29 ವರ್ಷ..09 ಮಕ್ಕಳು.. ಜಗದ್ವಿಖ್ಯಾತ ಗಾಯಕನ ದಾಂಪತ್ಯದಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಅದರಲ್ಲಿಯೂ ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ ಅಥವಾ ಸಂಗೀತ ಕ್ಷೇತ್ರವೇ ಇರಲಿ.. ಹೆಸರು.. ಹಣ.. ಕೀರ್ತಿಯನ್ನು ಸಂಪಾದಿಸಿದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್‌ ಮಾಡಿಕೊಳ್ಳುತ್ತಾರೆ.

ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು. ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ.

Iconic Singer Akon s Wife Tomeka Pulls the Plug on Nearly 3-Decade Marriage

ಗಂಡ-ಹೆಂಡ್ತಿಯ ಈ ಸಂಬಂಧ ಮದ್ವೆಯಾಗಿ ಒಂದೇ ವರ್ಷಕ್ಕೆ ಮುರಿದು ಬೀಳಬಹುದು, ಐದು ವರ್ಷಕ್ಕೂ ಮುರಿದು ಬೀಳಬಹುದು, ಹತ್ತು, ಇಪ್ಪತ್ತು, ಮೂವತ್ತು ವರ್ಷ ಆದ ಮೇಲೆ ಕೂಡ ಮುರಿದು ಬೀಳಬಹುದು. ಇದಕ್ಕೆ ಜಗದ್ವಿಖ್ಯಾತ ಗಾಯಕ ''ಅಕಾನ್'' ಅವರ ವ್ಯೆಯಕ್ತಿಕ ಬದುಕು ಸದ್ಯದ ಮತ್ತೊಂದು ಉದಾಹರಣೆ.

ಹೌದು, ಅಕಾನ್ ಸೆನೆಗಲೀಸ್.. ಅಮೆರಿಕಾದ ಪಾಪ್ ಗಾಯಕ. ''ಲೋನ್ಲಿ'' .. ''ಸ್ಮ್ಯಾಕ್ ದ್ಯಾಟ್'' .. ''ರೈಟ್ ನೌ'' .. ''ಐ ವನ್ನಾ ಲವ್ ಯೂ''.. ''ಬ್ಯೂಟಿಫುಲ್''.. ''ಲಾಕ್ಡ್ ಅಪ್''.. ಹೀಗೆ ಹತ್ತು ಹಲವು ಹಾಡುಗಳಿಗೆ ತಮ್ಮ ಕಂಠ ಕುಣಿಸಿರುವ ಅಕಾನ್ ಶಾರುಖ್ ಖಾನ್ ಅಭಿನಯದ ''ರಾ ಒನ್'' ಚಿತ್ರದ ''ಚಮ್ಮಕ್ ಚಲ್ಲೋ'' ಹಾಡನ್ನೂ ಕೂಡ ಹಾಡಿದ್ದರು. ಇವತ್ತು ಕೂಡ ಈ ಹಾಡು ಜನಪ್ರಿಯ.

ಇಂಥಾ ಅಕಾನ್ ಜೊತೆ ತಮ್ಮ 29 ವರ್ಷಗಳ ಸುದಿರ್ಘ ದಾಂಪತ್ಯ ಜೀವನವನ್ನು ಮುಕ್ತಾಯಗೊಳಿಸಲು ಇವರ ಪತ್ನಿ ಟೊಮೆಕಾ ಥಿಯಾಮ್ ಮುಂದಾಗಿದ್ದಾರೆ. ಅದು ತಮ್ಮ ವಿವಾಹ ವಾರ್ಷಿಕೋತ್ಸವದ ಮುನ್ನವೇ.

ಹೌದು. 29ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ನಾಲ್ಕು ದಿನ ಇರುವ ಹೊತ್ತಿನಲ್ಲಿ ಟೊಮೆಕಾ ಥಿಯಾಮ್ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಸೆಪ್ಟೆಂಬರ್ ಹನ್ನೊಂದರಂದು ಟೊಮೆಕಾ ಡಿವೋರ್ಸ್‌ಗೆ ಅರ್ಜಿಯನ್ನು ಸಲ್ಲಿಸಿದ್ದು ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಿರುವುದಾಗಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇಬ್ಬರ ನಡುವೆ ಸರಿಪಡಿಸಲಾಗದಷ್ಟು ಬಿರುಕು ಮೂಡಿದೆ ಎಂದು ಹೇಳಿದ್ಧಾರೆ.

Iconic Singer Akon s Wife Tomeka Pulls the Plug on Nearly 3-Decade Marriage

ಅಂದ್ಹಾಗೇ ಅಕಾನ್‌ಗೆ ಒಬ್ಬರಲ್ಲ.. ಇಬ್ಬರಲ್ಲ.. ಒಂಬತ್ತು ಮಕ್ಕಳಿದ್ದಾರೆ. ಹಾಗಂಥ ಹೌಹಾರಬೇಡಿ. 09 ಮಕ್ಕಳನ್ನು ಕೂಡ ಅಕಾನ್ ಅವರ ಪತ್ನಿ ಟೊಮೆಕಾ ಹೆತ್ತು ಹೊತ್ತು ಬೆಳೆಸಿದ್ದಾರೆ ಎಂದುಕೊಳ್ಳಬೇಡಿ. ಯಾಕೆಂದರೆ.. ಅಕಾನ್ ಬಹುಪತ್ನಿತ್ವದಲ್ಲಿ ನಂಬಿಕೆ ಹೊಂದಿರುವವರು.

2022 ರಲ್ಲಿ ''ಪೀಪಲ್‌''ಮ್ಯಾಗ್‌ಜಿನ್‌ಗೆ ನೀಡಿದ ಸಂದರ್ಶನದಲ್ಲಿ, ಖುದ್ದು ಅಕಾನ್ ಈ ಮಾತನ್ನು ಹೇಳಿದ್ದರು. ನನಗೆ ಒಂಬತ್ತು ಮಕ್ಕಳಿದ್ದಾರೆ. ಬಹುಪತ್ನಿತ್ವ ನಮ್ಮ ಆಫ್ರಿಕನ್ ಸಂಸ್ಕ್ರತಿಯ ಭಾಗ ಎಂದು ಹೇಳಿದ್ದರು. ಮುಂದುವರೆದು ಬಹುಪತ್ನಿತ್ವದಲ್ಲಿ ತಪ್ಪಿಲ್ಲ ನನಗೆ ಇದೆಲ್ಲ ಮಾಮೂಲಿ ಎನ್ನುವ ಭಾವನೆ ಎಂದು ಹೇಳಿದ್ದ ಅಕಾನ್ ಬಹುಪತ್ನಿತ್ವ ನಮ್ಮ ಸಂಸ್ಕೃತಿಯ ಭಾಗ, ನಾವು ಪಾಶ್ಚಾತ್ಯ ಜಗತ್ತಿಗೆ ಬಂದಾಗ ನಮ್ಮ ಆಫ್ರಿಕನ್ ಸಂಸ್ಕೃತಿಯ ಹೊರಗೆ ಹೋಗಲಿಲ್ಲ. ಪಾಶ್ಚಾತ್ಯ ಜಗತ್ತು ಮಾಡಿದ ತಪ್ಪು ಏನೆಂದರೆ, ಅವರು ಪ್ರಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ಈ ಎಲ್ಲಾ ನಿಯಮಗಳನ್ನು ಮಾಡಿದರು ಎಂದು ಹೇಳಿದ್ದರು. ನನ್ನ ಎಲ್ಲಾ 9 ಮಕ್ಕಳ ಲಾಲನೆ ಪಾಲನೆ ಪೋಷಣೆಯ ಜವಾಬ್ಧಾರಿ ನನ್ನದೇ ಮತ್ತು 9 ಪತ್ನಿಯರ ಜವಾಬ್ಧಾರಿ ಕೂಡ ನನ್ನದೇ ಎಂದು ಕೂಡ ಇದೇ ಸಂದರ್ಶನದಲ್ಲಿ ಹೇಳಿದ್ದರು.

ಸದ್ಯ ಅಕಾನ್ ಅವರ ದಾಂಪತ್ಯ ಟೊಮೆಕಾ ಅವರ ಜೊತೆ ಮುರಿದು ಬೀಳಲು ಅವರ ಈ ಬಹುಪತ್ನಿತ್ವ ನಂಬಿಕೆಯೇ ಕಾರಣವಾಗಿದ್ದರೂ ಆಗಿರಬಹುದು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನುಳಿದಂತೆ ''ಪೀಪಲ್'' ಮ್ಯಾಗಜಿನ್‌ ಪ್ರಕಾರ ಅಕಾನ್ ಮತ್ತು ಟೊಮೆಕಾ ಅವರ ಪ್ರೇಮದ ಸಂಕೇತವಾಗಿ ಇವರಿಗೆ 17 ವರ್ಷದ ಒಬ್ಬಳು ಮಗಳಿದ್ದಾಳೆ. ಆಕೆಯ ಹೆಸರು ''ಜರ್ನಿ''. ಸದ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಟೊಮೆಕಾ ಮಗಳು ತಮ್ಮ ಬಳಿ ಇರುವಂತೆ ಅವಕಾಶ ಮಾಡಿಕೊಡಬೇಕೆಂದು ಕೂಡ ತಮ್ಮ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ಧಾರೆ. ಅಕಾನ್‌ಗೆ ಆಗಾಗ ಭೇಟಿ ಮಾಡುವ ಅವಕಾಶವನ್ನಷ್ಟೇ ನೀಡಬೇಕು ಉಳಿದಂತೆ ಮಗಳ ಮೇಲೆ ನನ್ನ ಹಕ್ಕಿದೆ ಎಂದು ಕೂಡ ಉಲ್ಲೇಖಿಸಿದ್ದಾರೆ.

More from Filmibeat

English summary
After almost three decades, Akon's wife Tomeka files for divorce just days before their 29th wedding anniversary. Read about the end of their long marriage.
Read more about: divorce singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X