ನೈಜೀರಿಯಾ ತಲುಪಿದ ಧನುಷ್ ಸಿನಿಮಾ ಕ್ರೇಜ್!

ನಟ ಧನುಷ್ ಕೇವಲ ತಮಿಳು ಸಿನಿಮಾ ರಂಗದ ನಟ ಅಲ್ಲ ಅವರು ಹಾಲಿವುಡ್‌ ನಟ ಸಹ ಹೌದು. ಈಗಾಗಲೇ ಒಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಿರುವ ಧನುಷ್ ಈಗ ಹೊಸದೊಂದು ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಧನುಷ್ ನಟಿಸಿರುವ 'ಜಗಮೇ ತಂದಿರಮ್' ತಮಿಳು ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೆಲರ್‌ಗೆ ಅದ್ಭುತವಾದ ಪ್ರತಿಕ್ರಿಯೆಗಳು ದೊರೆತಿವೆ. ಕೆಲವೇ ದಿನಗಳಲ್ಲಿ ಲಕ್ಷಾಂತರ ಮಂದಿ ಟ್ರೇಲರ್‌ ಅನ್ನು ವೀಕ್ಷಿಸಿದ್ದಾರೆ.

ಧನುಷ್ ಅಭಿಮಾನಿಗಳು, ತಮಿಳು ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ಇತರ ಭಾಷೆಯ ಸಿನಿಮಾ ಪ್ರೇಮಿಗಳು ಸಹ ಟ್ರೇಲರ್‌ ಅನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಟ್ರೇಲರ್‌ನ ಕ್ರೇಜ್‌ ಭಾರತ ದಾಟಿ ನೈಜೀರಿಯಾಕ್ಕೆ ಸಹ ತಲುಪಿದೆ.

ಹಾಲಿವುಡ್ ಸಿನಿಮಾಗಳ ಟ್ರೇಲರ್‌ಗಳ ಸ್ಪೂಫ್ ಮಾಡುವ ಜನಪ್ರಿಯ ಇಕರೋಡು ಬಾಯ್ಸ್ ಧನುಷ್ ನಟನೆಯ 'ಜಗಮೇ ತಂದಿರಮ್' ಸಿನಿಮಾ ಟ್ರೇಲರ್‌ ಅನ್ನು ತಮ್ಮದೇ ಶೈಲಿಯಲ್ಲಿ ಮರುಸೃಷ್ಟಿಸಿದ್ದಾರೆ.

ಪ್ರತಿ ದೃಶ್ಯವನ್ನೂ ಮರುಸೃಷ್ಟಿ ಮಾಡಿದ್ದಾರೆ

ಪ್ರತಿ ದೃಶ್ಯವನ್ನೂ ಮರುಸೃಷ್ಟಿ ಮಾಡಿದ್ದಾರೆ

ಟ್ರೇಲರ್‌ನಲ್ಲಿ ಬರುವ ಪ್ರತಿಯೊಂದು ದೃಶ್ಯವನ್ನು ಸಹ ಮರುಸೃಷ್ಟಿಸಿರುವ ಇಕರೋಡು ಬಾಯ್ಸ್ ತಂಡ ತಮ್ಮದೇ ಶೈಲಿಯಲ್ಲಿ ಟ್ರೇಲರ್‌ ಅನ್ನು ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾದ ಟ್ರೇಲರ್‌ನಷ್ಟೆ ಇಕರೋಡು ಬಾಯ್ಸ್‌ನ ಸ್ಪೂಫ್ ಟ್ರೇಲರ್ ಸಹ ವೈರಲ್ ಆಗುತ್ತಿದೆ.

ಬುದ್ಧಿವಂತಿಕೆಯಿಂದ ಸ್ಪೂಫ್ ಮಾಡಿರುವ ಹುಡುಗರು

ಟ್ರೇಲರ್‌ನಲ್ಲಿರುವ ಟೈಟಲ್ ಕಾರ್ಡ್ ಸಮೇತ ತಮ್ಮದೇ ಮಾದರಿಯಲ್ಲಿ ಮರುಸೃಷ್ಟಿಸಿದ್ದಾರೆ ಈ ನೈಜೀರಿಯಾ ಹುಡುಗರು. ಧನುಷ್ ಹೇಳುವ ತಮಿಳು ಡೈಲಾಗ್‌ಗಳಿಗೆ ಅದೇ ಮಾದರಿಯಲ್ಲಿ ತುಟಿ ಚಲನೆ ಮಾಡಿ ಹುಡುಗರೇ ಡೈಲಾಗ್ ಹೇಳುತ್ತಿದ್ದಾರೇನೋ ಎನಿಸುವಂತೆ ಮಾಡಿದ್ದಾರೆ. ಟ್ರೇಲರ್‌ನಲ್ಲಿರುವ ಕಾರ್ ಬ್ಲಾಸ್ಟ್ ಆಗುವ ದೃಶ್ಯಗಳನ್ನು ಮರುಸೃಷ್ಟಿಸಲು ಸಣ್ಣ ಆಟಿಕೆಯ ಕಾರ್‌ಗಳನ್ನು ಬ್ಲಾಸ್ಟ್ ಮಾಡುವ ತಂತ್ರ ಬಳಸಿದ್ದಾರೆ ಈ ಬುದ್ಧಿಶಾಲಿ ಹುಡುಗರು.

ಹಾಲಿವುಡ್ ಸಿನಿಮಾಗಳ ಟ್ರೇಲರ್‌ನ ಸ್ಪೂಫ್ ಮಾಡಿದ್ದಾರೆ

ಹಾಲಿವುಡ್ ಸಿನಿಮಾಗಳ ಟ್ರೇಲರ್‌ನ ಸ್ಪೂಫ್ ಮಾಡಿದ್ದಾರೆ

ಈ ಹುಡುಗರು ಹೀಗೆ ಟ್ರೇಲರ್‌ಗಳನ್ನು ಸ್ಪೂಫ್ ಮಾಡುತ್ತಿರುವುದು ಮೊದಲ ಬಾರಿಯೇನಲ್ಲ. ಈ ಹಿಂದೆ ಇವರೇ ಮಾಡಿದ್ದ ಹಾಲಿವುಡ್ ಸಿನಿಮಾ 'ಎಕ್ಸ್‌ಟ್ರ್ಯಾಕ್ಷನ್', 'ಮನಿ ಹೈಸ್ಟ್' ಟ್ರೇಲರ್‌ ಸ್ಪೂಫ್‌ಗಳು ಭಾರಿ ವೈರಲ್ ಆಗಿದ್ದವು. ಸ್ಪೂಫ್ ನೋಡಿ ಇಷ್ಟಪಟ್ಟಿದ್ದ 'ಎಕ್ಸ್‌ಟ್ರ್ಯಾಕ್ಷನ್' ಸಿನಿಮಾದ ನಿರ್ದೇಶಕ ಸಿನಿಮಾದ ಪ್ರೀಮಿಯರ್‌ ಶೋಗೆ ಈ ಹುಡುಗರನ್ನು ಆಹ್ವಾನಿಸಿದ್ದರು.

Recommended Video

ತಮ್ಮ ಜಿಲ್ಲೆ‌ ಮಾತ್ರವಲ್ಲ ಉತ್ತರ ಕರ್ನಾಟಕದ ಬಡವರಿಗೂ ನೆರವಾದ Bhuvan & Harshika | Filmibeat Kannada
ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ

ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ

ಧನುಷ್ ನಟನೆಯ 'ಜಗಮೇ ತಂದಿರಮ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 18 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದು, ಸಿನಿಮಾವು ತಮಿಳುನಾಡು ಗ್ಯಾಂಗ್‌ಸ್ಟರ್ ಒಬ್ಬಾತ ಲಂಡನ್‌ನಲ್ಲಿ ಹೋಗಿ ಮಾಫಿಯಾ ನಡೆಸುವ ಕತೆ ಹೊಂದಿದೆ. ಸಿನಿಮಾದಲ್ಲಿ ಗೇಮ್ ಆಫ್ ಥ್ರೋನ್ ಖ್ಯಾತಿಯ ನಟ ಜೇಮ್ಸ್ ಕಾಸ್ಮೊ ಸಹ ನಟಿಸಿದ್ದಾರೆ. ಜೊತೆಗೆ ಐಶ್ವರ್ಯಾ ಲಕ್ಷ್ಮಿ, ಜೋಜು ಜಾರ್ಜ್ ಇನ್ನೂ ಹಲವರಿದ್ದಾರೆ.

More from Filmibeat

English summary
Nizerian Ikarodu bois did spoof of Dhanush's Jagame Thandhiram movie trailer. Spoof video getting viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X