Israeli-Palestinian war: ದೇಶದ ರಕ್ಷಣೆಗಾಗಿ ಇಸ್ರೇಲಿ ರಕ್ಷಣಾ ಪಡೆ ಸೇರಿಕೊಂಡ ಸೂಪರ್ ಹಿಟ್ ಸೀರಿಸ್ 'ಫೌಡಾ' ನಟ ಇಡಾನ್ ಅಮೆಡಿ
ಯುದ್ಧ ಪೀಡಿತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನರಳುತ್ತಿರುವುದು ಅಲ್ಲಿನ ಜನತೆ. ಎರಡೂ ಕಡೆಗಳಲ್ಲಿ ರಕ್ತ ಹರಿಯುತ್ತಿದ್ದು, ಮಕ್ಕಳು, ಮಹಿಳೆಯರ ಸ್ಥಿತಿ ಹೇಳದಂತಾಗಿದೆ. ಇದರ ನಡುವೆ ಅನೇಕ ನಟರು ತಮ್ಮ ದೇಶದ ಪರ ಹೋರಾಡಲು ಸೈನ್ಯಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟ ಲಿಯೋರ್ ರಾಝ್ ಸೇನೆಗೆ ಸೇರಿದ್ದರು.
'ಫೌಡಾ' ಸೂಪರ್ ಹಿಟ್ ಸೀರಿಸ್‌ಲ್ಲಿ ಕಾಣಿಸಿಕೊಂಡಿದ್ದ ಇಸ್ರೇಲಿ ನಟ ಇಡಾನ್ ಅಮೆಡಿ ಇಸ್ರೇಲಿ ರಕ್ಷಣಾ ಪಡೆ ಜೊತೆಗೆ ಸೇರಿಕೊಂಡಿದ್ದಾರೆ. ದೇಶವು ಹಮಾಸ್‌ನೊಂದಿಗೆ ಭೀಕರ ಯುದ್ಧದ ಸ್ಥಿತಿಯಲ್ಲಿರುವಾಗ ತಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದ್ದು, ಈ ಬಗ್ಗೆ ಒಂದು ಭಾವನಾತ್ಮ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ ನಟ ಲಿಯೋರ್ ರಾಝ್ ಇಸ್ರೇಲಿ ರಕ್ಷಣಾ ಪಡೆಯ 'ಬ್ರದರ್ಸ್ ಇನ್ ಆರ್ಮ್ಸ್'ಗೆ ಸ್ವಯಂಸೇವಕರಾಗಿ ಸೇರಿಕೊಂಡಿದ್ದರು. ಇದಾದ ನಂತರ ಅವರದ್ದೇ ದಾತಿ ಅನುಸರಿಸಿರುವ ಫೌಡಾ ಸೀರಿಸ್‌ನಲ್ಲಿ ಸಾಗಿ ತ್ಜುರ್ ಪಾತ್ರದಲ್ಲಿ ಖ್ಯಾತಿ ಗಳಿಸಿದ್ದ ನಟ ಇಡಾನ್ ಅಮೆಡಿ ಅವರು ತಮ್ಮ ದೇಶವನ್ನು ರಕ್ಷಿಸಲು ಇಸ್ರೇಲಿ ರಕ್ಷಣಾ ಪಡೆಗಳನ್ನು ಸೇರಿಕೊಂಡಿದ್ದಾರೆ.

ಇಡಾನ್ ಅಮೆಡಿ ಭಾವನಾತ್ಮಕ ವೀಡಿಯೊ
ಇಡಾನ್ ಅಮೆಡಿ ಭಾವನಾತ್ಮಕ ವೀಡಿಯೊ ಸಂದೇಶದಲ್ಲಿ ಪಡೆಗಳನ್ನು ಸೇರುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಫೌಡಾದಲ್ಲಿ ಅಂಡರ್‌ಕವರ್ ಏಜೆಂಟ್ ಆಗಿ ನಟಿಸಿರುವ ಇಡಾನ್ ಅಮೆಡಿ, "ನೀವು ನೋಡುತ್ತಿರುವಂತೆ, ನಾನು ಇಂದು ಸ್ವಲ್ಪ ವಿಭಿನ್ನವಾದ ಉಡುಪಿನಲ್ಲಿದ್ದೇನೆ. ಏಕೆಂದರೆ ಇದು 'ಫೌಡಾ'ದ ದೃಶ್ಯವಲ್ಲ.... ಇದು ನಿಜ ಜೀವನ" ಎಂದು ಹೇಳಿದ್ದಾರೆ.
ಕೈಯಲ್ಲಿ ಬಂದೂಕು ಹಿಡಿದು ಸೈನಿಕನ ಸಮವಸ್ತ್ರವನ್ನು ಧರಿಸಿರುವ ಇಡಾನ್ ಅಮೆಡಿ, "ಇಸ್ರೇಲ್‌ನ ದಕ್ಷಿಣದಲ್ಲಿ ದಾಳಿಯ ಘಟನೆಗಳು ಪ್ರಾರಂಭವಾಗುತ್ತಿದ್ದಂತೆ ನಮ್ಮ ಸೈನ್ಯವನ್ನು ಶನಿವಾರ ಬೆಳಗ್ಗೆ ಕರೆಸಲಾಯಿತು. ನಾನು ನಿಮಗೆ ಏನು ಹೇಳಲು ಬಯಸಿದ್ದು ಎಂದರೆ, ಭಯಾನಕ ಮತ್ತು ಕೆಟ್ಟ ದಾಳಿಗಳಿಂದ ನಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಎಲ್ಲಿ ಕೊಲ್ಲಲಾಯಿಯೋ ಅಲ್ಲಿ ನಮ್ಮ ನೈತಿಕತೆ ಹೆಚ್ಚಾಗಿರುತ್ತದೆ" ಎಂದು ಭಾವುಕರಾಗಿದ್ದಾರೆ.
"ನಾವು ಈಗ ಏಕೆ ಇಲ್ಲಿದ್ದೇವೆ ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು, ನಮ್ಮ ಕುಟುಂಬಗಳು ಮತ್ತು ನಮ್ಮ ಮನೆಗಳನ್ನು ರಕ್ಷಿಸಲು ನಾವು ಇಲ್ಲಿ ಬಂದಿದ್ದೇವೆ. ಗೆಲ್ಲುವವರೆಗೂ ಶರಣಾಗುವುದಿಲ್ಲ" ಎಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳು ಮತ್ತು ಇಸ್ರೇಲ್‌ನ ಜನರಿಗೆ ಭರವಸೆ ನೀಡಿದ್ದಾರೆ.
ಇನ್ನು, ಸೈನಿಕರಿಗಾಗಿ ಹಲವು ಸಾಮಾಗ್ರಿಗಳನ್ನು ಕಳುಹಿಸಿದ್ದಕ್ಕಾಗಿ ನಟ ಇಸ್ರೇಲಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. "ದಿನವು ಲಕ್ಷಾಂತರ ವಸ್ತುಗಳನ್ನು ನಮಗೆ ಕಳುಹಿಸಲಾಗುತ್ತಿದೆ. ಜೊತೆಗೆ ಸುಂದರವಾಗಿ ಬರೆದ ಪತ್ರಗಳು ಮತ್ತು ಮಕ್ಕಳ ರೇಖಾಚಿತ್ರಗಳು ನಮ್ಮನ್ನು ತಲುಪುತ್ತಿವೆ. ಇದು ನಮಗೆ ಹೆಚ್ಚಿನ ಶಕ್ತಿ ನೀಡುತ್ತದೆ. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ" ಎಂದು ಇಸ್ರೇಲಿನ ಜನರಿಗೆ ಧನ್ಯವಾದ ಹೇಳಿದ್ದಾರೆ. ಇದರ ಜೊತೆಗೆ "ನಾವು ಶೀಘ್ರದಲ್ಲೇ ಮದ್ದು ಗುಂಡುಗಳ ಸದ್ದಿಲ್ಲದ ನಿಶಬ್ಧದ ದಿನಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ನುಶ್ರತ್ ಭರುಚಾ ಕೂಡ ಇಸ್ರೇಲ್‌ನಲ್ಲಿದ್ದ ವೇಳೆ ದಾಳಿಗೆ ಸಿಲುಕಿದ್ದರು ಸುಮಾರು 36 ಗಂಟೆಗಲ ಕಾಲು ನೆಲಮಾಳಿಗೆಯಲ್ಲಿ ಇದ್ದ ಅವರು ಬಳಿಕ ಭಯಾನಕ ಅನುಭವಗಳನ್ನು ಹೊತ್ತು ಭಾರತಕ್ಕೆ ಮರಳಿದ್ದರು. ಇನ್ನು, ಕಿರುತೆರೆ ನಟಿ ಮಧುರಾ ನಾಯ್ಕ್ ತಮ್ಮ ಅಕ್ಕ, ಬಾವನನ್ನು ಮಕ್ಕಳ ಎದುರು ಇಸ್ರೇಲ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಕಣ್ಣೀರಿಟ್ಟಿದ್ದರು.


Click it and Unblock the Notifications











