ಹಾಲಿವುಡ್‌ಗೆ ಹಾರಿದ ಬಾಲಿವುಡ್ ನಟ ಹೃತಿಕ್ ರೋಷನ್!

ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಬಳಿಕ ಈಗ ಮತ್ತೊಬ್ಬ ನಟ ಹಾಲಿವುಡ್ ಅಂಗಳಕ್ಕೆ ಹಾರಲು ಸಜ್ಜಾಗಿದ್ದಾರೆ. ಬಿಟೌನ್ 'ಗ್ರೀಕ್ ಗಾಡ್' ಎಂದು ಕರೆಸಿಕೊಳ್ಳುವ ಹೃತಿಕ್ ರೋಷನ್ ಗೆ ಹಾಲಿವುಡ್ ಖ್ಯಾತ ಸಂಸ್ಥೆಯೊಂದು ಆಫರ್ ನೀಡಿದ್ದು, ಆ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

'ಸೂಪರ್ 30' ಮತ್ತು 'ವಾರ್' ಚಿತ್ರಗಳ ಯಶಸ್ಸಿನಲ್ಲಿರುವ ಹೃತಿಕ್ ಈಗ ಹಾಲಿವುಡ್ ಜಗತ್ತಿಗೆ ತನ್ನ ಪ್ರತಿಭೆ ತೋರಿಸಲು ಹೆಜ್ಜೆಯಿಡುತ್ತಿದ್ದಾರೆ. ಕ್ಯಾಲಿಫೋರ್ನಿಯ ಮೂಲದ ಗೆರ್ಷ್ ಏಜೆನ್ಸಿ ಸಂಸ್ಥೆ ಜೊತೆ ಹೃತಿಕ್ ಒಪ್ಪಂದ ಮಾಡಿಕೊಂಡಿದ್ದು, ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಹೃತಿಕ್ ರೋಷನ್ ಅವರ ಮ್ಯಾನೇಜರ್ ಅಮೃತಾ ಸೇನ್ ಪ್ರತಿಕ್ರಿಯಿಸಿದ್ದು, ''ಕಳೆದ 20 ವರ್ಷಗಳಿಂ ಭಾರತೀಯ ಚಿತ್ರರಗದಲ್ಲಿ ಹೃತಿಕ್ ರೋ‍ಷನ್ ಗುರುತಿಸಿಕೊಂಡಿದ್ದಾರೆ. ಈಗ ಗ್ಲೋಬಲ್ ಪ್ರೇಕ್ಷಕರನ್ನ ರಂಜಿಸುವಂತಹ ಅವಕಾಶ ಸಿಕ್ಕಿದ್ದು, ಅದನ್ನ ಹೃತಿಕ್ ಕೂಡ ಒಪ್ಪಿದ್ದಾರೆ'' ಎಂದು ಖಚಿತ ಪಡಿಸಿದ್ದಾರೆ.

Hrithik Roshan Set To Enter Hollywood

ಹೃತಿಕ್ ರೋಷನ್ ಅವರನ್ನು ಬಿಗ್ ಇಂಡಸ್ಟ್ರಿಗೆ ಪರಿಚಯಿಸುತ್ತಿರುವ ಗೆರ್ಷ್ ಏಜೆನ್ಸಿ, ಭಾರತದಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಹೊಂದಿದ್ದಾರೆ ಎನ್ನಲಾಗಿದೆ.

ಇನ್ನು ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾ 2019ರ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿದೆ. ಸದ್ಯಕ್ಕೆ, ಹೃತಿಕ್ ರೋಷನ್ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿಲ್ಲ.

More from Filmibeat

English summary
Bollywood actor Hrithik Roshan set to enter hollywood with Gresh Agency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X