»   » ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ NO.1 ಸ್ಥಾನದಲ್ಲಿದೆ ಈ ಟ್ರೈಲರ್

ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ NO.1 ಸ್ಥಾನದಲ್ಲಿದೆ ಈ ಟ್ರೈಲರ್

Posted By:
Subscribe to Filmibeat Kannada
ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ NO.1 ಸ್ಥಾನದಲ್ಲಿದೆ ಈ ಟ್ರೈಲರ್ | Filmibeat Kannada

ಅಮೇರಿಕನ್ ಸೂಪರ್ ಹೀರೋ ಚಿತ್ರವನ್ನ ಆಧರಿಸಿ ಮೂಡಿ ಬರುತ್ತಿರುವ ಹಾಲಿವುಡ್ ನ ಬಹುನಿರೀಕ್ಷೆಯ 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರದ ಕೊನೆಯ ಟ್ರೈಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 19 ಮಿಲಿಯನ್ ವೀಕ್ಷಕರು ಈ ಚಿತ್ರದ ಟ್ರೈಲರ್ ವೀಕ್ಷಿಸಿದ್ದಾರೆ.

ರಾಬರ್ಟ್ ಡೌನಿ ಜೂನಿಯರ್, ಕ್ರಿಸ್ ಹೆಮ್ಸ್ವರ್ತ್, ಮಾರ್ಕ್ ರುಫಲೋ, ಕ್ರಿಸ್ ಇವಾನ್ಸ್, ಸ್ಕಾರ್ಲೆಟ್ ಜೋಹಾನ್ಸನ್, ಬೆನೆಡಿಕ್ಟ್ ಕಂಬರ್ಬ್ಯಾಚ್, ಡಾನ್ ಚೀಡೆಲ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ತುಂಬಾ ರೋಚಕತೆ ಹುಟ್ಟುಹಾಕಿದೆ.

hollywood movie Avengers Infinity War trailer

ಇನ್ನು ಆಂಟನಿ ರುಸ್ಸೋ ಮತ್ತು ಜೋ ರುಸ್ಸೋ ಇಬ್ಬರು ನಿರ್ದೇಶಕರು ಸೇರಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಅಲನ್ ಸಿಲ್ವೆಸ್ಟ್ರಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಈಗಾಗಲೇ ಟ್ರೈಲರ್ ನಿಂದ ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾ ಪ್ರೇಕ್ಷಕರ ಥ್ರಿಲ್ ಹೆಚ್ಚಿಸಿದೆ.

ಸದ್ಯ, ಸಂಪೂರ್ಣವಾಗಿ ಶೂಟಿಂಗ್ ಮುಗಿಸಿರುವ 'ಅವೆಂಜರ್ಸ್: ಇನ್ಫಿನಿಟಿ ವಾರ್' ಏಪ್ರಿಲ್ 27 ರಂದು ತೆರೆಕಾಣಲಿದೆ. ಇಲ್ಲಿ ಗಮನಿಸಬೇಕಾದ ವಿಚಾರವಂದ್ರೆ ಅದೇ ದಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ ಕರಿಕಾಳನ್' ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗಲಿದೆ.

English summary
We’re just a few weeks away from the release of Avengers: Infinity War — its release date was recently bumped up a week to April 27th — and now, Marvel has released new trailer to stir up some more excitement for the upcoming superhero showdown.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X