Don't Miss!
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಕರ್ ಗೆದ್ದ ಜೋಕ್ವಿನ್ ಫೀನಿಕ್ಸ್ 'ಜೋಕರ್' ಪಾತ್ರದ ತಯಾರಿ ಹೀಗಿತ್ತು
Recommended Video
ಹಾಲಿವುಡ್ ನ ಖ್ಯಾತ ನಟ ಜಾಕ್ವಿನ್ ಫೀನಿಕ್ಸ್ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಜೋಕರ್ ಸಿನಿಮಾದ ನಟನೆಗಾಗಿ ಜಾಕ್ವಿನ್ ಅವರಿಗೆ ಆಸ್ಕರ್ ಒಲಿದು ಬಂದಿದೆ.
'ಜೋಕರ್' ಹಾಲಿವುಡ್ ಚಿತ್ರರಂಗದ ಮರೆಯಲಾಗದ ಮಾಸ್ಟರ್ ಪೀಸ್ ಪಾತ್ರ. ಮತ್ತೆ ಇದೀಗ ಈ ಪಾತ್ರ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ. ಈ ಜನರೇಶನ್ ಕಂಡ ಅದ್ಬುತ ನಟ ಜೋಕ್ವಿನ್ ಫೀನಿಕ್ಸ್ 'ಜೋಕರ್' ಆಗಿ ಮಿಂಚಿದ್ದಾರೆ.
ಚಿತ್ರಮಂದಿರದಲ್ಲಿ ಜೋಕ್ವಿನ್ ಫೀನಿಕ್ಸ್ ನಟನೆ ನೋಡಿದರೆ ಎದೆ ಬಡಿತ ಹೆಚ್ಚಾಗುತ್ತದೆ. ಅಷ್ಟೊಂದು ಪರಿಣಾಮಕಾರಿ 'ಜೋಕರ್' ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಈಗಾಗಲೇ ಸಾಕಷ್ಟು ಪಾತ್ರಗಳ ಮೂಲಕ ಮೆಚ್ಚುಗೆ ಪಡೆದಿರುವ ಜೋಕ್ವಿನ್ ಫೀನಿಕ್ಸ್ 'ಜೋಕರ್' ಆಗಿ ಮತ್ತೆ ಕಾಡುತ್ತಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಇದೇ ಗುಂಗಿನಲ್ಲಿ ಇರುತ್ತಾರೆ.
ಎಮಿ
ಅವಾರ್ಡ್ಸನಲ್ಲಿ
ಮಿಂಚಿದ
'ಗೇಮ್
ಆಫ್
ಥ್ರೋನ್'ಮತ್ತು
ಫ್ಲೀಬ್ಯಾಗ್
ನಟ, ನಿರ್ಮಾಪಕನಾಗಿ ಸಾಕಷ್ಟು ವರ್ಷಗಳಿಂದ ಹಾಲಿವುಡ್ ನಲ್ಲಿ ಇರುವ ಈ ರಿಯಲಿಸ್ಟಿಕ್ ಆಕ್ಟರ್ ತಮ್ಮ ನಟನೆಗಾಗಿ ಗ್ರಾಮಿ ಅವಾರ್ಡ್, ಗೋಲ್ಡನ್ ಗ್ಲೋಬ್ ಅವಾರ್ಡ್, ಮೂರು ಅಕಾಡಮಿ ಅವಾರ್ಡ್ ಪಡೆದಿದ್ದಾರೆ.
ಅಂದಹಾಗೆ, ನಟ ಜೋಕ್ವಿನ್ ಫೀನಿಕ್ಸ್ 'ಜೋಕರ್' ಪಾತ್ರದ ತಯಾರಿ ಹಾಗೂ ಅವರ ಕುರಿತಾದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿದೆ.

ಜೋಕ್ವಿನ್ ಫೀನಿಕ್ಸ್ 'ಜೋಕರ್' ಆಗಿ ಬದಲಾಗಿದ್ದು ಹೇಗೆ?
'ಜೋಕರ್' ಪಾತ್ರ ಮಾಡಲು ಹೊರಟ ಜೋಕ್ವಿನ್ ಫೀನಿಕ್ಸ್ ಈ ಹಿಂದೆ ಬಂದ ಜೋಕರ್ ಪಾತ್ರಗಳಿಗಿಂತ ಕೊಂಚ ಬಿನ್ನವಾಗಿ ಅದನು ನಿರ್ವಹಿಸಲು ತೀರ್ಮಾನ ಮಾಡಿದರು. ಪಾತ್ರಕ್ಕಾಗಿ ಬರೋಬ್ಬರಿ 23 ಕೆಜಿ ತೂಕ ಕಡಿಮೆ ಮಾಡಿಕೊಂಡರು. ಪರಿಣಾಮ ದಪ್ಪಗಿದ್ದ ಜೋಕ್ವಿನ್ ಫೀನಿಕ್ಸ್ ಮೂಳೆ ಕಾಣುವ ಹಾಗೆ ದೈಹಿಕವಾಗಿ ಬದಲಾದರು. ತೂಕ ಇಳಿಕೆ ಬರೀ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಅವರ ಮೇಲೆ ಪರಿಣಾಮ ಬೀರಿತು.

'ಜೋಕರ್' ನಗುವಿಗಾಗಿಯೇ ದೊಡ್ಡ ತಯಾರಿ
'ಜೋಕರ್' ಪಾತ್ರದ ಮ್ಯಾನರಿಸಂ ಡಿಫರೆಂಟ್ ಆಗಿದೆ. ಅದರಲ್ಲಿಯೂ ಜೋಕರ್ ನಗು ಬೇರೆಯದ್ದೇ ಶೈಲಿಯಲ್ಲಿ ಇದೆ. ಆ ನಗುವಿನ ಸದ್ದು ಮುಂದೆ ಇದ್ದವರಿಗೆ ಕಿರಿ ಕಿರಿ ಅನಿಸುತ್ತದೆ. ಆ ರೀತಿಯ ನಗು ಬರಬೇಕು ಎಂದು ಜೋಕ್ವಿನ್ ಫೀನಿಕ್ಸ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. 1928ರಲ್ಲಿ ಬಂದ 'ದಿ ಮ್ಯಾನ್ ಹೂ ಲಾಫ್' ಮೂಕಿ ಸಿನಿಮಾದ ನಗುವನ್ನು ಹೆಚ್ಚು ಹೆಚ್ಚು ನೋಡುತ್ತಿದ್ದರು. ಒಂದು ಪಾತ್ರದ ನಗುವಿಗಾಗಿಯೇ ಸಾಕಷ್ಟು ದಿನಗಳ ಕಾಲ ತಯಾರಿ ಮಾಡಿಕೊಂಡಿದ್ದರು.
ಬಾಂಡ್
ಸರಣಿಗೆ
ಇನ್ಮುಂದೆ
ಹುಡುಗಿಯರೆ
ಹೀರೋ
ಆಗಲಿ:
ಪಿಯರ್ಸ್
ಬ್ರಾನ್ಸನ್

ಕಾರ್ ಬಂದು ಡಿಕ್ಕಿ ಹೊಡೆದರು ಪಾತ್ರದಿಂದ ಆಚೆ ಬರಲಿಲ್ಲ
ಸಿನಿಮಾ ಹಾಗೂ ತನ್ನ ಪಾತ್ರಕ್ಕಾಗಿ ಏನನ್ನು ಬೇಕಾದರೂ ಮಾಡುವ ನಟ ಜೋಕ್ವಿನ್ ಫೀನಿಕ್ಸ್. ತೆರೆ ಮೇಲೆ ಅವರ ಪಾತ್ರ ಅಷ್ಟೊಂದು ಪರಿಣಾಮಕಾರಿಯಾಗಿ ಬರಲು ಅದೇ ಕಾರಣವಂತೆ. 'ಜೋಕರ್ ಚಿತ್ರೀಕರಣ ವೇಳೆ ಕಾರ್ ಬಂದು ನಿಜವಾಗಿಯೂ ಡಿಕ್ಕಿ ಹೊಡೆದರು ಅವರು ತಮ್ಮ ಪಾತ್ರದಿಂದ ಆಚೆ ಬರದೆ, ನಟನೆ ಮುಂದುವರೆಸಿದ್ದಾರೆ. ಇನ್ನು ಪ್ರತಿ ಸಿನಿಮಾವನ್ನು ತನ್ನ ಮೊದಲ ಸಿನಿಮಾ ಎಂದು ಫೀನಿಕ್ಸ್ ಭಾವಿಸುತ್ತಾರಂತೆ. ಪ್ರತಿ ಸಿನಿಮಾ ಸೆಟ್ ಗೆ ಹೋದಾಗ ಭಯ ಆಗುತ್ತದೆಯಂತೆ.
ಹಾಲಿವುಡ್
ಚಿತ್ರದ
ಪೋಸ್ಟರ್
ಗೆ
ಹೋಲುತ್ತಿದೆ
'ಬುದ್ದಿವಂತ
2'
ಪೋಸ್ಟರ್

ತನ್ನ ಸಿನಿಮಾವನ್ನು ತಾನೇ ನೋಡುವುದಿಲ್ಲ
ಅನೇಕ ನಟರು ತಮ್ಮ ಸಿನಿಮಾವನ್ನು ನೋಡಿ ಮಾಡಿರುವ ಕೆಲಸ ಕಂಡು ಖುಷಿ ಪಡುತ್ತಾರೆ. ಇನ್ನು ಕೆಲವರು ಅಭಿಮಾನಿಗಳ, ಕುಟುಂಬದವರ ಜೊತೆಗೆ ಸಿನಿಮಾ ನೋಡುತ್ತಾರೆ. ಆದರೆ, ನಟ ಜೋಕ್ವಿನ್ ಫೀನಿಕ್ಸ್ ತಾವು ನಟಿಸಿದ ಸಿನಿಮಾವನ್ನು ನೋಡುವುದಿಲ್ಲವಂತೆ. ಇದುವರೆಗೆ ತಮ್ಮ ಎರಡ್ಮೂರು ಸಿನಿಮಾಗಳನ್ನು ಮಾತ್ರ ಫೀನಿಕ್ಸ್ ನೋಡಿದ್ದಾರಂತೆ. ತಮ್ಮ ಸಿನಿಮಾ ನೋಡಿದರೆ, ಮುಂದಿನ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಫೀನಿಕ್ಸ್ ಅಭಿಪ್ರಾಯ.

ಫೀನಿಕ್ಸ್ ಬಗ್ಗೆ ಇತರ ಸಂಗತಿಗಳು
* ಜೋಕ್ವಿನ್ ಫೀನಿಕ್ಸ್ ಟೆಲಿವಿಷನ್ ಮೂಲಕ 11ನೇ ವಯಸ್ಸಿನಲ್ಲಿ ಬಾಲ ನಟನಾಗಿ ನಟನೆ ಶುರು ಮಾಡಿದ್ದರು.
* ಫೀನಿಕ್ಸ್ ಸಸ್ಯಹಾರಿ. ತನ್ನ ಮೂರನೇ ವಯಸ್ಸಿಗೆ ಮಾಂಸ ತಿನ್ನಬಾರದು ಎಂದು ನಿರ್ಧಾರ ಮಾಡಿದ್ದ ಫೀನಿಕ್ಸ್ ಇದುವರೆಗೆ ಮುಟ್ಟಿಲ್ಲ.
* ಗಿಟಾರ್ ಬಾರಿಸುವುದು ಫೀನಿಕ್ಸ್ ಗೆ ಬಹಳ ಇಷ್ಟ. ಚಿತ್ರೀಕರಣದ ವೇಳೆ ಗಿಟಾರ್ ಬಾರಿಸುವ ಮೂಲಕ ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
* ಜೋಕ್ವಿನ್ ಫೀನಿಕ್ಸ್ ಮೂಗಿನ ಕೆಳಗೆ, ತುಂಟಿಯ ಮೇಲೆ ಒಂದು ಸೀಳು ಗೆರೆ ಕಾಣುತ್ತದೆ. ಅದನ್ನು ನೋಡಿದರೆ, ಅಪಘಾತದಲ್ಲಿ ಆದ ಆಗಿದೆ. ಆದರೆ, ಅದು ಹುಟ್ಟಿದಿಂದ ಬಂದಿದೆಯಂತೆ.