12 ವರ್ಷಗಳ ಡೇಟಿಂಗ್ ನಂತರ ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್'
Recommended Video
ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19) ಗಾಯಕಿ ಲಾರೆನ್ ಹಶಿಯಾನ್ ಜೊತೆಗೆ ಹವಾಲಿ ದ್ವೀಪದಲ್ಲಿ ರಾಕ್ ವಿವಾಹ ನೆರವೇರಿದೆ.
ಕಳೆದ 12 ವರ್ಷಗಳಿಂದ ಡ್ವೇನ್ ಜಾನ್ಸನ್ ಹಾಗೂ ಲಾರೆನ್ ಹಶಿಯಾನ್ ಡೇಟಿಂಗ್ ಮಾಡುತ್ತಿದ್ದರು. 2006 ರಲ್ಲಿ ಮೊದಲ ಬಾರಿಗೆ 'ದಿ ಗೇಮ್ ಪ್ಲಾನ್' ಸೆಟ್ ನಲ್ಲಿ ಈ ಜೋಡಿ ಭೇಟಿ ಮಾಡಿದ್ದು, ಅಲ್ಲಿಂದ ಇಬ್ಬರ ಸ್ನೇಹ ಶುರು ಆಗಿತ್ತು. ಮದುವೆಗೆ ಮುನ್ನ ಇಬ್ಬರು ಮಕ್ಕಳಿಗೆ ಲಾರೆನ್ ಹಶಿಯಾನ್ ಜನ್ಮ ನೀಡಿದ್ದರು.
ಡ್ವೇನ್ ಜಾನ್ಸನ್ ಹಾಗೂ ಲಾರೆನ್ ಹಶಿಯಾನ್ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2015 ರಲ್ಲಿ ಮೊದಲ ಮಗು ಹಾಗೂ 2018 ರಲ್ಲಿ ಎರಡನೇ ಮಗು ಹುಟ್ಟಿತ್ತು. ಸದ್ಯ, ಡ್ವೇನ್ಜಾನ್ಸನ್ ಗೆ 47 ವರ್ಷವಾಗಿದ್ದು, ಹಾಗೂ ಲಾರೆನ್ ಹಶಿಯಾನ್ 34 ವರ್ಷ. ಇಬ್ಬರ ಮಧ್ಯೆ 13 ವರ್ಷಗಳ ಅಂತರ ಇದೆ.

ಲಾರೆನ್ ಹಶಿಯಾನ್ ಭೇಟಿಗೆ ಮೊದಲು ನಿರ್ಮಾಪಕಿ ಡ್ಯಾನಿ ಗಾರ್ಸಿಯಾ ಜೊತೆಗೆ ಡ್ವೇನ್ ಜಾನ್ಸನ್ ವಿವಾಹ ಆಗಿದ್ದರು. ಇಬ್ಬರಿಗೂ 18 ವರ್ಷದ ಮಗಳು ಇದ್ದಳು. ಆದರೆ, ಈ ಜೋಡಿ 2007ರಲ್ಲಿ ಬೇರೆ ಬೇರೆ ಆದರು.
ಲಾರೆನ್ ಹಶಿಯಾನ್ ಜೊತೆಗೆ ವಿವಾಹ ಆದ ಫೋಟೋಗಳನ್ನು ಡ್ವೇನ್ ಜಾನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡ್ವೇನ್ ಜಾನ್ಸನ್ ಮದುವೆಗೆ ಹಾಲಿವುಡ್ ಸೂಪರ್ ಸ್ಟಾರ್ ಶುಭಾಶಯ ತಿಳಿಸಿದ್ದಾರೆ.

WWE ಆಟಗಾರ ಆಗಿದ್ದ ರಾಕ್ ತದನಂತರ ಹಾಲಿವುಡ್ ನಲ್ಲಿ ನಟ ಮತ್ತು ನಿರ್ಮಾಪಕರಾದರು.


Click it and Unblock the Notifications











