ಹಾಲಿವುಡ್ ಚಿತ್ರದ ಪೋಸ್ಟರ್ ಗೆ ಹೋಲುತ್ತಿದೆ 'ಬುದ್ದಿವಂತ 2' ಪೋಸ್ಟರ್

Recommended Video

ಹಾಲಿವುಡ್ ಸಿನಿಮಾ ಕಾಪಿ ಮಾಡಿದ ಉಪೇಂದ್ರ..? | Buddhivantha 2 | FILMIBEAT KANNADA

'ರಾಬರ್ಟ್' 'ಪೈಲ್ವಾನ್', 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಪೋಸ್ಟರ್ ಗಳು ನಕಲಿ ಆಗಿವೆ ಎನ್ನುವ ಆರೋಪ ಕೆಲ ತಿಂಗಳುಗಳ ಹಿಂದೆ ಕೇಳಿ ಬಂದಿತ್ತು. ಈಗ 'ಬುದ್ದಿವಂತ 2' ಚಿತ್ರಕ್ಕೂ ಅದೇ ಮಾತುಗಳು ಕೇಳಿ ಬಂದಿವೆ.

ಉಪೇಂದ್ರ ನಟನೆಯ 'ಬುದ್ದಿವಂತ 2' ಸಿನಿಮಾದ ಹೊಸ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದೆ. ಈ ಪೋಸ್ಟರ್ ಹಾಲಿವುಡ್ ಚಿತ್ರದ ಪೋಸ್ಟರ್ ಗೆ ಹೋಲಿಕೆ ಆಗುತ್ತಿದೆ. ಎರಡು ಪೋಸ್ಟರ್ ಗಳು ನೋಡಲು ಒಂದೇ ರೀತಿ ಇದೆ.

ಹಾಲಿವುಡ್ ನ ಜನಪ್ರಿಯ ಸಿನಿಮಾ 'ಮಿಡ್ ಮ್ಯಾಕ್ಸ್ ಫ್ಯೂರಿ ರೋಡ್' ಚಿತ್ರದ ಒಂದು ಫೋಟೋಗೆ, 'ಬುದ್ದಿವಂತ 2' ಸಿನಿಮಾದ ಪೋಸ್ಟರ್ ಹೋಲಿಕೆ ಆಗುತ್ತಿದೆ. ಉಪೇಂದ್ರ ಮುಖಕ್ಕೆ ಮಾಕ್ಸ್ ಹಾಕಿಕೊಂಡಿರುವುದು, ಕೈ ನಲ್ಲಿ ಚೈನ್ ಹಿಡಿದುಕೊಂಡಿರುವುದು ಎಲ್ಲವೂ ಸೇಮ್ ಟು ಸೇಮ್ ಇದೆ. 'ಮಿಡ್ ಮ್ಯಾಕ್ಸ್ ಫ್ಯೂರಿ ರೋಡ್' ಸಿನಿಮಾ 2015 ರಲ್ಲಿ ಬಿಡುಗಡೆಯಾಗಿದ್ದು, ಒಂದು ಆಕ್ಷನ್ ಸಿನಿಮಾ ಆಗಿತ್ತು.

Is Buddhivantha 2 Movie Posters Copied From Mad Max Fury Road

'ಬುದ್ದಿವಂತ 2' ಸಿನಿಮಾವನ್ನು ಜಯರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಆರ್ ಚಂದ್ರು ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಇದು ಅವರ ಮೊದಲ ಸಿನಿಮಾ. ಟಿ ಆರ್ ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕ.

Is Buddhivantha 2 Movie Posters Copied From Mad Max Fury Road

ಉಪೇಂದ್ರ ಡಿಫರೆಂಟ್ ಸಿನಿಮಾಗಳಿಗೆ, ಹೊಸ ಟ್ರೆಂಡ್ ಗೆ ಹುಟ್ಟಿ ಹಾಕಿ ಗುರುತಿಸಿಕೊಂಡಿರುವ ನಿರ್ದೇಶಕ. ಹೀಗಾಗಿ ಇವರ ಸಿನಿಮಾದ ಪೋಸ್ಟರೇ ಕಾಪಿದ್ಯಾ ಎನ್ನುವ ಅನುಮಾನ ಕಾಡಿದೆ. ಇದು ನಕಲಿಯೋ ಅಥವಾ ಕಾಕತಾಳೀಯವೋ ಎನ್ನುವುದಕ್ಕೆ ಚಿತ್ರತಂಡವೇ ಉತ್ತರ ನೀಡಬೇಕು.

More from Filmibeat

English summary
Is 'Buddhivantha 2' movie posters copied from 'Mad Max Fury Road'?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X