For Quick Alerts
  ALLOW NOTIFICATIONS  
  For Daily Alerts

  ಹಾಟ್ ತಾರೆ ಅನ್ನಾ ಜೊತೆ ಎನ್ರಿಕ್ ಮ್ಯಾಚ್ ಫಿಕ್ಸ್

  By Mahesh
  |

  ಮಿಯಾಮಿಯಲ್ಲಿ ಈಗ ತಾರೆಯರ ಮದುವೆ ಸಂಭ್ರಮ. ಪಾಪ್ ಗಾಯಕ ಎನ್ರಿಕ್ ಇಗ್ಲೇಷಿಯಸ್ ಹಾಗೂ ಟೆನಿಸ್ ತಾರೆ, ರೂಪದರ್ಶಿ ಅನ್ನಾ ಕೊರ್ನಿಕೋವಾ ಅವರು ಗೆಳತನದಿಂದ ವಿವಾಹ ಬಂಧನಕ್ಕೆ ಒಳಪಡುತ್ತಿದ್ದಾರೆ. ಮದುವೆಯಾಗದೆ ಹಲವಾರು ವರ್ಷ ಸತಾಯಿಸಿದ್ದ ಸುಂದರಿ ಅನ್ನಾ ಈಗ 'ಮದುವೆಯಾಗೋಣ ಬಾ..' ಎಂದಿದ್ದಾಳಂತೆ.

  ಲೂಯಿಸ್ ಹ್ಯಾಮಿಲ್ಟನ್, ನಿಕೊಲೊ ಷೆರ್ಝಿಂಗರ್, ಜೆನ್ನಿಫರ್ ಲೊಪೆಜ್, ಇವಾ ಲಾಂಗೊರಿಯಾ, ಡೇವಿಡ್ ಮತ್ತು ವಿಕ್ಟೋರಿಯಾ ಬೆಕೆಮ್ ಸೇರಿದಂತೆ ಕೇವಲ ಆಪ್ತ ವಲಯಕ್ಕೆ ಮಾತ್ರ ವಿವಾಹದ ಕರೆಯೋಲೆ ತಲುಪಿದೆಯಂತೆ. ಸನ್ ಪತ್ರಿಕೆ ವರದಿ ಪ್ರಕಾರ ಮುಂದಿನ ವಾರ ಮದುವೆ ಸಂಗೀತ ಕೇಳಿಸಲಿದೆ.

  2011ರಲ್ಲಿ ಮೊದಲ ಬಾರಿಗೆ ತನ್ನ ಅಭಿಮಾನಿಗಳಿಗೆ ಅನ್ನಾ ತನ್ನ ಗೆಳತಿ ಎಂದು ಎನ್ರಿಕ್ ಪರಿಚಯಿಸಿದ ನಂತರ ಕೊರ್ನಿಕೋವಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು. ಎನ್ರಿಕ್ ನೀಡಿದ್ದ ಸುಮಾರು 30 ಲಕ್ಷ ಪೌಂಡ್ ಬೆಲೆಯ ವಜ್ರದ ಉಂಗುರವನ್ನು ಅನ್ನಾ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಳು.

  ಆದರೆ, ಇಬ್ಬರು ಗುಟ್ಟಾಗಿ ಮದುವೆಯಾಗಿಲ್ಲ ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಐಷಾರಾಮಿ ಮದುವೆಗೂ ಮುನ್ನ ಈ ತಾರಾ ಜೋಡಿಯ ಲವ್ ಬಗ್ಗೆ ಒಂದಷ್ಟು ವಿಷಯ ಮೆಲುಕು ಹಾಕೋಣ ಮುಂದಿನ ಚಿತ್ರಾವಳಿಯಲ್ಲಿ...

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ರಷ್ಯಾ ಮೂಲದ ಟೆನಿಸ್ ತಾರೆ ಅನ್ನಾ ಜೊತೆ ಲವ್ ಪಂದ್ಯ ಆಡುವ ಮೊದಲು ಪ್ಲೇಬಾಯ್ ಮಾಡೆಲ್ ಸಮಂತಾ ಟೊರೆಸ್ ಜೊತೆ ಎನ್ರಿಕ್ ಡೇಟಿಂಗ್ ಮಾಡುತ್ತಿದ್ದ. ಡೇಟಿಂಗ್ ಮುಂದೆ ಲವ್ ಅಫೇರ್ ಆಗಿ ಬೆಳೆದಿತ್ತು. ನಂತರ ಜೆನ್ನಿಫರ್ ಲವ್ ಹೆವಿಟ್, ಕ್ರಿಶ್ಚಿಯಾನಾ ಅಕ್ವಲೆರಾ ಜೊತೆ ಕೂಡಾ ಪ್ರೇಮದಾಟ ನಡೆಸಿದ್ದ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  2001ರಲ್ಲಿ ಅನ್ನಾ ಕೊರ್ನಿಕೋವಾ ಮೇಲೆ ಕಣ್ಣು ಹಾಕಿದ ಆದರೆ, ತಕ್ಷಣಕ್ಕೆ ತನ್ನ ಗೆಳೆತನವನ್ನು ಒಪ್ಪಿಕೊಳ್ಳದೆ ಗುಟ್ಟಾಗೇ ಇಟ್ಟುಕೊಂಡಿದ್ದ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  2008ರ ವೇಳೆಗೆ ಅನ್ನಾ ಕೊರ್ನಿಕೋವಾ ಜೊತೆ ಮದುವೆ ಆಗಿ ಬಿಟ್ಟಿದೆ ಎಂದು ಡೈಲಿ ಸ್ಟಾರ್ ಗೆ ನೀಡಿದ ಸಂದರ್ಶನವೊಂದರಲ್ಲಿ ಸುಳ್ಳು ಹೇಳಿದ್ದ ನಂತರ ಇಬ್ಬರಿಗೂ ವೈಮನಸ್ಯವಾಗಿದೆ ಎಂದು ಹೇಳಿಕೊಂಡು ನಟ, ಗಾಯಕ ಎನ್ರಿಕ್ ತಿರುಗುತ್ತಿದ್ದ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  2010ರ ಗ್ರಹಾಂ ನಾರ್ಟನ್ ಶೋನಲ್ಲಿ ಕೊರ್ನಿಕೋವಾ ತನ್ನ ಗೆಳೆತನವನ್ನು ಒಪ್ಪಿಕೊಂಡಿದ್ದಳು. 8 ವರ್ಷದ ಗೆಳೆತನ ಮುಂದೆ ಮದುವೆ ಹಂತ ತಲುಪುವ ಸೂಚನೆ ಸಿಕ್ಕಿದ್ದೇ ಅನ್ನಾ ಒಪ್ಪಿಕೊಂಡ ನಂತರ ಎನ್ನಬಹುದು

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಟೆನಿಸ್ ತಾರೆ ಅನ್ನಾ ಜೊತೆ ಎನ್ರಿಕ್ ಮದ್ವೆ

  ಕೊನೆಗೂ ಇಬ್ಬರು ತಾರೆಯರು ಎಲ್ಲಾ ಗಾಳಿಸುದ್ದಿಯನ್ನು ಬದಿಗೊತ್ತಿ ಭರ್ಜರಿ ಮದುವೆ ತಯಾರಿಯಲ್ಲಿದ್ದಾರೆ. ಇಬ್ಬರ ಅಭಿಮಾನಿಗಳಿಂದ ತುಂಬು ಹಾರೈಕೆಯ ಮಹಾಪೂರ ಹರಿದಿದೆ.

  English summary
  Singer-songwriter Enrique Iglesias, who has been in relationship with tennis player Anna Kournikova for 13 years, is reportedly set to marry his fiance. According to The Sun, the couple have planned to enter the wedlock at a grand marriage ceremony next week. Their wedding will take place in their home city, Miami and it will be followed by a grand reception to their celebrity friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X