Grammy Awards 2025; ರಿಕ್ಕಿ ಕೇಜ್ ಹಿಂದಿಕ್ಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಚಂದ್ರಿಕಾ

67ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಭಾನುವಾರ(ಫೆಬ್ರವರಿ 2) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. ಭಾರತೀಯ ಮೂಲದ ಅಮೇರಿಕನ್ ಗಾಯಕಿ ಚಂದ್ರಿಕಾ ಟಂಡನ್‌ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಆಕೆಯ 'ತ್ರಿವೇಣಿ' ಆಲ್ಬಂಗಾಗಿ ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗ ಪ್ರಶಸ್ತಿ ಒಲಿದಿದೆ.

ಲಾಸ್ ಏಂಜಲೀಸ್‌ನಲ್ಲಿ ನಡೆದ 67 ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಕಿ ಕೇಜ್ ಮತ್ತು ಅನೌಷ್ಕಾ ಶಂಕರ್ ಅವರನ್ನು ಹಿಂದಿಕ್ಕಿ ಚಂದ್ರಿಕಾ ಟಂಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರ್ಯಾಮಿ ಪ್ರಶಸ್ತಿ ಎಂದಾಗ ರಿಕ್ಕಿ ಕೇಜ್ ಹೆಸರು ನೆನಪಿಗೆ ಬರುತ್ತಿತ್ತು. ಈ ಬಾರಿ ಚಂದ್ರಿಕಾ ಗಮನ ಸೆಳೆದಿದ್ದಾರೆ.

Indian-American Chandrika Tandon wins grammy award for the album Triveni

ಚೆನ್ನೈನಲ್ಲಿ ಓದಿ ಬೆಳೆದ ಚಂದ್ರಿಕಾ ಅಹಮದಾಬಾದ್‌ ಐಐಎಂನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಾಗತಿಕ ಉದ್ಯಮ ಕ್ಷೇತ್ರದಲ್ಲಿ ಕೂಡ ಚಂದ್ರಿಕಾ ಗುರ್ತಿಸಿಕೊಂಡಿದ್ದು ಪೆಪ್ಸಿಕೋ ಮಾಜಿ ಸಿಇಓ ಇಂದ್ರಾ ನೂಯಿ ಈಕೆಯ ಹಿರಿಯ ಸಹೋದರಿ. ದಕ್ಷಿಣ ಆಫ್ರಿಕಾದ ಕೊಳಲು ವಾದಕ ವೌಟರ್ ಕೆಲ್ಲರ್ಮನ್ ಹಾಗೂ ಜಪಾನಿನ ಚೆಲೋ ವಾದಕ ಎರು ಮಾಟ್ಸುಮೊಟೊ ಜೊತೆ ಸೇರಿ ಪ್ರಾಚೀನ ವೈದಿಕ ಪದ್ಯಗಳನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟಿದ್ದರು. ಮೂವರು ಪ್ರಶಸ್ತಿ ಪಡೆದಿದ್ದಾರೆ.

ಸಿಲ್ಕ್ ಸಲ್ವಾರ್ ಕುರ್ತಾದಲ್ಲಿ ಚಂದ್ರಿಕಾ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಚಂದ್ರಿಕಾ ಸೇರಿ ಭಾರತೀಯ ಮೂಲದ ಕೆಲವರು ಗ್ರ್ಯಾಮಿ 2025 ನಾಮಿನೇಷನ್‌ನಲ್ಲಿ ಇದ್ದರು. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ರಿಕಿ ಕೇಜ್, ಅನುಷ್ಕಾ ಶಂಕರ್ ಮತ್ತು ರಾಧಿಕಾ ವೆಕಾರಿಯಾ ತಂಡ ಚಂದ್ರಿಕಾ ಟಂಡನ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ ಇವರ ತಂಡಕ್ಕೆ ಪ್ರಶಸ್ತಿ ಲಭಿಸಿದೆ.

ಚಂದ್ರಿಕಾ ಅವರ 'ಸೋಲ್ ಕಾಲ್' ಆಲ್ಬಮ್ 2009ರಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ರಶಸ್ತಿ ಗರಿ ಸಿಕ್ಕಿದೆ. ಇನ್ನು ಪ್ರಶಸ್ತಿ ಸಿಕ್ಕ ಸಂತಸವನ್ನು ಚಂದ್ರಿಕಾ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ವಿಶೇಷ. "ನಮ್ಮ ಆಲ್ಬಮ್‌ ಜೊತೆಗೆ ಈ ಕ್ಯಾಟಗರಿಯಲ್ಲಿ ಒಳ್ಳೆ ಆಲ್ಬಮ್‌ಗಳು ನಾಮಿನೇಟ್ ಆಗಿದ್ದವು. ಅದನ್ನೆಲ್ಲಾ ಮೀರಿ ನಾವು ಪ್ರಶಸ್ತಿ ಗೆದ್ದಿದ್ದು ಇನ್ನು ವಿಶೇಷ" ಎಂದು ಹೇಳಿದ್ದಾರೆ.

ಗಾಯನಕ್ಕಾಗಿ ಚಂದ್ರಿಕಾ ಟಂಡನ್ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂದಹಾಗೆ ಆಗಸ್ಟ್ 30ರಂದು ಅವರ 'ತ್ರಿವೇಣಿ' ಆಲ್ಬಮ್ ಬಿಡುಗಡೆ ಆಗಿತ್ತು. 'ಪಾಥ್‌ವೇ ಟು ಲೈಟ್', 'ಜರ್ನಿ ವಿಥಿನ್', 'ಈಥರ್ಸ್ ಸೆರೆನೇಡ್', 'ಏನ್ಸಿಯಂಟ್ ಮೂನ್', 'ಓಪೆನ್ ಸ್ಕೈ', 'ಸೀಕಿಂಗ್ ಶಕ್ತಿ', 'ಚಾಂಟ್ ಇನ್ ಎ' ಹೀಗೆ ಒಟ್ಟು 7 ಹಾಡುಗಳು ಆಲ್ಬಮ್‌ನಲ್ಲಿದೆ.

ಚಿಕ್ಕಂದಿನಿಂದಲೂ ಚಂದ್ರಿಕಾ ಅವರಿಗೆ ಸಂಗೀತದತ್ತ ಒಲವು ಮೂಡಿತ್ತು. ತಾಯಿ ಸಂಗೀತದಲ್ಲಿ ಪಾಂಡಿತ್ಯ ಪಡೆದಿದ್ದರು. ಹಾಗಾಗಿ ಮನೆಯಲ್ಲೇ ಸಂಗೀತದ ಪಾಠ ಶುರುವಾಗಿತ್ತು. ಇನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ರಾಜನ್ ಎಂಬುವವರ ಜೊತೆ ಮದುವೆ ಆಗಿತ್ತು.

More from Filmibeat

English summary
Grammy award 2025; indian-origin vocalist Chandrika Tandon wins Grammy award for Triveni album in Ambient or Chant Album category
Read more about: hollywood award grammy award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X