For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟಿಯ ಜೊತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

  |

  ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ಸಹೋದರ ಕರ್ನೇಶ್ ಶರ್ಮಾ ಖ್ಯಾತ ನಟಿ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅನುಷ್ಕಾ ಸಹೋದರ ಡೇಟಿಂಗ್ ಮಾಡುತ್ತಿರುವ ನಟಿ ಮತ್ಯಾರು ಅಲ್ಲ ತೃಪ್ತಿ ಡಿಮ್ರಿ.

  ಅನುಷ್ಕಾ ಶರ್ಮಾ ನಿರ್ಮಾಣದ ಬುಲ್ ಬುಲ್ ನಲ್ಲಿ ನಟಿಸಿದ್ದ ತೃಪ್ತಿ ಡಿಮ್ರಿ, ಕರ್ನೇಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಕಳೆದ ವರ್ಷ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ ಅನುಷ್ಕಾ ನಿರ್ಮಾಣದ ಬುಲ್ ಬುಲ್ ಚಿತ್ರದಲ್ಲಿ ನಟಿಸುವ ಮೂಲಕ ತೃಪ್ತಿ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದರು.

  ಕೋಟ್ಯಂತರ ಹಣ ಸಂಗ್ರಹ, ಗುರಿ ಮುಟ್ಟಿದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿಕೋಟ್ಯಂತರ ಹಣ ಸಂಗ್ರಹ, ಗುರಿ ಮುಟ್ಟಿದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ

  ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಕರ್ನೇಶ್ ಶರ್ಮಾ ಮತ್ತು ತೃಪ್ತಿ ಇಬ್ಬರು ಬುಲ್ ಬುಲ್ ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಶೀಘ್ರದಲ್ಲೇ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿದೆ. ಸಿನಿಮಾ ಮುಗಿದ ಬಳಿಕವೂ ಇಬ್ಬರ ನಡುವೆ ಅದೇ ಸ್ನೇಹ ಮುಂದುವರೆದಿದೆ.

  ಇಬ್ಬರ ನಡುವೆ ವದಂತಿ ಹರಿದಾಡುತ್ತಿದ್ದರೂ ಈ ಬಗ್ಗೆ ಮೌನ ಮುರಿದಿಲ್ಲ. ಇತ್ತೀಚಿಗಷ್ಟೆ ಅನುಷ್ಕಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಕರ್ನೇಶ್ ಮತ್ತು ತೃಪ್ತಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಇಬ್ಬರ ನಡುವಿನ ವದಂತಿಗೆ ಮತ್ತಷ್ಟು ಪುಷ್ಟಿನೀಡಿದೆ.

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada

  2018ರಲ್ಲಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ತೃಪ್ತಿ ಡಿಮ್ರಿ, ಲೈಲಾ ಮಜ್ನು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವಿನಾಶ್ ತಿವಾರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ತೃಪ್ತಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Bollywood Actress Anushka Sharma brother Karnesh Sharma dating with Tripti Dimri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X