Oscar Awards 2024 ; ಈ ವರ್ಷ ನಡೆಯಲಿಲ್ಲ ಪವಾಡ, ಭಾರತಕ್ಕೆ ಇಲ್ಲ ಆಸ್ಕರ್...!

ಭಾರತಕ್ಕೊಂದು ಆಸ್ಕರ್ ತರಬೇಕು ಅನ್ನುವ ಕನಸನ್ನ ಇಲ್ಲಿಯವರೆಗೆ ಅನೇಕರು ಕಂಡಿದ್ದಾರೆ. ಆದರೆ ಆ ಕನಸು ಇಲ್ಲಿಯವರೆಗೆ ಮರಿಚೀಕೆಯಾಗಿಯೇ ಉಳಿದಿದೆ.

ನಿಜಾ.. ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಆಸ್ಕರ್ ಸಿಕ್ಕಿತ್ತು. ರೆಹಮಾನ್‌ಗೆ, ಗುಲ್ಜರ್‌ಗೆ, ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿತ್ತು.‌ ಆ ಕ್ಷಣಕ್ಕೆ ಖುಷಿಯನ್ನೂ ಕೊಟ್ಟಿತ್ತು. ಆದರೆ. ಗೆಲುವು
ನಮ್ಮದಲ್ಲ. ತಾಂತ್ರಿಕವಾಗಿ ಆ ಸಿನಿಮಾ ಭಾರತೀಯರದ್ದಲ್ಲ. ಯಾಕೆಂದರೆ ಆ ಸಿನಿಮಾದ ನಿರ್ದೇಶಕ ಭಾರತೀಯನಲ್ಲ. ಆ ಕಾಲಕ್ಕೆ ಆ ಚಿತ್ರದ ನಿರ್ದೇಶಕ ಡ್ಯಾನಿ ಬಾಯಲ್ ಖುದ್ದು ಹೇಳಿಕೊಂಡಂತೆ ಸ್ಲಂ ಡಾಗ್ ಮಿಲಿಯನೇರ್ ಬ್ರಿಟಿಶ್ ಸಿನಿಮಾ.

India did not get Oscar this year too

ಇನ್ನೂ ಆರ್ ಆರ್ ಆರ್ ಚಿತ್ರಕ್ಕೆ ಆಸ್ಕರ್ ಬಂತಾದರೂ ಅದು ಹಾಡಿಗಷ್ಟೇ. ಚಿತ್ರಕ್ಕಲ್ಲ. ನಿಜಾ ಇದು ಹೆಮ್ಮೆಯ ವಿಷ್ಯವೇ. ಆದರೆ ಚಿತ್ರಕ್ಕೆ ಬಂದಿದ್ದರೆ ಆ ಸಂಭ್ರಮ ಇನ್ನೂ ಹೆಚ್ಚಿರುತ್ತಿತ್ತು. ಆರ್.ಆರ್.ಆರ್ ಜೊತೆ ಕಳೆದ ವರ್ಷ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಯಿತು. ಇತಿಹಾಸವನ್ನೂ ಸೃಷ್ಟಿಸಿತು.

ಆದರೂ, ಇಲ್ಲಿಯವರೆಗೆ ಭಾರತೀಯರು ಮಾಡಿದ ಭಾರತದ ಚಿತ್ರವೊಂದಕ್ಕೆ ಅತ್ಯುತ್ತಮ ಚಿತ್ರ ಎಂಬ ಆಸ್ಕರ್ ಸಿಗಲಿಲ್ಲ ಎಂಬ ಕೊರಗು ಇದ್ದೇ ಇತ್ತು. ಈ ವರ್ಷವಾದರೂ ಆಸ್ಕರ್ ಬರಬಹುದು ಎಂಬ ನಿರೀಕ್ಷೆ ಅನೇಕರಲ್ಲಿತ್ತು. 2018 ಎಂಬ ಮಲಯಾಳಂ ಸಿನಿಮಾ ಪವಾಡ ಮಾಡುವ ಭರವಸೆ ಇತ್ತು. ಆದರೆ 2018 ಕೂಡ ರೇಸ್ ನಿಂದ ಹೊರ ಬಿದ್ದಿತ್ತು.

India did not get Oscar this year too

ಕಳೆದ ವರ್ಷದಂತೆ ಈ ವರ್ಷ ಕೂಡ ಸಾಕ್ಷ್ಯ ಚಿತ್ರ ವಿಭಾಗದಲ್ಲಿ, ಭಾರತದ ದೆಹಲಿ ಮೂಲದ ಕೆನಡಾ ನಿವಾಸಿ ನಿಶಾ ಪಹುಜಾ ನಿರ್ದೇಶನದ ಟು ಕಿಲ್ ಎ ಟೈಗರ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ನಲ್ಲಿ ರತ್ನಗಂಬಳಿಯನ್ನ ಹಾಕಲಾಗಿತ್ತು. ದೌರ್ಜನ್ಯಕ್ಕೊಳಗಾದ ಮಗಳಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಂದೆಯ ಪಯಣದ ಕಥೆಯನ್ನೊಂದಿರುವ ಟು ಕಿಲ್ ಎ ಟೈಗರ್ ಗೆಲ್ಲುವ ವಿಶ್ವಾಸವೂ ಇತ್ತು. ಆದರೆ 20 ಡೇಸ್ ಇನ್ ಮರಿಯುಪೋಲ್ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ ಹೊರ ಹೊಮ್ಮಿತು. ಟು ಕಿಲ್ ಎ ಟೈಗರ್ ನ ಸೆಡ್ಡು ಹೊಡೆದು ಆಸ್ಕರ್ ಮುಡಿಗೇರಿಸಿಕೊಂಡಿತು

India did not get Oscar this year too

ಒಟ್ಟಿನಲ್ಲಿ ಆಸ್ಕರ್ ಅಂಗಳ ತಲುಪಿದ ಭಾರತದ ಚಿತ್ರಗಳ ಸಂಖ್ಯೆ ಕಡಿಮೆ. ಮದರ್ ಇಂಡಿಯಾ, ಸಲಾಂ ಬಾಂಬೆ, ಹಾಗೂ ಲಗಾನ್ ಸಿನಿಮಾಗಳು ಮಾತ್ರ ಆಸ್ಕರ್ ನ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿ ಈ ಹಿಂದೆ ಗಮನ ಸೆಳೆದಿದ್ದವು. ಭರವಸೆಯನ್ನ ಮೂಡಿಸಿದ್ದವು. ಆ ನಂತರ ಆರ್.ಆರ್.ಆರ್ ಹೊರತು ಪಡಿಸಿದರೆ ಭಾರತದ ಬೇರೆ ಯಾವ ಸಿನಿಮಾ ಕೂಡ ಅಂತಿಮ ಐದರ ಘಟ್ಟವನ್ನ ತಲುಪಲು ಸಾಧ್ಯವಾಗಿಲ್ಲ.

More from Filmibeat

English summary
No film from India was selected at the Oscars this year. Although Malayalam Cinema 2018 was selected, it did not make it to the final round.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X