»   » ಜೇಮ್ಸ್ ಬಾಂಡ್ 'ಥಂಡರ್‌ಬಾಲ್' ಚಿತ್ರದ ನಟಿ ಮೊಲ್ಲಿ ಪೀಟರ್ಸ್ ನಿಧನ

ಜೇಮ್ಸ್ ಬಾಂಡ್ 'ಥಂಡರ್‌ಬಾಲ್' ಚಿತ್ರದ ನಟಿ ಮೊಲ್ಲಿ ಪೀಟರ್ಸ್ ನಿಧನ

Posted By:
Subscribe to Filmibeat Kannada

ಜೇಮ್ಸ್ ಬಾಂಡ್ ಶರಣಿಯ 1965 ರಲ್ಲಿ ತೆರೆಕಂಡಿದ್ದ ನಾಲ್ಕನೇ ಸಿನಿಮಾ 'ಥಂಡರ್‌ಬಾಲ್'(Thunderbaal)ನಲ್ಲಿ ಅಭಿನಯಿಸಿದ್ದ ನಟಿ ಮೊಲ್ಲಿ ಪೀಟರ್ಸ್(75) ನಿಧನರಾಗಿದ್ದಾರೆ.

ಮೊಲ್ಲಿ ಪೀಟರ್ಸ್ 'ಥಂಡರ್‌ಬಾಲ್' ಚಿತ್ರದಲ್ಲಿ ಸೀನ್ ಕಾನರಿ ಅವರ ಜೊತೆ ಅಭಿನಯಿಸಿದ್ದರು. ಇವರ ನಿಧನದ ಬಗ್ಗೆ ಜೇಮ್ಸ್ ಬಾಂಡ್ ಟ್ವಿಟ್ಟರ್ ಪೇಜ್ ಖಚಿತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಟ್ವಿಟ್ ಮಾಡಲಾಗಿದೆ. ಆದರೆ ಸಾವಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿಲ್ಲ.

James Bond Girl Molly Peters Passes Away At 75

ಇಂಗ್ಲೆಂಡ್ ಮೂಲದ ಖ್ಯಾತ ನಟಿ ಮೊಲ್ಲಿ ಪೀಟರ್ಸ್ 1942 ಮಾರ್ಚ್ 15 ರಂದು ಸಫ್ಫೋಲ್ಕ್'ನ ವಾಲ್ಶಾಮ್-ಲೀ-ವಿಲ್ಲೋಸ್ ಎಂಬ ಗ್ರಾಮದಲ್ಲಿ ಜನಿಸಿದರು. 'ಮೆನ್ಸ್' ಎಂಬ ಮ್ಯಾಗಜೀನ್ ನಲ್ಲಿ ರೂಪದರ್ಶಿಯಾಗಿ ವೃತ್ತಿಯನ್ನು ಆರಂಭಿಸಿ ಪ್ಲೇಬಾಯ್ ಮತ್ತು ಪರೇಡ್ ಎಂಬ ನಿಯತಕಾಲಿಕೆಗಳಲ್ಲಿಯೂ ಮಾಡೆಲ್ ಆಗಿದ್ದರು.

ಮೊಲ್ಲಿ ಪೀಟರ್ಸ್ ರವರು ಹೆಚ್ಚು ಚಿತ್ರಗಳಲ್ಲಿ ಅಭನಯಿಸಿದ್ದರು ಅವರು ಹೆಚ್ಚು ಪ್ರಖ್ಯಾತಿ ಪಡೆದಿದ್ದು ಜೇಮ್ಸ್ ಬಾಂಡ್ ಸೀರೀಸ್ ನ 'ತಂಡರ್‌ಬಾಲ್' ಚಿತ್ರದ ಮೂಲಕ. ಈ ಚಿತ್ರದಲ್ಲಿ ಉಡುಗೆ ವಿಚಾರದಿಂದ ಮೊಲ್ಲಿ ಪೀಟರ್ಸ್ ವಿವಾದಕ್ಕೆ ಒಳಗಾಗಿದ್ದರು. ನಂತರ ಚಿತ್ರದಲ್ಲಿನ ಇವರ ಕೆಲವು ದೃಶ್ಯಗಳನ್ನು ತೆಗೆದು ಬಿಡುಗಡೆ ಮಾಡಲಾಗಿತ್ತು.

James Bond Girl Molly Peters Passes Away At 75

ಜೇಮ್ಸ್ ಬಾಂಡ್ ಚಿತ್ರದ ನಿರ್ದೇಶಕ ಟೆರೆನ್ಸ್ ಯಂಗ್ ರವರು ಮೊಲ್ಲಿ ಪೀಟರ್ಸ್ ರನ್ನು ಅವರ 23 ನೇ ವಯಸ್ಸಿಗೆ ಸೆಲೆಕ್ಟ್ ಮಾಡಿದ್ದರು. 'ಥಂಡರ್‌ಬಾಲ್' ಚಿತ್ರದ ಯಶಸ್ಸಿನ ನಂತರ ಇವರು 'ಟಾರ್ಗೆಟ್ ಫಾರ್ ಕಿಲ್ಲಿಂಗ್', 'ದಾಸ್ ಎಕ್ಸ್ಪೆರಿಮೆಂಟ್', 'ಡೋಂಟ್ ರೈಜ್ ದಿ ಬ್ರಿಡ್ಜ್', ಮತ್ತು ಲೋವರ್ ದಿ ರಿವರ್' ಎಂಬ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ 'ಆರ್ಮ್‌ಚೇರ್ ಥಿಯೇಟರ್' ಮತ್ತು 'ಬಾಕರ್ಸ್ ಹಾಫ್ ಡಜೆನ್' ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರಕೃಪೆ: @007 ಜೇಮ್ಸ್ ಬಾಂಡ್ ಟ್ವಿಟ್ಟರ್ ಪೇಜ್

English summary
James Bond series fourth film 'Tunderball' actress Molly Peters passes away at 75, James Bond Twitter page has confirmed on May 30.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada