For Quick Alerts
  ALLOW NOTIFICATIONS  
  For Daily Alerts

  ಪ್ರತಿಷ್ಠಿತ ಜಾಕ್‌ಸನ್ ವನ್ಯಜೀವಿ ಮಾಧ್ಯಮ ಪ್ರಶಸ್ತಿ ಪ್ರಕಟ

  |

  ಪ್ರತಿಷ್ಠಿತ ಜಾಕ್‌ಸನ್ ವನ್ಯಜೀವಿ ಮಾಧ್ಯಮ ಪ್ರಶಸ್ತಿ 2020 ಪ್ರಕಟಗೊಂಡಿದ್ದು, ವನ್ಯಜೀವದ ಹಲವು ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳು, ವಿಡಿಯೋಗಳು ಪ್ರಶಸ್ತಿಗೆ ಭಾಜನವಾಗಿವೆ.

  ಇದೇ ಮೊದಲ ಬಾರಿಗೆ ಜಾಕ್‌ಸನ್ ವನ್ಯಜೀವಿ ಮಾಧ್ಯಮ ಪ್ರಶಸ್ತಿಯನ್ನು ಎರಡು ವರ್ಷಕ್ಕೆ ಬದಲಿಗೆ ಒಂದೇ ವರ್ಷಕ್ಕೆ ಆಯೋಜಿಸಲಾಗಿದ್ದು, ಅಕ್ಟೋಬರ್ 1 ರಂದು ಆನ್‌ಲೈನ್ ಮೂಲಕ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

  ಬರೋಬ್ಬರಿ 620 ವಿಭಾಗಗಳಿಗೆ 30 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ತಮ್ಮ ವನ್ಯಜೀವಿ ವಿಡಿಯೋ ಕಳುಹಿಸಿದ್ದರು. ಆದರೆ 30 ಅತ್ಯುತ್ತಮ ವಿಡಿಯೋಗಳನ್ನು ಮಾತ್ರವೇ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  ಅತ್ಯುತ್ತಮ ಪ್ರಾಣಿ ನಡವಳಿಕೆ (ಲಾಂಗ್ ಫಾರ್ಮ್‌) ನಲ್ಲಿ ಫ್ಯಾಷನ್ ಪ್ಲಾನೆಟ್ ನಿರ್ಮಿಸಿದ್ದ 'ದಿ ಆಕ್ಟೊಪಸ್ ಇನ್ ಮೈ ಹೌಸ್' ಗೆ ಮೊದಲ ಪ್ರಶಸ್ತಿ ಬಂದಿದೆ. ಇದೇ ವಿಭಾಗದ ಶಾರ್ಟ್‌ ಫಾರ್ಮ್‌ ನಲ್ಲಿ 'ದಿಸ್ ಕಿಲ್ಲರ್ ಫಂಗಸ್ ಟರ್ನ್ಸ್ ಫ್ಲೈಸ್ ಇನ್‌ಟು ಜಾಂಬೀಸ್' ಎಂಬ ವಿಡಿಯೋಕ್ಕೆ ಬಂದಿದೆ.

  ಪರಿಸರವ್ಯವಸ್ಥೆ ವಿಭಾಗದಲ್ಲಿ 'ಒಕಾವಾಂಗೊ- ರಿವರ್ ಆಫ್ ಡ್ರೀಮ್ಸ್; ಡಿವೈನ್ ಜರ್ನಿ' ಎಂಬ ಚಲನಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಇದೇ ಮಾದರಿಯ ಕಿರುಚಿತ್ರ ವಿಭಾಗದಲ್ಲಿ 'ಚೇಸಿಂಗ್ ಗೋಟ್ಸ್' ಗೆ ಪ್ರಶಸ್ತಿ ದೊರಕಿದೆ.

  ಭೂಮಿ ಮತ್ತು ಆಕಾಶ ಕುರಿತ ಚಿತ್ರಗಳ ವಿಭಾಗದಲ್ಲಿ 'ದಿ ಎಡ್ಜ್ ಆಲ್ ವಿ ನೋ' ಎಂಬ ವಿಡಿಯೋ ಚಿತ್ರಕ್ಕೆ ಪ್ರಶಸ್ತಿ ದೊರಕಿದೆ. ಪರಿಸರ ಸಂರಕ್ಷಣಾ ವಿಭಾಗದಲ್ಲಿ 'ರೀಫ್ ರೆಸ್ಕ್ಯೂ' ಡಾಕ್ಯುಮೆಂಟರಿಗೆ ಪ್ರಶಸ್ತಿ ದೊರಕಿದೆ. ಇದೇ ಮಾದರಿಯ ಕಿರುಚಿತ್ರ ವಿಭಾಗದಲ್ಲಿ 'ಅಕಾಶಿಂಗಾ; ದಿ ಬ್ರೇವ್ ಒನ್ಸ್' ಗೆ ಪ್ರಶಸ್ತಿ ದೊರಕಿದೆ.

  ಮಾನವ ಮತ್ತು ಪರಿಸರ ವಿಭಾಗದಲ್ಲಿ 'ಮೈ ಅಕ್ಟೋಪಸ್ ಟೀಚರ್' ಹಾಗೂ 'ಅಕಾಶಿಂಗಾ; ದಿ ಬ್ರೇವ್ ಒನ್ಸ್' ಗೆ ಪ್ರಶಸ್ತಿ ಲಭಿಸಿದೆ. ಭೂಗೋಳ ವಿಭಾಗದ ಪ್ರಶಸ್ತಿಯು 'ದಿ ಥಿನ್ ಐಸ್' ಹಾಗೂ 'ಮೆರ್ಮೇಡ್ಸ್ ಅಗೇನ್‌ಸ್ಟ್ ಪ್ಲಾಸ್ಟಿಕ್' ಗೆ ಲಭಿಸಿದೆ.

  ವಿಜ್ಞಾನ ಮತ್ತು ಪರಿಸರ ವಿಭಾಗದ ಪ್ರಶಸ್ತಿಯು 'ಮೈ ಅಕ್ಟೋಪಸ್ ಟೀಚರ್' ಹಾಗೂ 'ಚೇಸಿಂಗ್ ಘೋಸ್ಟ್' ಪಡೆದುಕೊಂಡಿದೆ. ಅತ್ಯುತ್ತಮ ಪ್ರಭಾವ ಅಭಿಯಾನ ವಿಭಾಗದ ಪ್ರಶಸ್ತಿಯು 'ಸೀ ಆಫ್ ಶಾಡೋಸ್'. ಪ್ರಸಾರವಾದ ಅತ್ಯುತ್ತಮ ಕಿರುಚಿತ್ರ ವಿಭಾಗದ ಪ್ರಶಸ್ತಿಯನ್ನು 'ಎನ್‌ಟ್ಯಾಂಗಲ್ಡ್' ಪಡೆದುಕೊಂಡಿದೆ.

  ಅತ್ಯುತ್ತಮ ಸೀಮಿತ ಸರಣಿ (ಲಿಮಿಟೆಡ್ ಸೀರೀಸ್) ವಿಭಾಗದಲ್ಲಿ ಎಚ್‌2ಒ ದಿ ಮಾಲುಕ್ಯೂಲ್ ದಟ್ ಮೇಡ್ ಅಸ್ ಹಾಗೂ ಲಾಸ್ಟ್ ಕಾಲ್ ಫಾರ್ ದಿ ಬಯೋ ಡಾಕ್ಯುಮೆಂಟರಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

  SPB Special : ಉಪೇಂದ್ರ ಹೇಳಿದ್ದ ಮಾತನ್ನು ಚಾಚು ತಪ್ಪದೆ ಕೇಳ್ತಿದ್ರು SPB | V Manohar | Filmibeat Kannada

  ಕೌಟುಂಬಿಕ ಹಾಗೂ ಯುವ ಚಿತ್ರ ವಿಭಾಗದಲ್ಲಿ 'ದಿ ಎಲಿಫೆಂಟ್ ಕ್ವೀನ್' ಪ್ರಶಸ್ತಿ ಪಡೆದುಕೊಂಡಿದೆ. 'ವೈಲ್ಡ್ ಕ್ಯೂಬಾ ಎ ಕೆರೆಬಿಯನ್ ಜರ್ನಿ', ಆಫ್ರಿಕನ್ ಪರ್ಕ್ಸ್; ಪ್ರೊಟೆಕ್ಟೆಡ್ ಏರಿಯಾ ಮ್ಯಾನೇಜ್‌ಮೆಂಟ್, ಲೈಫ್ ಆನ್ ದಿ ರಾಕ್ಸ್, ಎಕೊಸ್ಫೇರ್; ಕೀನ್ಯಾ, ಫ್ಲೈಯಿಂಗ್ ಎಲಿಫೆಂಟ್ಸ್; ಎ ಮದರ್ಸ್ ಹೋಪ್, ಸೆವೆನ್ ವರ್ಲ್ಡ್ ಆನ್ ದಿ ಪ್ಲಾನೆಟ್, ಚಿತ್ರಗಳು ಸಹ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗಳಿಸಿಕೊಂಡಿವೆ.

  English summary
  Jackson wild media awards 2020 announced on October 01.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X