twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಪ್ರಶಸ್ತಿ ವಿನ್ಯಾಸದ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯಗಳು

    |

    ವಿಶ್ವ ಚಿತ್ರರಂಗಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಎಂದರೆ ಆಸ್ಕರ್. ಸದ್ಯ, 2020 ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದೆ. ಆದರೆ, ಆಸ್ಕರ್ ಪ್ರಶಸ್ತಿ ಯಾರಿಗೆ ಬಂತು ಎನ್ನುವುದಕ್ಕಿಂತ ಹೆಚ್ಚಾಗಿ, ಆಸ್ಕರ್ ಪ್ರಶಸ್ತಿ ವಿನ್ಯಾಸ ಕಥೆ ತುಂಬ ಕುತೂಹಲಕಾರಿಯಾಗಿದೆ.

    1929 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಮೊದಲ ಬಾರಿಗೆ ನೀಡಲಾಗಿತ್ತು. ಅಲ್ಲಿಂದ ಪ್ರತಿ ವರ್ಷ ವಿಶ್ವದ ಸಿನಿಮಾಗಳನ್ನು ಗಮನಿಸಿ ಅತ್ಯುತ್ತಮ ಸಿನಿಮಾ, ಕಲಾವಿದ ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತಿದೆ.

    ಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

    ಆಸ್ಕರ್ ಪ್ರತಿ ವರ್ಷ ಯಾರು ಯಾರಿಗೆ ಸಿಕ್ತು ಎನ್ನುವುದು ನಿಮಗೆ ತಿಳಿದಿರಬಹುದು. ಆದರೆ, ಆಸ್ಕರ್ ಪ್ರಶಸ್ತಿಯ ತೂಕ ಎಷ್ಟು, ಎತ್ತರ ಎಷ್ಟು, ಅದರ ವಿನ್ಯಾಸ ಏಕೆ ಈ ರೀತಿ ಇದೆ. ಈವರೆಗೆ ಒಟ್ಟು ಎಷ್ಟು ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗಿದೆ ಎನ್ನುವ ಅಂಶಗಳನ್ನು ಅನೇಕರು ಗಮನಿಸಿರುವುದಿಲ್ಲ. ಈ ರೀತಿ ಆಸ್ಕರ್ ಪ್ರಶಸ್ತಿ ಹಿಂದಿನ ಒಂದಷ್ಟು ಸ್ವಾರಸ್ಯಕರ ಸಂಗತಿಗಳು ಇಲ್ಲಿದೆ.

    34 CM ಉದ್ದ, 3.85 ಕೆಜಿ ತೂಕ

    34 CM ಉದ್ದ, 3.85 ಕೆಜಿ ತೂಕ

    ಆಸ್ಕರ್ ಪ್ರಶಸ್ತಿ 34 CM ಉದ್ದ ಹಾಗೂ 13.34 CM ಅಗಲ ಇದೆ. ಪ್ರಶಸ್ತಿ ತೂಕ 3.85 ಕೆಜಿ ಇದೆ. ಪ್ರತಿ ವರ್ಷ ಸುಮಾರು 50 ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುವುದು, ಆ 50 ಪ್ರಶಸ್ತಿಗಳನ್ನು ವಿನ್ಯಾಸ ಮಾಡಲು ಮಾಡಲು ಮೂರ್ನಾಲ್ಕು ತಿಂಗಳು ಸಮಯ ತೆಗೆದುಕೊಳ್ಳಲಾಗುತ್ತದೆ. ಆಸ್ಕರ್ ಪ್ರಶಸ್ತಿಯನ್ನು ಕಂಚಿನ ಲೋಹದಿಂದ ತಯಾರು ಮಾಡಿದ್ದು, ಚಿನ್ನದ ಲೇಪನ ಇರುತ್ತದೆ.

    ಆಸ್ಕರ್ ಅಂಗಳದಲ್ಲಿ ಮಿಂಚಿದ ಪ್ಯಾರಸೈಟ್, ಏನಿದರ ಯಶಸ್ಸಿನ ಗುಟ್ಟು?ಆಸ್ಕರ್ ಅಂಗಳದಲ್ಲಿ ಮಿಂಚಿದ ಪ್ಯಾರಸೈಟ್, ಏನಿದರ ಯಶಸ್ಸಿನ ಗುಟ್ಟು?

    ಈವರೆಗೂ 1178 ಸಿನಿಮಾಗಳಿಗೆ ಆಸ್ಕರ್

    ಈವರೆಗೂ 1178 ಸಿನಿಮಾಗಳಿಗೆ ಆಸ್ಕರ್

    ಈವರೆಗೂ 1178 ಸಿನಿಮಾಗಳಿಗೆ ಮಾತ್ರ ಆಸ್ಕರ್ ಪ್ರಶಸ್ತಿ ದೊರೆತಿದೆ. ಮೊದಲು ಐದು ವಿಭಾಗವನ್ನು ಪ್ರಮುಖವಾಗಿ ಇಟ್ಟುಕೊಂಡು ಈ ಪ್ರಶಸ್ತಿಯನ್ನು ವಿನ್ಯಾಸ ಮಾಡಲಾಗಿತ್ತು. ಪ್ರಶಸ್ತಿಯ ಮೇಲೆ ಐದು ವೃತ್ತಗಳು ಇದ್ದು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಬರೆಹಗಾರರು ಹಾಗೂ ತಂತ್ರಜ್ಞರನ್ನ ಈ ವೃತ್ತಗಳು ಪ್ರತಿನಿಧಿಸುತ್ತವೆ.

    3096 ಆಸ್ಕರ್ ಪ್ರಶಸ್ತಿ ನೀಡಲಾಗಿದೆ

    3096 ಆಸ್ಕರ್ ಪ್ರಶಸ್ತಿ ನೀಡಲಾಗಿದೆ

    ಇಲ್ಲಿಯವರೆಗೆ 3096 ಆಸ್ಕರ್ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗಿದೆ. ದಿ ಅಕಾಡಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ ಅಂಡ್ ಸೈನ್ಸ್ ಸದಸ್ಯರು ಮತ ಹಾಕುವ ಮೂಲಕ ಎಲ್ಲ ವಿಭಾಗದ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಸದ್ಯ 8469 ಅಕಾಡಮಿ ಸದಸ್ಯರನ್ನು ಹೊಂದಿದೆ. ಈ ವರ್ಷ 59 ದೇಶದ ಸದಸ್ಯರನ್ನು ಆಸ್ಕರ್ ಆಯ್ಕೆ ಪ್ರಕ್ರಿಯೆಗಾಗಿ ಆಹ್ವಾನ ಮಾಡಲಾಗಿತ್ತು

    8 ದಿನ, 16 ಗಂಟೆ, 52 ನಿಮಿಷ

    8 ದಿನ, 16 ಗಂಟೆ, 52 ನಿಮಿಷ

    ಈವರೆಗೆ ಆಸ್ಕರ್ ನಲ್ಲಿ ಅತ್ಯುತ್ತಮ ಸಿನಿಮಾ ಆಗಿರುವ ಚಿತ್ರಗಳನ್ನು ನೋಡಲು 8 ದಿನ ಬೇಕಾಗುತ್ತದೆ. ಒಂದು ನಿಮಿಷವೂ ಬ್ರೇಕ್ ಇಲ್ಲದೆ ಎಲ್ಲ ಸಿನಿಮಾ ನೋಡಬೇಕು ಎಂದು ನಿರ್ಧಾರ ಮಾಡಿದರೆ ಸರಿಯಾಗಿ 8 ದಿನ 16 ಗಂಟೆ 52 ನಿಮಿಷ ಆಗುತ್ತದೆ. ಅಂದಹಾಗೆ, ಈವರೆಗೆ ಆಸ್ಕರ್ ಬೆಸ್ಟ್ ಸಿನಿಮಾ ಆಗಿರುವ ಎಲ್ಲ ಸಿನಿಮಾಗಳ ಒಟ್ಟು ಬಜೆಟ್ ಸುಮಾರು 26851 ಕೋಟಿಯಾಗಿದೆ.

    ನಿಜವಾಯ್ತು ನಿರೀಕ್ಷೆ: ಜೋಕರ್ ಗೆ ಸಿಕ್ತು 11 ಆಸ್ಕರ್ ನಾಮಿನೇಷನ್ನಿಜವಾಯ್ತು ನಿರೀಕ್ಷೆ: ಜೋಕರ್ ಗೆ ಸಿಕ್ತು 11 ಆಸ್ಕರ್ ನಾಮಿನೇಷನ್

    English summary
    Interesting facts about Oscar award design.
    Monday, February 10, 2020, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X