twitter
    For Quick Alerts
    ALLOW NOTIFICATIONS  
    For Daily Alerts

    ಇಂಟರ್ನೆಟ್ ಸ್ಥಗಿತ: ಕೆಲ ಕಾಲ ಕಂಗಾಲಾದ ದೈತ್ಯ ಸಂಸ್ಥೆಗಳು

    |

    ಜನಜೀವನದ ಅವಿಭಾಜ್ಯ ಅಂಗವಾಗಿರುವ ಇಂಟರ್ನೆಟ್ ಇಂದು ಕೆಲ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ದೈತ್ಯ ಸಂಸ್ಥೆಗಳೇ ಕೆಲ ಕಾಲ ಕಂಗಾಲಾಗಿ ಹೋದವು.

    Recommended Video

    ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ಸ್ಥಗಿತ:ಕಂಗಾಲಾದ ದೈತ್ಯ ಕಂಪನಿಗಳು | Oneindia Kannada

    ವಿಶ್ವದ ಹಲವು ದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಅಮೆಜಾನ್, ಬಿಬಿಸಿ, ಸರ್ಕಾರಿ ವೆಬ್‌ಸೈಟ್‌ಗಳು, ನ್ಯೂಯಾರ್ಕ್ ಟೈಮ್ಸ್, ರೆಡಿಟ್, ಸ್ಪೂಟಿಫೈ, ಪಿನ್‌ಟ್ರಸ್ಟ್‌, ಬಿಫಂಕಿ ಸೇರಿದಂತೆ ಹಲವು ದೈತ್ಯ ಸಂಸ್ಥೆಗಳ ವೆಬ್‌ಸೈಟ್‌ಗಳು ಕೆಲ ಕಾಲ ಡೌನ್ ಆಗಿದ್ದವು. ಕೆಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳು ಸಹ ಬಂದ್ ಆಗಿದ್ದವು.

    ಯುಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲೌಡ್ ಸಂಸ್ಥೆ ಫಾಸ್ಟ್ಲಿಯಲ್ಲಿ ಕಂಟೆಂಟ್ ಡೆಲಿವರಿ ನೆಟ್‌ವರ್ಕ್‌ ವಿಭಾಗದಲ್ಲಿ ಸಮಸ್ಯೆ ಆಗಿದ್ದ ಕಾರಣ ಈ ಇಂಟರ್ನೆಟ್ ಸ್ಥಗಿತವಾಗಿತ್ತು ಎಂದು ಗಾರ್ಡಿಯನ್ ವರದಿ ಮಾಡಿದೆ.

     Internet Outage: Many Popular Websites Gone Down

    ಹಲವು ವೆಬ್‌ಸೈಟ್‌ಗಳನ್ನು ತೆರೆದಾಗ 'Error 503 Service Unavailable' ಎಂಬ ಸಂದೇಶ ಬರುತ್ತಿತ್ತು. ಸುಮಾರು ಎರಡು ಗಂಟೆಗಳ ಕಾಲ ಈ ಸಮಸ್ಯೆ ಇತ್ತು.

    ಫಾಸ್ಟ್ಲಿ ಸಂಸ್ಥೆಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಂಟೆಂಟ್ ಡೆಲಿವರಿ ನೆಟ್‌ವರ್ಕ್‌ ಆದ ಸಮಸ್ಯೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದೆ. ಸುಮಾರು ಒಂದು ಗಂಟೆಗಳ ಅವಧಿಯಲ್ಲಿ ಸಮಸ್ಯೆಯನ್ನು ಸರಿಪಡಿಸಲಾಗಿದೆ, ಸೇವೆಯನ್ನು ಪುನರ್ಸ್ಥಾಪಿತಗೊಳಿಸಲಾಗಿದ್ದು ಕಾರ್ಯದಕ್ಷತೆ ಪರಿಶೀಲನೆ ಮಾಡಲಾಗುತ್ತಿದೆ ಎಂದಿದೆ ಸಂಸ್ಥೆ.

    English summary
    Internet Outage in many countries. Many Popular Websites Gone Down.
    Tuesday, June 8, 2021, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X