ತನ್ನ ಜೈಲಿನ ಅನುಭವವನ್ನೇ ಸಿನಿಮಾ ಮಾಡಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಗೆದ್ದ ನಿರ್ದೇಶಕ..!

ಪ್ರಶಸ್ತಿಗಳು ಬಂದರೆ ಮಾತ್ರ ಚಿತ್ರ ಗೆದ್ದಂತಲ್ಲ. ಚಿತ್ರ ನೋಡಿದ ಪ್ರೇಕ್ಷಕರು ಕೂಡ ಭೇಷ ಎಂದಾಗಲೇ ಅದು ಚಿತ್ರವೊಂದರ ಗೆಲುವು. ಪ್ರಶಸ್ತಿ ಇವತ್ತ್ ಬಂದರೆ ನಾಳೆ ಮರೆತು ಹೋಗುತ್ತೆ. ಆದರೆ ಚಿತ್ರ ಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದರೆ ಅದು ಮರೆಯಲಾಗದ ನೆನಪು. ಆದರೂ ಕೂಡ ಹಲವರಿಗೆ ಈ ಪ್ರಶಸ್ತಿಯ ಮೇಲೆ ವ್ಯಾಮೋಹ. ಹೀಗಾಗಿ ಜಗತ್ತಿನೆಲ್ಲೆಡೆ ನಡೆಯುವ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ

ತಮ್ಮ ಚಿತ್ರಗಳನ್ನು ಅನೇಕರು ಇಲ್ಲಿ ಕಳುಹಿಸುತ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಹಾಲಿವುಡ್‌ ಸೇರಿ ವಿಶ್ವದೆಲ್ಲೆಡೆ ಇರುವ ಚಿತ್ರರಂಗದಲ್ಲಿನ ಬಹುತೇಕರ ಮನಸ್ಥಿತಿ ಇದೆ.ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಇದೀಗ 78ನೇ ಕಾನ್ ಚಲನಚಿತ್ರೋತ್ಸವದಲ್ಲಿ ಇರಾನ್‌ನ ನಿರ್ದೇಶಕ ಜಾಫರ್ ಪನಾಹಿ ಅವರ ''ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್'' ಚಿತ್ರಕ್ಕೆ ಪ್ರತಿಷ್ಠಿತ ಪಾಮ್ ಡಿ ಓರ್ ಪ್ರಶಸ್ತಿ ಲಭಿಸಿದೆ.

Iranian Revenge Drama It Was Just an Accident Takes Cannes by Storm Wins Palme d Or

ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಟ್ ಬ್ಲಾಂಚೆಟ್ ಈ ಪ್ರಶಸ್ತಿಯನ್ನು ಪನಾಹಿಗೆ ನೀಡಿದರು. ಇನ್ನು ಪನಾಹಿ ಅವರಿಗೆ ಈ ಪ್ರಶಸ್ತಿ ಸಿಕ್ಕ ನಂತರ ಎಲ್ಲರೂ ಕೂಡ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿದರು. ಪನಾಹಿ ಅವರನ್ನು ಅಭಿನಂದಿಸಿದರು. ತಮಗೆ ಸಿಕ್ಕ ಈ ಗೌರವದಿಂದ ಭಾವುಕರಾಗಿದ್ದ ನಿರ್ದೇಶಕ ಜಾಫರ್ ಪನಾಹಿ ನಾವು ಯಾವ ರೀತಿಯ ಬಟ್ಟೆಗಳನ್ನು ಹಾಕಬೇಕು, ನಾವೇನು ಮಾಡಬೇಕು, ನಾವೇನು ಮಾಡಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

ಅಂದ್ಹಾಗೇ 'ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್' ಚಿತ್ರ ನಿರ್ದೇಶಕ ಜಾಫರ್ ಪನಾಹಿ ಅವರ ಜೈಲುವಾಸದ ಅನುಭವದ ಕಥೆ. ಕೈದಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿದಾಗ , ಭಯದ ಕೂಪಕ್ಕೆ ತಳ್ಳಿದಾಗ, ಶೋಷಣೆಗೊಳಗಾಗುವ ವ್ಯಕ್ತಿಯ ಮನಸ್ಥಿತಿಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ.

ಜೈಲಿನಲ್ಲಿದ್ದ ತನ್ನ ಸ್ನೇಹಿತ ರಸೌಲೋಫ್‌ನ ವಿಚಾರಿಸಲು ಜೈಲಿಗೆ ಹೋದ ಸಂದರ್ಭದಲ್ಲಿ ಪನಹಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಉಪವಾಸ ಸತ್ಯಾಗ್ರಹದ ನಂತರ 2023ರಲ್ಲಿ ಅವರನ್ನು ಜೈಲಿಂದ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ತಮ್ಮ ಜೈಲಿನ ಅನುಭವವನ್ನೇ ಚಿತ್ರರೂಪಕವನ್ನಾಗಿಸಿದ್ದಾರೆ ಜಾಫರ್ ಪಹಾನಿ.

ಇದಕ್ಕೂ ಮುನ್ನ 2009ರಲ್ಲಿ ಗ್ರೀನ್ ಮೂವ್ಮೆಂಟ್ ಪ್ರತಿಭಟನೆಯಲ್ಲಿ ಹತ್ಯೆಗೀಡಾದ ವಿದ್ಯಾರ್ಥಿಯ ಅಂತ್ಯಕ್ರಿಯೆಯಲ್ಲಿ ಜಾಫರ್ ಪಹಾನಿ ಭಾಗವಹಿಸಿದ್ದರು. ಇದರಿಂದ ಇರಾನ್ ಗಡಿಯಾಚೆ ಹೋಗಬಾರದು ಎಂದು ಇವರ ಮೇಲೆ ನಿರ್ಬಂಧ ಹೇರಲಾಯ್ತು. ಇರಾನ್ ಆಚೆ ಪ್ರಯಾಣಿಸುವುದನ್ನು ನಿಷೇಧಿಸಲಾಯ್ತು. ಆದರೂ ಕೂಡ ಸಿನಿಮಾ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಇರಾನ್‌ನಲ್ಲಿದ್ದುಕೊಂಡೇ ಜಾಫರ್ ಪನಾಹಿ ಹಲವಾರು ಚಿತ್ರೋತ್ಸವಗಳಿಗೆ ತಮ್ಮ ಚಿತ್ರಗಳನ್ನು ಪೆನ್‌ಡ್ರೈವ್‌ಗಳ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದರು. 2023ರಲ್ಲಿ ಇವರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಹಿಂಪಡೆಯಲಾಯ್ತು.

ಇನ್ನುಳಿದಂತೆ ಲಿಟಲ್ ಸಿಸ್ಟರ್ ಚಿತ್ರದಲ್ಲಿ ಅಭಿನಯಕ್ಕೆ ನಾಡಿಯಾ ಮೆಲ್ಲಿಟಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು. ದಿ ಸೀಕ್ರೆಟ್ ಏಜೆಂಟ್ ಚಿತ್ರಕ್ಕೆ ವ್ಯಾಗ್ನರ್ ಮೌರಾ ಅತ್ತುತ್ತಮ ನಟ ಪ್ರಶಸ್ತಿಯನ್ನು ಪಡೆದರು.

ಇನ್ನು ಈ ವರ್ಷದ ಮಹಿಳಾ ತೀರ್ಪುಗಾರರಲ್ಲಿ ಇಟಾಲಿಯನ್ ನಟಿ ಆಲ್ಬಾ ರೋಹ್ರ್‌ ವಾಚರ್, ಭಾರತೀಯ ಚಲನಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಫ್ರೆಂಚ್-ಮೊರೊಕನ್ ಬರಹಗಾರ್ತಿ ಲೀಲಾ ಸ್ಲಿಮಾನಿ, ಅಮೇರಿಕನ್ ತಾರೆಯರಾದ ಹ್ಯಾಲೆ ಬೆರ್ರಿ ಮತ್ತು ಜೆರೆಮಿ ಸ್ಟ್ರಾಂಗ್, ದಕ್ಷಿಣ ಕೊರಿಯಾದ ಲೇಖಕಿ ಹಾಂಗ್ ಸಾಂಗ್ಸೂ, ಮೆಕ್ಸಿಕನ್ ನಿರ್ದೇಶಕ ಕಾರ್ಲೋಸ್ ರೇಗಡಾಸ್ ಮತ್ತು ಕಾಂಗೋಲೀಸ್ ಚಲನಚಿತ್ರ ನಿರ್ಮಾಪಕ ಡಿಯುಡೊ ಹಮಾಡಿ ಇದ್ದರು. ಸದ್ಯ ಕಾನ್ ಚಿತ್ರೋತ್ಸವದಲ್ಲಿ ಗೆದ್ದ ಎಲ್ಲರಿಗೂ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.

More from Filmibeat

English summary
The Iranian film It Was Just an Accident, a powerful revenge drama, has won the top honor—the Palme d’Or—at the 2025 Cannes Film Festival, highlighting a significant achievement for Iranian cinema on the global stage.
Read more about: cannes awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X