For Quick Alerts
  ALLOW NOTIFICATIONS  
  For Daily Alerts

  ಭೋಜನ ಸವಿದ ನಂತರ ಒಬಾಮಾ ಬಗ್ಗೆ ಪ್ರಿಯಾಂಕ ಮಾಡಿದ ಕಾಮೆಂಟ್ ಏನು?

  By ಸೋನು ಗೌಡ
  |

  ಬಾಲಿವುಡ್ ಕ್ಷೇತ್ರದಲ್ಲಿ ಸದ್ಯಕ್ಕೆ ಟಾಪ್ ನಟಿಯಾಗಿರುವ ನಟಿ ಪ್ರಿಯಾಂಕ ಚೋಪ್ರಾ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗಿ ಶ್ವೇತ ಭವನದಲ್ಲಿ ಭೋಜನ ಸವಿಯಲಿದ್ದಾರೆ ಎಂದು ನಾವು ನಿಮಗೆ ಈ ಮೊದಲು ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

  ಅಮೆರಿಕದ ವೈಟ್ ಹೌಸ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷ ಕೂಡ 'ಡಿನ್ನರ್ ಪಾರ್ಟಿ' ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಅಧೀಕೃತವಾಗಿ ಆಹ್ವಾನ ನೀಡಲಾಗಿತ್ತು. ಮಾಜಿ ವಿಶ್ವಸುಂದರಿ ಪಿಗ್ಗಿ ಅವರು ಹಾಲಿವುಡ್ ಚಿತ್ರ 'ಬೇವಾಚ್' ನ ಶೂಟಿಂಗ್ ನಲ್ಲಿದ್ದವರು 'ಡಿನ್ನರ್ ಪಾರ್ಟಿ'ಯಲ್ಲಿ ಪಾಲ್ಗೊಂಡಿದ್ದಾರೆ.['ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ]

  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅಮೆರಿಕದ ಮೊದಲ ಮಹಿಳಾ ಪ್ರಜೆ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮಾ ಅವರು ಈ 'ಡಿನ್ನರ್ ಪಾರ್ಟಿ'ಯನ್ನು ಆಯೋಜಿಸಿದ್ದರು. ಬರಾಕ್ ಒಬಾಮಾ ಅವರ ಜೊತೆ ಭೋಜನ ಸವಿದ ನಟಿ ಪಿಗ್ಗಿ ಅವರು 'ಅಮೆರಿಕ ಅಧ್ಯಕ್ಷ ಒಬಾಮಾ ಅವರನ್ನು ಅತ್ಯಂತ ಸುಂದರ ಹಾಗೂ ಹಾಸ್ಯ ಪ್ರವೃತ್ತಿಯುಳ್ಳ ಅಧ್ಯಕ್ಷ, ಆ ಸುಂದರ ಸಂಜೆಯನ್ನು ನನಗೆ ಒದಗಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು' ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.

  ಇನ್ನು ಈ 'ಕರೆಸ್ಪಾಂಡೆನ್ಸ್ ಡಿನ್ನರ್ ಪಾರ್ಟಿ' ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅವರ ಕೊನೆಯ ಸಮಾರಂಭವಾಗಿದ್ದು, ಸಮಾರಂಭದಲ್ಲಿ ಅಮೆರಿಕದ ಪ್ರಸಿದ್ಧ ಹಾಸ್ಯನಟ ಲೆರ್ರಿ ವಿಲ್ಮೋರ್ ಪಾಲ್ಗೊಂಡು ಒಬಾಮಾ ಅವರನ್ನು ಸೇರಿಸಿ ಎಲ್ಲರನ್ನು ಮನರಂಜಿಸಿದರು.['ಬೇವಾಚ್' ನಲ್ಲಿ ಪಿಗ್ಗಿ ಜೊತೆ ಪಮೇಲಾ ಕಮಾಲ್]

  ಈ ಸಮಾರಂಭದಲ್ಲಿ ಹಾಲಿವುಡ್ ನಟ-ನಟಿಯರು, ರಾಜಕಾರಣಿಗಳು ಹಾಗೂ ಪ್ರಸಿದ್ಧ ಉದ್ಯಮಿಗಳು ಭಾಗವಹಿಸಿ ಶ್ವೇತಭವನದಲ್ಲಿ ಬರಾಕ್ ಒಬಾಮಾ ದಂಪತಿಗಳ ಜೊತೆ ಭರ್ಜರಿ ಭೋಜನ ಸವಿದರು. ಡಿನ್ನರ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ಪಿಗ್ಗಿ ಅವರ ಭಾವ-ಭಂಗಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  English summary
  Bollywood's sizzling actress Priyanka Chopra has confirmed that she will be attending the White House Correspondents' dinner and Saturday (April 30, 2016) the actress was spotted at the prestigious event. Dressed in a black shimmery gown, Priyanka was seen posing for the camera with US President Barack Obama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X