'ಅನಕೊಂಡ' ಹಿಂದೆ ಬಿದ್ದ ಹೊಂಬಾಳೆ ಫಿಲ್ಮ್ಸ್; ವರ್ಷಾಂತ್ಯಕ್ಕೆ ಬಾಕ್ಸಾಫೀಸ್ ಧೂಳ್

ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಬಹಳ ಜನಪ್ರಿಯತೆ ಸಾಧಿಸಿದ ಸಂಸ್ಥೆ. ನಿರ್ಮಾಪಕ ವಿಜಯ್ ಕಿರಗಂದೂರ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಒಂದೆರಡು ಚಿತ್ರ ಬಜೆಟ್ ಸಿನಿಮಾಗಳು ಸೋತಿರುವುದು ಬಿಟ್ಟರೆ ಸಂಸ್ಥೆ ನಿರ್ಮಿಸಿದ, ಅರ್ಪಿಸಿದ, ವಿತರಣೆ ಮಾಡಿದ ಸಿನಿಮಾಗಳೆಲ್ಲಾ ಹಿಟ್ ಆಗಿದೆ.

ಈ ವರ್ಷ ಹೊಂಬಾಳೆ ಫಿಲ್ಮ್ಸ್ ತೆರೆಗೆ ತಂದ 'ಮಹಾವತಾರ್ ನರಸಿಂಹ' ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಆನಿಮೇಟೆಡ್ ಸಿನಿಮಾವೊಂದು ಭಾರತದಲ್ಲಿ ಈ ಮಟ್ಟಿಗೆ ಸದ್ದು ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿದ ಮಾಡಿದ ಆನಿಮೇಟೆಡ್ ಸಿನಿಮಾ ಇದಾಗಿದೆ.

Hombale Films to Release Hollywood Action-Comedy Anaconda in Karnataka on December 25

2 ತಿಂಗಳ ಹಿಂದೆ ಬಂದಿದ್ದ 'ಕಾಂತಾರ- 1' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಓಟಿಟಿಗೆ ಬಂದರೂ ಕೆಲವೆಡೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಹಾಲಿವುಡ್ 'ಅನಕೊಂಡ' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತೆರೆಗೆ ತರುತ್ತಿದೆ.

ಹೌದು.. ಹಾಲಿವುಡ್ 'ಅನಕೊಂಡ' ಚಿತ್ರ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದೆ. ವಿಶ್ವದಾದ್ಯಂತ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗ್ತಿದೆ. ಮೈಸೂರು ಕರ್ನಾಟಕ ಭಾಗದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಟಾಮ್ ಗೊರ್ಮಿಕನ್ ನಿರ್ದೇಶನದ ಚಿತ್ರದಲ್ಲಿ ಪಾಲ್ ರುಡ್ ಮತ್ತು ಜ್ಯಾಕ್ ಬ್ಲಾಕ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಬಂದು ಗಮನ ಸೆಳೆದಿದೆ. ಗೊರ್ಮಿಕನ್ ಮತ್ತು ಕೆವಿನ್ ಎಟ್ಟೆನ್ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದಾರೆ. ಸ್ಟೀವ್ ಜಾನ್, ಥಂಡಿವೆ ನ್ಯೂಟನ್, ಡೇನಿಯಲಾ ಮೆಲ್ಚಿಯರ್ ಮತ್ತು ಸೆಲ್ಟನ್ ಮೆಲ್ಲೊ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕೊಲಂಬಿಯಾ ಪಿಕ್ಚರ್ಸ್ ಹಾಗೂ ಫುಲ್ಲಿ ಫಾರ್ಮ್‌ಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ಸೋನಿ ಪಿಕ್ಚರ್ಸ್ ವಿಶ್ವದಾದ್ಯಂತ ಸಿನಿಮಾ ತೆರೆಗೆ ತರ್ತಿದೆ.

ಇದೊಂದು ಆಕ್ಷನ್ ಕಾಮಿಡಿ ಸಿನಿಮಾ ಆಗಿದ್ದು ಟೈಟಲ್ಲೇ ಹೇಳುವಂತೆ ದೈತ್ಯ ಅನಕೊಂಡ ಹಾವಿನ ಸುತ್ತಾ ಕಥೆ ಸಾಗಲಿದೆ. ಸ್ನೇಹಿತರಾದ ಗ್ರಿಫ್(ಪಾಲ್ ರುಡ್) ಮತ್ತು ಡೌಗ್(ಜ್ಯಾಕ್ ಬ್ಲಾಕ್) ಸದಾ ತಮ್ಮ ಸಾರ್ವಕಾಲಿಕ ನೆಚ್ಚಿನ ಸಿನಿಮಾ 'ಅನಕೊಂಡ'ವನ್ನು ರೀಮೇಕ್ ಮಾಡುವ ಕನಸು ಕಾಣುತ್ತಿರುತ್ತಾರೆ. ಅಂತಿಮವಾಗಿ ಒಂದು ತಂಡ ಕಟ್ಟಿಕೊಂಡು ಅಮೆಜಾನ್ ಕಾಡಿನಲ್ಲಿ ಚಿತ್ರೀಕರಣಕ್ಕೆ ಹೋಗುತ್ತಾರೆ. ಹಸಿದ ಅನಕೊಂಡ ಹಾವಿಗಳಿಂದ ಮುಂದೆ ಇಡೀ ತಂಡ ಏನೆಲ್ಲಾ ಸಂಕಷ್ಟ ಎದುರಿಸುತ್ತದೆ ಎನ್ನುವುದು ಇನ್ನುಳಿದ ಕಥೆ.

ಡಿಸೆಂಬರ್ 25ಕ್ಕೆ ಕನ್ನಡದ ಎರಡು ದೊಡ್ಡ ಸಿನಿಮಾಗಳು ತೆರೆಗೆ ಬರ್ತಿವೆ. ಸುದೀಪ್ ನಟನೆಯ 'ಮಾರ್ಕ್' ಜೊತೆಗೆ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ವಾರವೇ 'ಡೆವಿಲ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಇನ್ನು ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'ವೃಷಭ' ಸಿನಿಮಾ ಕೂಡ ಅದೇ ದಿನ ತೆರೆಗಪ್ಪಳಿಸುತ್ತಿದೆ. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್ ದೊಡ್ಡಮಟ್ಟದಲ್ಲಿ ಇರಲಿದೆ.

ದೊಡ್ಡ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುವುದರಿಂದ ಥಿಯೇಟರ್ ಸಮಸ್ಯೆ ಕೂಡ ಎದುರಾಗುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ 'ಅನಕೊಂಡ' ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ವಿಶೇಷ. ಒಟ್ಟಾರೆ ಕ್ರಿಸ್‌ಮಸ್ ಬಾಕ್ಸಾಫೀಸ್ ಕ್ಲ್ಯಾಶ್ ಬಹಳ ಕುತೂಹಲ ಮೂಡಿಸಿದೆ.

More from Filmibeat

Read more about: hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X