ಬಾಂಡ್ ಸರಣಿಯ 25ನೇ ಚಿತ್ರದ ಟ್ರೈಲರ್ ರಿಲೀಸ್: ಆಕ್ಷನ್ ಗೆ ಅಭಿಮಾನಿಗಳು ಫಿದಾ
ಹಾಲಿವುಡ್ ನ ಪ್ರಸಿದ್ಧ ಬಾಂಡ್ ಸರಣಿಯ ಬಹುನಿರೀಕ್ಷೆಯ 25ನೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಂ ಟು ಡೈ' ಟ್ರೈಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಂಡ್ ಪ್ರಿಯರು ಸುಮಾರು ನಾಲ್ಕು ವರ್ಷದಿಂದ ಕಾತರದಿಂದ ಕಾಯುತ್ತಿದ್ದ ಸಿನಿಮಾದ ಟ್ರೈಲರ್ ನೋಡಿ ಸಂತಸಪಟ್ಟಿದ್ದಾರೆ.
25ನೇ ಜೇಮ್ಸ್ ಆಗಿ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ನಟರಾದ ರೆಮಿ ಮೆಲಿಕ್, ಲಶಾನಾ ಲಿಂಚ್, ರಾರಿ ಕಿನಿಯರ್, ಡೇವಿಡ್ ಬೆನ್ ಸ್ಸಲಾ, ಬೆಸ್ ವಿಶಾ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕ್ಯಾರಿ ಜೋಜಿ ಫುಕುನಾಗಾ ಆಕ್ಷನ್ ಕಟ್ ಹೇಳಿದ್ದಾರೆ.
ಈ ಮೊದಲು ರಿಲೀಸ್ ಆಗಿದ್ದ ಪುಟ್ಟ ಟೀಸರ್ ಕೂಡ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಟ್ರೈಲರ್ ರಿಲೀಸ್ ಆಗಿದ್ದು ಬಾಂಡ್ ಪ್ರಿಯರು ಮುಗಿಬಿದ್ದು ನೋಡುತ್ತಿದ್ದಾರೆ. ಸೂಪರ್ ಆಕ್ಷನ್ ಜೊತೆಗೆ ಲವ್ ಮತ್ತು ಇಮೋಷನ್ ಕೂಡ ಟ್ರೈಲರ್ ನಲ್ಲಿ ನೋಡಬಹುದು.

1962ರಲ್ಲಿ Dr.No ಸಿನಿಮಾದಿಂದ ಪ್ರಾರಂಭವಾದ ಜೇಮ್ಸ್ ಬಾಂಡ್ ಸರಣಿ ಸುಮಾರು 56 ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತ ಬಂದಿದೆ. 25 ಬಾಂಡ್ ಸರಣಿಗಳಲ್ಲಿ ಇದುವರೆಗೂ 7 ಕಲಾವಿದರು ಬಾಂಡ್ ಹೀರೋ ಆಗಿ ಮಿಂಚಿದ್ದಾರೆ. 25ನೇ ಬಾಂಡ್ ಸರಣಿಯ ನಾಯಕ ಡೇನಿಯಲ್ ಕ್ರೇಗ್ ಬಾಂಡ್ ಸರಣಿಯ 7ನೇ ನಾಯಕನಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ 2015ರಲ್ಲಿ 24ನೇ ಬಾಂಡ್ ಸಿನಿಮಾ ಸ್ಪೆಕ್ಟರ್ ರಿಲೀಸ್ ಆಗಿತ್ತು.
ಸದ್ಯ 25ನೇ ಬಾಂಡ್ ಸರಣಿಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಸದ್ಯ ಟ್ರೈಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ, 'ನೋ ಟೈಮ್ ಟು ಡೈ' 2020 ರಲ್ಲಿ ಬಿಡುಗಡೆ ಆಗಲಿದೆ. ಲಂಡನ್ ನಲ್ಲಿ ಏಪ್ರಿಲ್ 3 ರಂದು ಹಾಗೂ ಅಮೆರಿಕಾದಲ್ಲಿ ಏಪ್ರಿಲ್ 8 ರಂದು ಚಿತ್ರ ತೆರೆಗೆ ಬರಲಿದೆ.


Click it and Unblock the Notifications











