twitter
    For Quick Alerts
    ALLOW NOTIFICATIONS  
    For Daily Alerts

    12 ವರ್ಷಗಳ ಡೇಟಿಂಗ್ ನಂತರ ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್'

    |

    Recommended Video

    ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್' | FILMIBEAT KANNADA

    ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19) ಗಾಯಕಿ ಲಾರೆನ್ ಹಶಿಯಾನ್ ಜೊತೆಗೆ ಹವಾಲಿ ದ್ವೀಪದಲ್ಲಿ ರಾಕ್ ವಿವಾಹ ನೆರವೇರಿದೆ.

    ಕಳೆದ 12 ವರ್ಷಗಳಿಂದ ಡ್ವೇನ್ ಜಾನ್ಸನ್ ಹಾಗೂ ಲಾರೆನ್ ಹಶಿಯಾನ್ ಡೇಟಿಂಗ್ ಮಾಡುತ್ತಿದ್ದರು. 2006 ರಲ್ಲಿ ಮೊದಲ ಬಾರಿಗೆ 'ದಿ ಗೇಮ್ ಪ್ಲಾನ್' ಸೆಟ್ ನಲ್ಲಿ ಈ ಜೋಡಿ ಭೇಟಿ ಮಾಡಿದ್ದು, ಅಲ್ಲಿಂದ ಇಬ್ಬರ ಸ್ನೇಹ ಶುರು ಆಗಿತ್ತು. ಮದುವೆಗೆ ಮುನ್ನ ಇಬ್ಬರು ಮಕ್ಕಳಿಗೆ ಲಾರೆನ್ ಹಶಿಯಾನ್ ಜನ್ಮ ನೀಡಿದ್ದರು.

    ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಚಿತ್ರ ಯಾವುದು? ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಚಿತ್ರ ಯಾವುದು?

    ಡ್ವೇನ್ ಜಾನ್ಸನ್ ಹಾಗೂ ಲಾರೆನ್ ಹಶಿಯಾನ್ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2015 ರಲ್ಲಿ ಮೊದಲ ಮಗು ಹಾಗೂ 2018 ರಲ್ಲಿ ಎರಡನೇ ಮಗು ಹುಟ್ಟಿತ್ತು. ಸದ್ಯ, ಡ್ವೇನ್ಜಾನ್ಸನ್ ಗೆ 47 ವರ್ಷವಾಗಿದ್ದು, ಹಾಗೂ ಲಾರೆನ್ ಹಶಿಯಾನ್ 34 ವರ್ಷ. ಇಬ್ಬರ ಮಧ್ಯೆ 13 ವರ್ಷಗಳ ಅಂತರ ಇದೆ.

    Hollywood Star Dwayne Johnson Got Married With Lauren Hashian

    ಲಾರೆನ್ ಹಶಿಯಾನ್ ಭೇಟಿಗೆ ಮೊದಲು ನಿರ್ಮಾಪಕಿ ಡ್ಯಾನಿ ಗಾರ್ಸಿಯಾ ಜೊತೆಗೆ ಡ್ವೇನ್ ಜಾನ್ಸನ್ ವಿವಾಹ ಆಗಿದ್ದರು. ಇಬ್ಬರಿಗೂ 18 ವರ್ಷದ ಮಗಳು ಇದ್ದಳು. ಆದರೆ, ಈ ಜೋಡಿ 2007ರಲ್ಲಿ ಬೇರೆ ಬೇರೆ ಆದರು.

    ಮಗಳಿಗೆ 'ಇಂಡಿಯಾ' ಎಂದು ನಾಮಕರಣ ಮಾಡಿದ ಹಾಲಿವುಡ್ ಖ್ಯಾತ ನಟ ಮಗಳಿಗೆ 'ಇಂಡಿಯಾ' ಎಂದು ನಾಮಕರಣ ಮಾಡಿದ ಹಾಲಿವುಡ್ ಖ್ಯಾತ ನಟ

    ಲಾರೆನ್ ಹಶಿಯಾನ್ ಜೊತೆಗೆ ವಿವಾಹ ಆದ ಫೋಟೋಗಳನ್ನು ಡ್ವೇನ್ ಜಾನ್ಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡ್ವೇನ್ ಜಾನ್ಸನ್ ಮದುವೆಗೆ ಹಾಲಿವುಡ್ ಸೂಪರ್ ಸ್ಟಾರ್ ಶುಭಾಶಯ ತಿಳಿಸಿದ್ದಾರೆ.

    Hollywood Star Dwayne Johnson Got Married With Lauren Hashian

    WWE ಆಟಗಾರ ಆಗಿದ್ದ ರಾಕ್ ತದನಂತರ ಹಾಲಿವುಡ್ ನಲ್ಲಿ ನಟ ಮತ್ತು ನಿರ್ಮಾಪಕರಾದರು.

    English summary
    Hollywood actor, 'The Rock' Dwayne Johnson got married with Lauren Hashian Yesterday (August 19th).
    Tuesday, August 20, 2019, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X