ಹಾಲಿವುಡ್ ಲೆಜೆಂಡ್ ನಟ ಕಿರ್ಕ್ ಡಗ್ಲಾಸ್ ನಿಧನ
ಹಾಲಿವುಡ್ ಚಿತ್ರರಂಗದ ದೈತ್ಯ ಪ್ರತಿಭೆ ನಟ ಕಿರ್ಕ್ ಡಗ್ಲಾಸ್ ನಿಧನ ಹೊಂದಿದ್ದಾರೆ. 103 ನೇ ವಯಸ್ಸಿನಲ್ಲಿ ಕಿರ್ಕ್ ಇಹಲೋಕ ತ್ಯಜಿಸಿದ್ದಾರೆ.
ಕಿರ್ಕ್ ಡಗ್ಲಾಸ್ ನಿಧನದ ವಿಷಯವನ್ನು ಅವರ ಮಗ ನಟ, ನಿರ್ಮಾಪಕ ಮೈಕೆಲ್ ಡಗ್ಲಾಸ್ ತಿಳಿಸಿದ್ದಾರೆ. ''ವಿಶ್ವಕ್ಕೆ ಅವರೊಬ್ಬ ದಂತಕತೆ, ಸುವರ್ಣಯುಗದ ಖ್ಯಾತ ನಟ. ಬರೀ ಸಿನಿಮಾದಲ್ಲಿ ಮಾತ್ರವಲ್ಲದೆ, ಬದುಕಿನಲ್ಲಿಯೂ ಬಂಗಾರದ ಯುಗವನ್ನು ಅವರು ಕಂಡಿದ್ದಾರೆ. ಕಿರ್ಕ್ ಡಗ್ಲಾಸ್ ನ್ಯಾಯ ಬದ್ದತೆ ಹೊಂದಿರುವ ಮಾನವೀಯ ವ್ಯಕ್ತಿ'' ಎಂದು ಹೇಳಿದ್ದಾರೆ.
1916 ರಲ್ಲಿ ನ್ಯೂಯಾರ್ಕ್ ನಲ್ಲಿ ಕಿರ್ಕ್ ಡಗ್ಲಾಸ್ ಜನಿಸಿದ್ದರು. ಚಿತ್ರರಂಗದಲ್ಲಿ ತನ್ನ ಪ್ರತಿಭೆ ಮೂಲಕ ಗಮನ ಸೆಳೆದರು. ಸುಮಾರು 90 ಸಿನಿಮಾಗಳಲ್ಲಿ ನಟಿಸಿದ್ದು, 60 ವರ್ಷಗಳ ಕಾಲ ಕಲಾ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಹಾದಿಯಲ್ಲಿಯೇ ಇವರ ಮಗ ಕಿರ್ಕ್ ಡಗ್ಲಾಸ್ ಸಹ ಚಿತ್ರರಂಗಕ್ಕೆ ಬಂದರು. ಆಸ್ಕರ್ ಪ್ರಶಸ್ತಿಯನ್ನು ಗೆದ್ದರು. ಅಂದಹಾಗೆ,KEY ಕಿರ್ಕ್ ಡಗ್ಲಾಸ್ ಸಿನಿಮಾಗಳು ಸಹ ಆಸ್ಕರ್ ನಲ್ಲಿ ನಾಮ ನಿರ್ದೇಶನವಾಗಿವೆ. 'ಚಾಂಪಿಯನ್' ಆಸ್ಕರ್ ಗೆ ನಾಮಿನೇಟ್ ಆದ ಕಿರ್ಕ್ ಡಗ್ಲಾಸ್ ಅಭಿನಯದ ಮೊದಲ ಚಿತ್ರ
'ಬ್ಯಾಡ್ ಆಂಡ್ ದ ಬ್ಯೂಟಿಫುಲ್', 'ಚಾಂಪಿಯನ್', 'ಲಸ್ಟ್ ಫಾರ್ ಲೈಫ್', 'ಸೆವೆನ್ ಡೇಸ್ ಇನ್ ಮೇ', 'ಔಟ್ ಆಫ್ ದಿ ಪಾಸ್ಟ್', 'ಚಾಂಪಿಯನ್' ಹೀಗೆ ಅನೇಕ ಸಿನಿಮಾಗಳಲ್ಲಿ ಕಿರ್ಕ್ ಡಗ್ಲಾಸ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











