twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ವಿಡಿಯೋದಿಂದ ಕಂಗಾಲಾಗಿ ಸ್ಪಷ್ಟೀಕರಣ ನೀಡಿದ ಹಾಲಿವುಡ್ ನಟ

    |

    ಕೊರನಾ ವೈರಸ್ ಪಾಸಿಟಿವ್ ಇರುವುದು ಕಂಡು ಬಂದಿದ್ದ ಹಾಲಿವುಡ್ ನಟ ಇಡ್ರಿಸ್ ಎಲ್ಬಾ (47) ತಾವು ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿ ಇರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ.

    Recommended Video

    Love Mocktail behind the scenes also has tears | Darling krishna | Milana Nagraj

    ಎಲ್ಬಾ ಅವರಲ್ಲಿ ಕೋವಿಡ್-19 ಇರುವುದು ಸೋಮವಾರ ಪತ್ತೆಯಾಗಿತ್ತು. ನಕಲಿ ವಿಡಿಯೋವೊಂದು ಅವರು ಗಂಭೀರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಡಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ನಿರಾಕರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಎಲ್ಬಾ ಹೇಳಿದ್ದಾರೆ.

    ಟ್ವಿಟ್ಟರ್‌ನಲ್ಲಿ ಎಲ್ಬಾ ಅಭಿಮಾನಿಯೊಬ್ಬರು 'ನೀವು ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದೀರಿ ಎಂದು ಯೂಟ್ಯೂಬ್‌ನಲ್ಲಿ ಯಾರೋ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಸುಳ್ಳು ವದಂತಿಯನ್ನು ದಯವಿಟ್ಟು ನಿರಾಕರಿಸಿ' ಎಂದು ಹೇಳಿದ್ದರು.

    Idris Elba Denied Hoax Video As He Is In Critical Condition

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್ಬಾ, 'ಇದು ನಕಲಿ. ನಾನು ಈಗ ಹುಷಾರಾಗಿದ್ದೇನೆ. ನನ್ನ ಮೇಲೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದಿರುವ ಅವರು, ತಮ್ಮಲ್ಲಿ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

    ನಾನು ಮೊದಲ ದಿನ ಪರೀಕ್ಷೆಗೆ ಒಳಗಾದಾಗ ತಲೆ ನೋವು ಮತ್ತು ದೇಹದಲ್ಲಿ ನೋವು ಇತ್ತು. ಆದರೆ ಅದರಾಚೆ ಎಂದಿಗೂ ಸಂಕಷ್ಟದ ದಿನಗಳು ಬಂದಿಲ್ಲ. ಈಗ ಯಾವ ಲಕ್ಷಣಗಳೂ ಇಲ್ಲ. ನಾನು ಸಂಪೂರ್ಣವಾಗಿ ಹುಷಾರಾಗಿದ್ದೇನೆ. ನಿನ್ನೆ ನನಗೆ ಒಳಿತು ಮತ್ತು ಕೆಡಕು ಎರಡೂ ಇತ್ತು. ಕೆಟ್ಟದ್ದೇನೆಂದರೆ ನನ್ನಲ್ಲಿ ಕೋವಿಡ್ ಪಾಸಿಟಿವ್ ಇತ್ತು. ಆದರೆ ಅದರಿಂದ ಒಳಿತು ಆಗಿದ್ದೇನೆಂದರೆ, ಅದರ ಸುತ್ತಲೂ ಸಾಕಷ್ಟು ಮಾತುಕತೆಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

    English summary
    Hollywood actor Idris Elba who tested Coronavirus positive on Monday is forced to deny the hoax video claiming he is in critical condition.
    Saturday, March 21, 2020, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X