RRR Naatu Naatu: ಮತ್ತೆ ಜಗತ್ತನ್ನು ಕುಣಿಸಲಿದೆ 'ನಾಟು ನಾಟು': ಆಸ್ಕರ್ ವೇದಿಕೆಯಲ್ಲಿ ಲೈವ್ ಪರ್ಫಾರ್ಮನ್ಸ್

ಕಳೆದೊಂದು ವರ್ಷದಿಂದ 'RRR' ಚಿತ್ರದ 'ನಾಟು ನಾಟು' ಸಾಂಗ್ ಇಡೀ ಪ್ರಪಂಚವನ್ನೇ ಕುಣಿಸುತ್ತಿದೆ. ಈಗ ಆಸ್ಕರ್ ವೇದಿಕೆಯಲ್ಲಿ ಸಾಂಗ್ ಮತ್ತೊಮ್ಮೆ ಮಾರ್ದನಿಸಲಿದೆ. ಮಾರ್ಚ್ 12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವೇದಿಕೆ ಮೇಲೆ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

ಎಂ.ಎಂ ಕೀರವಾಣಿ ಸಂಗೀತದ 'ನಾಟು ನಾಟು' ಹಾಡು ಸೂಪರ್ ಹಿಟ್ ಆಗಿದೆ. ಜಾನಪದ ಟಚ್ ಕೊಟ್ಟು ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿ ಬಹಳ ಸೊಗಸಾಗಿ ಕಟ್ಟಿಕೊಡಲಾಗಿತ್ತು. ಅದಕ್ಕೆ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಜಬರ್ದಸ್ತ್ ಸ್ಟೆಪ್ಸ್ ಹಾಕಿ ಧೂಳೆಬ್ಬಿಸಿದ್ದಾರೆ. ಇತ್ತೀಚೆಗೆ ಈ ಸಾಂಗ್‌ಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಆಸ್ಕರ್‌ ಪ್ರಶಸ್ತಿಗೂ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಪ್ರಶಸ್ತಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಅದೇ ನಿಜವಾದರೇ ಭಾರತೀಯ ಸಿನಿರಸಿಕರ ಬಹುದಿನಗಳ ಕನಸು ನನಸಾಗಲಿದೆ.

it-s-official-naatu-naatu-from-rrr-will-be-performed-live-at-the-oscars-2023-ceremony

ಚಂದ್ರಬೋಸ್ ಸಾಹಿತ್ಯ ಬರೆದಿರುವ 'ನಾಟು ನಾಟು' ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯಲ್ಲಿ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ಸಿಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ವೇದಿಕೆ ಏರಿ ಪರ್ಫಾರ್ಮನ್ಸ್‌ನಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್‌ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಒಟ್ನಲ್ಲಿ ದಕ್ಷಿಣ ಭಾರತ ಸಿನಿಮಾವೊಂದರ ಸಾಂಗ್‌ ಆಸ್ಕರ್ ವೇದಿಕೆಯಲ್ಲಿ ಕೇಳೋದು ಅಂದ್ರೆ ನಿಜಕ್ಕೂ ಹೆಮ್ಮೆಯ ಸಂಗತಿ.

2021ರ ಆಗಸ್ಟ್‌ನಲ್ಲಿ ಸಾಂಗ್ ಶೂಟಿಂಗ್ ಮಾಡಲಾಗಿತ್ತು. ಉಕ್ರೇನ್‌ನಲ್ಲಿ ತಿಂಗಳ ಕಾಲ ಬೀಡುಬಿಟ್ಟು ಸಾಂಗ್ ಸೆರೆ ಹಿಡಿದಿದ್ದರು. ಪ್ರೇಮ್ ರಕ್ಷಿತ್ ಕೊರಿಯೋಗ್ರಫಿಯಲ್ಲಿ ಚರಣ್, ತಾರಕ್ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಇದಕ್ಕಿಂತಲೂ ಕಷ್ಟದ ಸ್ಟೆಪ್ಸ್ ಮಾಡಿ ಇಬ್ಬರಿಗೂ ಅನುಭವ ಇತ್ತು. ಆದರೆ ಇಬ್ಬರು ಒಂದೇ ರೀತಿಯಲ್ಲಿ ಡ್ಯಾನ್ಸ್ ಮಾಡೋಕೆ ಸಾಕಷ್ಟು ಕಷ್ಟಪಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಂಡಿದ್ದರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಡೈರೆಕ್ಟರ್ ರಾಜಮೌಳಿ ಅಷ್ಟು ಸೊಗಸಾಗಿ ಸಾಂಗ್ ಚಿತ್ರೀಕರಣ ನಡೆಸಿದ್ದರು. ಅವರೆಲ್ಲರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತಿದೆ.

it-s-official-naatu-naatu-from-rrr-will-be-performed-live-at-the-oscars-2023-ceremony

ಮಾರ್ಚ್ 12 ಭಾನುವಾರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆಯಲ್ಲಿ ತೆಲುಗು ಸಿನಿಮಾ ಸಾಂಗ್‌ವೊಂದರ ಲೈವ್ ಪರ್ಫಾರ್ಮೆನ್ಸ್ ನಡೆಯುತ್ತಿದೆ ಎನ್ನುವುದು ಸಿನಿರಸಿಕರಿಗೆ ಸಂತಸ ತಂದಿದೆ. ಕಳೆದ ವರ್ಷ ಮಾರ್ಚ್ 25ಕ್ಕೆ 'RRR' ಸಿನಿಮಾ ರಿಲೀಸ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಾಮ್‌- ಭೀಮ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ನಂತರ ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದ ಸಿನಿಮಾ ಹಾಲಿವುಡ್ ಪ್ರೇಕ್ಷಕರನ್ನು ತಲುಪಿತ್ತು. ರಾಜಮೌಳಿ ದೃಶ್ಯಕಾವ್ಯಕ್ಕೆ ಹಾಲಿವುಡ್ ಪ್ರೇಕ್ಷಕರು ಮಾತ್ರವಲ್ಲ, ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದರು.

it-s-official-naatu-naatu-from-rrr-will-be-performed-live-at-the-oscars-2023-ceremony

ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ 'RRR' ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ರೀ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನಿರ್ಮಾಪಕ ಡಿ ವಿ ವಿ ದಾನಯ್ಯ ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದರು.

More from Filmibeat

English summary
it's official: Naatu Naatu From RRR Will Be Performed Live At The Oscars. Singers Kaala Bhairava and Rahul Sipligunj will perform the number with an orchestra. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X