್ಲದೆ ಬ್ಯಾಟ್ ಮೆನ್, ಮ್ಯಾಟ್ರಿಕ್ಸ್ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಇಮಾನ್ ಪವರ್ಸ್ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಅತ್ಯದ್ಭುತವಾದ ಫೈಟ್ಸ್ ಕಂಪೋಜ್ ಮಾಡಿದ್ದಾರೆ.
ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಆಕ್ಷನ್ ಪ್ರಧಾನ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಮಾರ್ಕೋ ಮ್ಯಾಕ್ ಆಕ್ಷನ್ ಕಟ್ ಹೇಳಿರುವುದು. ಭಾರತದಲ್ಲಿ ಈ ಹಾಲಿವುಡ್ ಚಿತ್ರ ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಜಗತ್ತಿನಾದ್ಯಂತ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಕಾಣುತ್ತಿದೆ. (ಏಜೆನ್ಸೀಸ್)


Click it and Unblock the Notifications











