ಹಾಲಿವುಡ್ ಸಿನಿಮಾದಲ್ಲಿ ನಟಿಸದಿರಲು ಕಾರಣ ಕೊಟ್ಟ ಜಾಕಿ ಚಾನ್

ವಿಶ್ವವೇ ಗುರುತಿಸುವ ನಟ ಜಾಕಿ ಚಾನ್. ಚೀನಾ ಭಾಷೆಯ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಖ್ಯಾತಿ ಜಾಕಿ ಚಾನ್ ರದ್ದು. ಅಷ್ಟೇ ಅಲ್ಲದೆ, ಹಲವಾರು ಅತ್ಯುತ್ತಮ ಆಕ್ಷನ್ ಸಿನಿಮಾಗಳನ್ನು ವಿಶ್ವ ಸಿನಿಮಾಕ್ಕೆ ನೀಡಿದ್ದಾರೆ ಜಾಕಿ ಚಾನ್.

ಜಾಕಿ ಚಾನ್ ಹಲವು ವರ್ಷಗಳಿಂದ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಹಾಲಿವುಡ್ ನ ಮಡಿಲಲ್ಲಿಯೇ ಇದ್ದರೂ ಸಹ ಜಾಕಿಚಾನ್ ಹೆಚ್ಚು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಜಾಕಿ ನಟಿಸಿರುವ ಹಾಲಿವುಡ್ ಸಿನಿಮಾಗಳು ಬಹುತೇಕ ಸೂಪರ್ ಹಿಟ್.

ಆದರೆ ತಾವೇಕೆ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ ಜಾಕಿ ಚಾನ್. ನಟ ಕೊಟ್ಟಿರುವ ಕಾರಣ ಮೌಲ್ಯಯುತವಾಗಿಯೇ ಇದೆ.

ಏಳು ವರ್ಷಗಳ ನಂತರ ಹಾಲಿವುಡ್ ಸಿನಿಮಾ

ಏಳು ವರ್ಷಗಳ ನಂತರ ಹಾಲಿವುಡ್ ಸಿನಿಮಾ

ಜಾಕಿ ಚಾನ್ ಈ ವರೆಗೆ ಹಾಲಿವುಡ್‌ ನ ರಶ್ ಹವರ್ ಸರಣಿ, ಶಾಂಘೈ ನೈಟ್ಸ್ ಸರಣಿ ಮತ್ತು ದಿ ಕರಾಟೆ ಕಿಡ್‌, ದಿ ಫಾರಿನರ್, ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿ ಕರಾಟೆ ಕಿಡ್ ಬಿಡುಗಡೆ ಆಗಿ 7 ವರ್ಷಗಳ ನಂತರ ಜಾಕಿ ಚಾನ್ ದಿ ಫಾರಿನರ್ ಸಿನಿಮಾದಲ್ಲಿ ನಟಿಸಿದ್ದರು. ಅದೇ ಅವರ ಈವರೆಗಿನ ಕೊನೆಯ ಹಾಲಿವುಡ್ ಸಿನಿಮಾ ಆಗಿದೆ.

ಬಹುತೇಕ 'ಶಾಂಘೈ ಪೊಲೀಸ್' ಪಾತ್ರಗಳೇ ಬಂದವು: ಜಾಕಿ

ಬಹುತೇಕ 'ಶಾಂಘೈ ಪೊಲೀಸ್' ಪಾತ್ರಗಳೇ ಬಂದವು: ಜಾಕಿ

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾಕಿ ಚಾನ್, 'ದಿ ಕರಾಟೆ ಕಿಡ್' ಸಿನಿಮಾ ಆದ ನಂತರ ಬಹುತೇಕ ಅದೇ ಮಾದರಿಯ ಸಿನಿಮಾಗಳು ನನಗೆ ದೊರೆತವು. ಅವನ್ನು ಬೇಡವೆಂದೆ. ಆ ನಂತರ 'ಶಾಂಘೈ ಪೊಲೀಸ್' ಮಾದರಿಯವೇ ಪಾತ್ರಗಳು ದೊರೆತವು ಹಾಗಾಗಿ ಅವನ್ನೂ ಬೇಡವೆಂದೆ' ಎಂದಿದ್ದಾರೆ.

ಚೀನಾ ಸಿನಿಮಾಗಳಲ್ಲೇ ಹೆಚ್ಚು ನಟನೆ

ಚೀನಾ ಸಿನಿಮಾಗಳಲ್ಲೇ ಹೆಚ್ಚು ನಟನೆ

ಅಮೆರಿಕದಲ್ಲಿದ್ದರೂ ಸಹ ಚೀನಾದ ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಿದ್ದಾರೆ ಜಾಕಿ ಚಾನ್. ಈಗ ಅವರದ್ದೇ ನಿರ್ಮಾಣ ಸಂಸ್ಥೆಯ ಮೂಲಕ ಜನಪ್ರಿಯ 'ರಶ್ ಹವರ್' ಸಿನಿಮಾ ಮೂಲಕ ಮತ್ತೆ ಹಾಲಿವುಡ್ ಸಿನಿಮಾಕ್ಕೆ ಮರಳುತ್ತಿದ್ದಾರೆ. ರಶ್ ಹವರ್ 4 ಚಿತ್ರೀಕರಣ ಆರಂಭಗೊಳ್ಳಲಿದೆ.

ಗಂಭೀರ ಸಿನಿಮಾಗಳಲ್ಲಿ ನಟಿಸಲು ಇಷ್ಟವಂತೆ

ಗಂಭೀರ ಸಿನಿಮಾಗಳಲ್ಲಿ ನಟಿಸಲು ಇಷ್ಟವಂತೆ

ಜಾಕಿ ಚಾನ್‌ಗೆ ಡ್ರಾಮಾ ತುಂಬಿದ, ಹಾಸ್ಯಮಯ, ಗಂಭೀರ ಪಾತ್ರಗಳನ್ನು ಮಾಡಬೇಕೆಂದು ಆಸೆಯಂತೆ. ಅದೇ ಆಕ್ಷನ್ ಸಿನಿಮಾಗಳು ಜಾಕಿ ಚಾನ್‌ಗೆ ಸಾಕಾಗಿದೆಯಂತೆ. ಯಾರಾದರೂ ಗಂಭೀರ ಕತೆ ತೆಗೆದುಕೊಂಡು ಬಂದರೆ ಖಂಡಿತ ಒಪ್ಪುತ್ತೇನೆ ಎಂದಿದ್ದಾರೆ ಜಾಕಿ.

More from Filmibeat

English summary
Jackie Chan opened up about why he is not acting in Hollywood movies. He said he is looking for good script.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X