Oscar Awards 2024 ; ಅಂದುಕೊಂಡಷ್ಟು ಸುಲಭ ಅಲ್ಲ 'ಆಸ್ಕರ್' , ಆಯ್ಕೆ ಹೇಗೆ ಗೊತ್ತಾ..?

ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಆಸ್ಕರ್ ಪ್ರಶಸ್ತಿ ದೊರೆಯುವುದು ಇರಲಿ, ಪ್ರಶಸ್ತಿಗೆ ನಾಮ ನಿರ್ದೇಶನವಾದರೆ ಸಾಕು ಸಿನಿಮಾ ಹಾಗೂ ಸಾಕ್ಷ್ಯ ಚಿತ್ರತಂಡಕ್ಕೆ ಅದು ದೊಡ್ಡ ವಿಚಾರ. ಯಾಕೆಂದರೆ ನಿಯಮಗಳೇ ಹಾಗಿವೆ.

ನಿಮಗೆ ಗೊತ್ತಿರಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನೆಸ್ಸ್ ನೀಡುವ ಆಸ್ಕರ್‌ ಅಸ್ತಿತ್ವಕ್ಕೆ ಬಂದಿದ್ದು 1927ರಲ್ಲಿ. 1929ರಿಂದ ಪ್ರಶಸ್ತಿ ನೀಡುವ ಸಂಪ್ರದಾಯ ಆರಂಭವಾಯಿತು. ಸದ್ಯಕ್ಕೆ ಆಸ್ಕರ್ ಗೆ 96ರ ಹರೆಯ. ಇಂಥಹ ಆಸ್ಕರ್ ಗೆ ಹತ್ತಾರು ನಿಯಮಗಳಿವೆ.

How To Qualify For Oscars What Are The Rules

ಅರ್ಹತೆ.. ಮಾನದಂಡ.. ನಿಯಮ

ಆಸ್ಕರ್ ಪ್ರಶಸ್ತಿಯನ್ನ 24 ವಿಭಾಗಗಳಲ್ಲಿ ನೀಡಲಾಗುತ್ತದೆ. ಎಲ್ಲ ವಿಭಾಗಗಳಿಗೆ ಸಿನಿಮಾ, ಗೀತೆ, ಕಲಾವಿದರು, ತಂತ್ರಜ್ಞರನ್ನ ಪರಿಗಣಿಸಲು, ಪ್ರತೈಕ ನಿಯಮಗಳನ್ನ ರೂಪಿಸಲಾಗಿದೆ.

ಅಕಾಡೆಮಿಯ ಸಕ್ರಿಯ ಮತ್ತು ಆಜೀವ ಸದಸ್ಯರು ಮತದಾನದ ಮೂಲಕ ತಮ್ಮ ಆಯ್ಕೆ ತಿಳಿಸಬೇಕು ಎಂಬ ನಿಯಮ ಇದೆ. ಅತ್ಯುತ್ತಮ ಚಿತ್ರ ವಿಭಾಗಕ್ಕೆ ಎಲ್ಲ ಸದಸ್ಯರು ಮತದಾನ ಮಾಡಿದರೆ, ಉಳಿದ ಪ್ರತಿಯೊಂದು ವಿಭಾಗಕ್ಕೂ ಆಯಾ ಕ್ಷೇತ್ರದ ಅನುಭವಿ ಸದಸ್ಯರು ಮತದಾನ ಮಾಡುತ್ತಾರೆ

ಇನ್ನೂ ಅತ್ಯುತ್ತಮ ನಟ ಅಥವಾ ನಟಿ ಪ್ರಶಸ್ತಿ ಪಡೆಯಬೇಕು ಅಂದರೆ ಪಾತ್ರಕ್ಕೆ ಅವರದ್ದೇ ಧ್ವನಿ ಇರಬೇಕು. ಒಂದು ವೇಳೆ ಅವರ ಪಾತ್ರಕ್ಕೆ ಬೇರೆಯವರು ಡಬ್ ಮಾಡಿದ್ದರೆ, ಅವರು ಎಷ್ಟೇ ಉತ್ತಮ ಅಭಿನಯ ನೀಡಿದ್ದರು ಅವರನ್ನ ಪ್ರಶಸ್ತಿಗೆ ಪರಿಗಣಿಸುವುದಿಲ್ಲ

How To Qualify For Oscars What Are The Rules

ನಟ ಅಥವಾ ನಟಿ ಎರಡು ವಿಭಾಗದಲ್ಲಿ ಅತಿ ಹೆಚ್ಚು ಮತ ಪಡೆದಿದ್ದರೆ, ಆ ಎರಡು ವಿಭಾಗದ ಪ್ರಶಸ್ತಿಗೆ ಅವರನ್ನ ಪರಿಗಣಿಸಲಾಗುತ್ತೆ. ಅಭಿನಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳಿಗೆ ಮತದಾನ ಮಾಡುವ ಹಕ್ಕು ಸಮಿತಿಯ ಸಕ್ರಿಯ ಹಾಗೂ ಆಜೀವ ಸದಸ್ಯರಿಗೆ ಮಾತ್ರ ಇರುತ್ತದೆ.

ಇನ್ನೂ ಸಿನಿಮಾ ಕೇವಲ ಚಿತ್ರಮಂದಿರಗಳಲ್ಲಿ ಅಷ್ಟೇ ಪ್ರದರ್ಶನವಾಗಿರಬೇಕು. ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದರೆ ಇಲ್ಲಿ ನೋ ಎಂಟ್ರಿ. ಇನ್ನೂ ಟಿವಿಯಲ್ಲಿಯೂ ಚಿತ್ರ ಪ್ರಸಾರವಾಗಿರಬಾರದು. ಡಿವಿಡಿ ಅಥವಾ ಸಿಡಿ ಮೂಲಕ ಮನೆಗಳಿಗೆ ತಲುಪಿರಬಾರದು

ಅಂದ್ಹಾಗೇ ಅಮೆರಿಕದ ಮೆಟ್ರೋ ನಗರಗಳ ಯಾವುದೋ ಒಂದು ಚಿತ್ರಮಂದಿರದಲ್ಲಿ ಸತತ 07 ದಿನ ಪ್ರದರ್ಶನವಾದ ಚಿತ್ರ ಮಾತ್ರ, ಆಸ್ಕರ್ ಗೆ ಪರಿಗಣಿಸಲಾಗುತ್ತೆ ಎಂಬ ಸುದ್ದಿ ಇದೆ. ಆದರೆ ವಾಸ್ತವದಲ್ಲಿ ಇದು ಸುಳ್ಳು.

How To Qualify For Oscars What Are The Rules

ಯಾಕೆಂದರೆ ಎಲ್ಲರಿಗೂ ಇದು ಅನ್ವಯವಾಗಲ್ಲ. ಕೇವಲ ಅಮೆರಿಕಾದಲ್ಲಿ ನಿರ್ಮಾಣವಾಗುವ ಚಿತ್ರಗಳಿಗೆ ಮಾತ್ರ ಈ ಷರತ್ತು ಅನ್ವಯವಾಗುತ್ತೆ. ಬೇರೆ ದೇಶದಲ್ಲಿ ನಿರ್ಮಾಣವಾದ ಸಿನಿಮಾಗಳನ್ನ ವಿದೇಶಿ ವಿಭಾಗ ಅಥವಾ ಅಂತರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಪರಿಗಣಿಸಲಾಗುತ್ತೆ. ಅಕಾಡೆಮಿ ಅವಾರ್ಡ್ಸ್ ನ ಷರತ್ತು ಮತ್ತು ನಿಯಮಗಳ ಪುಸ್ತಕದಲ್ಲಿ ರೂಲ್ ನಂಬರ್ ಥರ್ಟಿನ್ ನಲ್ಲಿ ಇದನ್ನ ನಮೂದಿಸಲಾಗಿದೆ

ಅರ್ಹತಾ ನಿಯಮಗಳು

* 40 ನಿಮಿಷಕ್ಕೂ ಹೆಚ್ಚಿನ ಕಾಲಾವಧಿಯನ್ನ ಹೊಂದಿದ್ದರಷ್ಟೇ ಅವಕಾಶ

* ಚಿತ್ರ 35 ಎಂಎಂ ಅಥವಾ 75 ಎಂಎಂ ಇರಬೇಕು

* 1080 ಅಥವಾ 2048 ರೆಸಲ್ಯೂಷನ್ ಚಿತ್ರವಾಗಿರಬೇಕು

* 5.1 ಚಾನೆಲ್ ಅಥವಾ 7.1 ಚಾನೆಲ್ ಧ್ವನಿಯನ್ನ ಹೊಂದಿರಬೇಕು

* ಇಂಗ್ಲಿಷ್ ಭಾಷೆಯ ಸಬ್ ಟೈಟಲ್ ಕಡ್ಡಾಯ

24 ವಿಭಾಗಗಳು

*ಅತ್ಯುತ್ತಮ ಚಿತ್ರ

*ಅತ್ಯುತ್ತಮ ನಟ

*ಅತ್ಯುತ್ತಮ ನಟಿ

*ಅತ್ಯುತ್ತಮ ಪೋಷಕ ನಟ

*ಅತ್ಯುತ್ತಮ ಪೋಷಕ ನಟಿ

* ಅತ್ಯುತ್ತಮ ನಿರ್ದೇಶಕ

*ಅತ್ಯುತ್ತಮ ಮೂಲ ಚಿತ್ರಕಥೆ

*ಅತ್ಯುತ್ತಮ ರೂಪಾಂತರ ಚಿತ್ರಕಥೆ

* ಅತ್ಯುತ್ತಮ ಛಾಯಾಗ್ರಹಣ

*ಅತ್ಯುತ್ತಮ ನಿರ್ಮಾಣ ವಿನ್ಯಾಸ

How To Qualify For Oscars What Are The Rules

*ಅತ್ಯುತ್ತಮ ಸಂಕಲನ

*ಅತ್ಯುತ್ತಮ ಸಂಗೀತ

*ಅತ್ಯುತ್ತಮ ಗೀತೆ

*ಅತ್ಯುತ್ತಮ ವಸ್ತ್ರ ವಿನ್ಯಾಸ

*ಅತ್ಯುತ್ತಮ ಪ್ರಸಾದನ ಮತ್ತು ಕೇಶವಿನ್ಯಾಸ

*ಅತ್ಯುತ್ತಮ ಧ್ವನಿ ಮಿಶ್ರಣ

*ಅತ್ಯುತ್ತಮ ಧ್ವನಿ ಸಂಕಲನ

*ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್

*ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ

*ಅತ್ಯುತ್ತಮ ಆನಿಮೇಟೆಡ್ ಚಿತ್ರ

*ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್

*ಅತ್ಯುತ್ತಮ ಸಾಕ್ಷ್ಯ ಚಿತ್ರ

*ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ

ಹೀಗೆ ಪ್ರತಿ ವರ್ಷ ಜನವರಿ ಒಂದರಿಂದ ಡಿಸೆಂಬರ್ ಅಂತ್ಯದವರೆಗೆ ಬಿಡುಗಡೆಯಾದ ಸಿನಿಮಾಗಳು, ಸಾಕ್ಷ್ಯ ಚಿತ್ರಗಳು ಮತ್ತು ಆನಿಮೇಟೆಡ್ ಚಿತ್ರಗಳನ್ನು ಆ ವರ್ಷದ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು, ಮತ್ತು ಆಯಾ ದೇಶದ ಸರ್ಕಾರಿ ಸ್ವಾಮ್ಯದ ಸಿನಿಮಾ ಸಂಸ್ಥೆಗಳು ಆಸ್ಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆ ನಂತರದ ಹಲವು ಸುತ್ತಿನ ವೀಕ್ಷಣೆ ಮತ್ತು ಮತದಾನದ ನಂತರ ಚಿತ್ರಗಳನ್ನ ಮೊದಲ ಸುತ್ತಿನ ಪಟ್ಟಿಗೆ ಆಯ್ಕೆ ಮಾಡಲಾಗುತ್ತೆ. ಆ ನಂತರ ಚಿತ್ರಗಳು ನಾಮ ನಿರ್ದೇಶನ ಪಟ್ಟಿಗೆ ಬರುತ್ತವೆ. ಈ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗುವ ಅವಕಾಶ ಪಡೆಯುತ್ತವೆ.

More from Filmibeat

English summary
How To Apply And How To Qualify For Oscars, What Are The Rules And Regulations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X