ಜೇಮ್ಸ್ ಬಾಂಡ್ ಖ್ಯಾತಿಯ ನಟ ಸರ್ ರೋಜರ್ ಮೂರ್ ಇನ್ನಿಲ್ಲ
ಜೇಮ್ಸ್ ಬಾಂಡ್ ಖ್ಯಾತಿಯ ನಟ ಸರ್ ರೋಜರ್ ಮೂರ್ (89) ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಟ್ವೀಟ್ ಮಾಡಿವೆ.
ಜೇಮ್ಸ್ ಬಾಂಡ್ ಪಾತ್ರದ ಮೂಲಕದ ಜನಪ್ರಿಯತೆ ಗಳಿಸಿದ ಸರ್ ರೋಜರ್ ಮೂರ್ ಅವರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಸ್ವಿಟ್ಜರ್ಲೆಂಡ್ ನಲ್ಲಿ ನಿಧನರಾದ ಮೂರ್ ಅವರು ಕೆಲಕಾಲದಿಂದ ಕ್ಯಾನ್ಸರ್ ಮಾರಿಯನ್ನು ಎದುರಿಸುತ್ತಿದ್ದರು. ಮೊನಾಕೊದಲ್ಲಿ ಖಾಸಗಿಯಾಗಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.[ಸಾಮಾಜಿಕ ಕಳಕಳಿ ಮೂಲಕ 'ಸರ್' ಪದವಿಗೇರಿದ್ದ ಜೇಮ್ಸ್ ಬಾಂಡ್]

ಲಿವ್ ಲೆಟ್ ಡೈ, ದ ಸ್ಪೈ ವೂ ಲವ್ಡ್ ಮಿ ಸೇರಿದಂತೆ 1973 ರಿಂದ 1985 ರ ಅವಧಿಯಲ್ಲಿ ಬ್ರಿಟಿಷ್ ಸಿಕ್ರೇಟ್ ಏಜೆಂಟ್ 'ಜೇಮ್ಸ್ ಬಾಂಡ್' ಆಗಿ ಕಾಣಿಸಿಕೊಂಡ ರೋಜರ್ ಮೂರ್ ಅವರು ಸೀನ್ ಕಾನರಿ ನಂತರ ಪಾತ್ರಕ್ಕೆ ತಕ್ಕ ಹಾವಭಾವ, ನಟನೆ ಮೂಲಕ ಜನಪ್ರಿಯತೆ ಗಳಿಸಿದವರು.
ಲಂಡನ್ನಿನ ಸ್ಕಾಟ್ ವೆಲ್ ನಲ್ಲಿ ಜನಿಸಿದ ಮೂರ್ ಅವರು Royal Academy of Dramatic Arts ಯಲ್ಲಿ ನಟನೆಯ ಎಬಿಸಿಡಿ ಕಲಿತವರು. 1966ರಲ್ಲಿ ಸೀನ್ ಕಾನರಿ ಅವರು ಜೇಮ್ಸ್ ಬಾಂಡ್ ಪಾತ್ರಕ್ಕೆ ಗುಡ್ ಬೈ ಹೇಳಿದ ಮೇಲೆ '007' ಏಜೆಂಟ್ ದಿರಿಸಿನಲ್ಲಿ ಮೂರ್ ಮಿಂಚಿದರು.
More from Filmibeat
English summary
James Bond actor Sir Roger Moore has died aged 89, his family has confirmed. Moore had passed away in Switzerland after a "short but brave battle with cancer" .


Click it and Unblock the Notifications











