twitter
    For Quick Alerts
    ALLOW NOTIFICATIONS  
    For Daily Alerts

    ಇನ್ನು ಮುಂದೆ ಇನ್‌ಸ್ಟಾಗ್ರಾಂ ನೋಡಲು ಹಣ ತೆರಬೇಕು!

    |

    ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವಿಯಾಗಿರುವ ಕಾಲವಿದು. ರಾಜಕೀಯ ರಂಗ, ಮನೊರಂಜನಾ ಉದ್ಯಮ ಇತರೆ ಉದ್ಯಮಗಳು ಜನರನ್ನು ತಲುಪಲು, ಜನರ ಆಲೋಚನೆಗಳನ್ನು ಬದಲಿಸಲು ಸಾಮಾಜಿಕ ಜಾಲತಾಣವನ್ನು ತೀವ್ರವಾಗಿ ಬಳಸುತ್ತಿವೆ.

    ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ಯೂಟ್ಯೂಬ್, ವಾಟ್ಸ್‌ಆಪ್‌ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿ ಮೊದಲಿಗೆ ನಿಲ್ಲುವಂಥಹವು. ಇವುಗಳಲ್ಲಿ ಇನ್‌ಸ್ಟಾಗ್ರಾಂ ತುಸು ಭಿನ್ನವಾಗಿ ನಿಲ್ಲುತ್ತದೆ. ಫೋಟೊ, ವಿಡಿಯೋ ಹಂಚಿಕೆಯ ಈ ವೇದಿಕೆ ಸೆಲೆಬ್ರಿಟಿಗಳ ಮೆಚ್ಚಿನ ಜಾಲತಾಣ.

    ಇನ್‌ಸ್ಟಾಗ್ರಾಂನಲ್ಲಿ ಫೋಟೊ, ವಿಡಿಯೋ, ರೀಲ್‌ಗಳನ್ನು ನೋಡಲು ಬಳಕೆದಾರ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ಆದರೆ ಇನ್ನು ಮುಂದೆ ಇನ್‌ಸ್ಟಾಗ್ರಾಂನ ಎಲ್ಲ ಕಂಟೆಂಟ್ ಉಚಿತವಾಗಿರುವುದಿಲ್ಲ, ಹಣ ತೆತ್ತು ಕಂಟೆಂಟ್ ನೋಡಬೇಕಾಗುತ್ತದೆ.

    Instagram Planing To Launch Paid Subscription Model

    ಇನ್‌ಸ್ಟಾಗ್ರಾಂ ಹೊಸದಾಗಿ ಮೂರು ಸಬ್‌ಸ್ಕ್ರೈಬರ್ (ಚಂದಾದಾರ) ಮಾದರಿಗಳನ್ನು ಪರಿಚಯಿಸುತ್ತಿದೆ. ಸಬ್‌ಸ್ಕ್ರೈಬರ್ ಲೈವ್, ಸಬ್‌ಸ್ಕ್ರೈಬರ್ ಸ್ಟೋರಿಸ್, ಸಬ್‌ಸ್ಕ್ರೈಬರ್ ಬ್ಯಾಡ್ಜಸ್ ಎಂಬ ಮೂರು ಮಾದರಿಗಳನ್ನು ಪರಿಚಯಿಸಲಾಗುತ್ತಿದ್ದು, ಹಣ ತೆತ್ತು ಚಂದಾದಾರರಾದವರಷ್ಟೆ ಈ ಮೂರೂ ವಿಭಾಗದಲ್ಲಿ ಹಂಚಿಕೊಳ್ಳಲಾಗುವ ಕಂಟೆಂಟ್ (ವಿಡಿಯೋ, ಫೋಟೊ, ಲೈವ್) ಗಳನ್ನು ನೋಡಲು ಅರ್ಹರಾಗಿರುತ್ತಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಇನ್‌ಸ್ಟಾಗ್ರಾಂ ಸಿಇಓ ಆಡಮ್ ಮೊಸ್ಸೇರಿ, ''ಸಬ್‌ಸ್ಕ್ರೈಬರ್ ಯೋಜನೆ ಮೂಲಕ ಖಾತೆದಾರರು, ಅಥವಾ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ನಂಬುಗೆಯ ಚಂದಾದಾರರು ಅಥವಾ ಫಾಲೋವರ್‌ಗಳ ಜೊತೆಗೆ ಇನ್ನಷ್ಟು ಆತ್ಮೀಯ ಸಂಪರ್ಕವನ್ನು ಹೊಂದಲು ಸಾಧ್ಯ. ಜೊತೆಗೆ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಮಾಸಿಕ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಇದು ನೆರವಾಗಲಿದೆ'' ಎಂದಿದ್ದಾರೆ.

    ಪ್ರಸ್ತುತ ಇನ್‌ಸ್ಟಾಗ್ರಾಂ ಮೂಲಕ ಕಂಟೆಂಟ್ ಕ್ರಿಯೇಟರ್‌ಗಳು ದೊಡ್ಡ ಮೊತ್ತಸ ಸಂಭಾವನೆ ಗಳಿಸಲು ಸಾಧ್ಯವಾಗುತ್ತಿಲ್ಲ. ಇನ್‌ಸ್ಟಾಗ್ರಾಂನ 'ಮಾನಿಟೈಜೇಶನ್' ಯೂಟ್ಯೂಬ್‌ಗೆ ಹೋಲಿಸಿದರೆ ಬಹಳ ಭಿನ್ನವಾಗಿದೆ. ಈಗ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್‌ಗಳು ವಿಶೇಷವಾಗಿ ಸಣ್ಣ ಪ್ರಮಾಣದ ಜನಪ್ರಿಯತೆ ಹೊಂದಿರುವ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್‌ಗಳು ಬ್ರ್ಯಾಂಡ್ ಕೊಲ್ಯಾಬರೇಶನ್ (ಖಾಸಗಿ ಜಾಹೀರಾತು) ಮೂಲಕವಷ್ಟೆ ಆದಾಯ ಗಳಿಸುತ್ತಿದ್ದಾರೆ. ಆದರೆ ಸಬ್‌ಸ್ಕ್ರಿಪ್ಷನ್ ಯೋಜನೆ ಆರಂಭವಾದರೆ ಸಣ್ಣ ಕಂಟೆಂಟ್ ಕ್ರಿಯೇಟರ್‌ಗಳು ಸಹ ಅವರ ಪ್ರತಿಭೆಯ ಅನುಸಾರವಾಗಿ ಹಣ ಮಾಡಬಹುದಾಗಿರುತ್ತದೆ.

    ''ಹಲವು ಕಂಟೆಂಟ್ ಕ್ರಿಯೇಟರ್‌ಗಳು ಕ್ರಿಯಾಶೀಲ ಕಾರ್ಯವನ್ನು ಇನ್‌ಸ್ಟಾಗ್ರಾಂನಲ್ಲಿ ಮಾಡುತ್ತಿದ್ದಾರೆ. ಅಂಥಹವರಿಗೆ ಸಹಾಯ ಮಾಡುವ ಮನಸ್ಸು ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಅಥವಾ ಫಾಲೋವರ್‌ಗಳಿಗೆ ಇದೆ. ಆದರೆ ಹೇಗೆ ಸಹಾಯ ಮಾಡಬಹುದು ಎಂಬುದು ಗೊತ್ತಿಲ್ಲ ಆದರೆ ಇದೀಗ ಸಬ್‌ಸ್ಕ್ರಿಪ್ಷನ್ ಯೋಜನೆ ಬಂದರೆ ಅಂಥಹವರಿಗೆ ಫಾಲೋವರ್‌ಗಳು ನೇರವಾಗಿ ಸಹಾಯ ಮಾಡಬಹುದಾಗಿರುತ್ತದೆ'' ಎಂದಿದ್ದಾರೆ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ನಿಯಾತಿ. 'ಲೆಟ್ಸ್ ಮೇಕ್ ಯು ರಿಚ್' ಹೆಸರಿನ ಪೇಜ್ ಹೊಂದಿದ್ದಾರೆ ಅವರು.

    ಯೂಟ್ಯೂಬ್‌ನಲ್ಲಿ ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದೆ. ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರಿಪ್ಷನ್, ಶುಲ್ಕ ಪಾವತಿಸಿ ಚಂದಾದಾರರಾಗುವುದು ಎರಡೂ ಮಾದರಿಯ ಯೋಜನೆ ಚಾಲ್ತಿಯಲ್ಲಿದೆ. ಶುಲ್ಕ ಪಾವತಿಸಿ ಚಂದಾದಾರರಾದವರಿಗೆ ಕಂಟೆಂಟ್ ಕ್ರಿಯೇಟರ್‌ಗಳು ಪ್ರತ್ಯೇಕ ವಿಡಿಯೋಗಳನ್ನು ವೀಕ್ಷಿಸಲು ನೀಡುತ್ತಾರೆ. ಶುಲ್ಕ ಪಾವತಿಸಿದವರಿಗಾಗಿ ವೀಶೇಷ ಲೈವ್‌ಗಳು, ವಿಶೇಷ ವಿಡಿಯೋಗಳನ್ನು ಪ್ರಕಟಿಸುತ್ತಾರೆ. ಇದರಿಂದ ಸಾಕಷ್ಟು ಹಣವನ್ನು ಯೂಟ್ಯೂಬ್‌ ಕಂಟೆಂಟ್ ಕ್ರಿಯೇಟರ್‌ಗಳು ಗಳಿಸುತ್ತಿದ್ದಾರೆ.

    English summary
    Instagram planing to launch paid subscription model. From this Instagram content creators can earn more money.
    Monday, January 24, 2022, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X