twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ ಬಿಡುಗಡೆ ಆಗುತ್ತಿದೆ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ'

    |

    ಕೆಲ ವರ್ಷಗಳಿಂದಲೇ ಬಿಡುಗಡೆಗೆ ಕಾದು ಕುಳಿತಿದ್ದ ಜೇಮ್ಸ್ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ'ನ ಅಧಿಕೃತ ಬಿಡುಗಡೆ ದಿನಾಂಕ ಇದೀಗ ಘೋಷಣೆಯಾಗಿದೆ.

    'ನೋ ಟೈಮ್ ಟು ಡೈ' ಸಿನಿಮಾವು ಸೆಪ್ಟೆಂಬರ್ 30 ರಂದು ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿದೆ. ಭಾರತದಲ್ಲಿ ಬಿಡುಗಡೆ ಆಗುವುದಕ್ಕಿಂತಲೂ ಮೊದಲು ಬ್ರಿಟನ್ ಹಾಗೂ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿದೆ.

    'ನೋ ಟೈಮ್‌ ಟು ಡೈ' ಸಿನಿಮಾದ ಚಿತ್ರಕತೆ ಪೂರ್ಣಗೊಂಡಿದ್ದು 2016ರಲ್ಲಿ. 2018ರಲ್ಲಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಪ್ರಾರಂಭವಾಯ್ತು. ಸಿನಿಮಾದ ಚಿತ್ರೀಕರಣ 2019ರ ಆರಂಭದಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಅಂತ್ಯವಾಗಿ 2020ರ ಆರಂಭದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಆದರೆ ಅದೇ ಸಮಯದಲ್ಲಿ ಕೋವಿಡ್ ಬಂದ ಕಾರಣ ಸಿನಿಮಾ ಬಿಡುಗಡೆ ತಡವಾಗುತ್ತಲೇ ಬಂತು.

    James Bond Movie No Time To Die Releasing In India On September 30

    ಸಿನಿಮಾಕ್ಕೆ ಡಿಸ್ನಿ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂಗಳು ಭಾರಿ ದೊಡ್ಡ ಮೊತ್ತದ ಆಫರ್‌ ಅನ್ನು ನೀಡಿದ್ದರು. ಆದರೆ ಸಿನಿಮಾ ನಿರ್ಮಾಣ ಸಂಸ್ಥೆ ಒಟಿಟಿಗೆ ಮಾರಲು ಒಪ್ಪಿರಲಿಲ್ಲ. ಕೊನೆಗೆ ಈಗ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ.

    'ನೋ ಟೈಮ್ ಟು ಡೈ' ಸಿನಿಮಾವು ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ. 1962 ರಲ್ಲಿ ಜೇಮ್ಸ್ ಬಾಂಡ್ ಸರಣಿ ಸಿನಿಮಾಗಳು ಪ್ರಾರಂಭವಾಗಿ ಇಲ್ಲಿವರೆಗೂ ಬಂದಿವೆ. ಡ್ಯಾನಿಯಲ್ ಕ್ರೇಗ್ ಜೇಮ್ಸ್ ಬಾಂಡ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಡ್ಯಾನಿಯಲ್‌ರ ಐದನೇ ಜೇಮ್ಸ್ ಬಾಂಡ್ ಸಿನಿಮಾ.

    'ನೋ ಟೈಮ್‌ ಟು ಡೈ' ಸಿನಿಮಾವನ್ನು 2100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಸಿನಿಮಾವನ್ನು ಇಟಲಿ, ನಾರ್ವೆ, ಜಮೈಕಾ, ಫೋರ್ಸ್ ಇಲ್ಯಾಂಡ್ಸ್, ನಾರ್ವೆ, ನಿಟ್ಟೆಡಾಲ್ ಇನ್ನೂ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.

    ಸಿನಿಮಾದ ಮತ್ತೊಂದು ವಿಶೇಷವೆಂದರೆ ಇದು ನಟ ಡ್ಯಾನಿಯಲ್ ಕ್ರೇಗ್‌ರ ಕೊನೆಯ ಬಾಂಡ್ ಸಿನಿಮಾ. ಈ ಸಿನಿಮಾದ ಬಳಿಕ ಇನ್ನಾವುದೇ ಬಾಂಡ್ ಸಿನಿಮಾದಲ್ಲಿ ಡ್ಯಾನಿಯಲ್ ಕ್ರೇಗ್ ನಟಿಸುವುದಿಲ್ಲ. ಹೊಸ ನಟನೊಬ್ಬನನ್ನು ಜೇಮ್ಸ್ ಬಾಂಡ್ ಪಾತ್ರಕ್ಕೆ ಹುಡುಕಲಾಗುತ್ತದೆ. ಹೊಸ ಜೇಮ್ಸ್ ಬಾಂಡ್ ಕಪ್ಪುವರ್ಣಿಯನಾಗಿರುತ್ತಾನೆ ಎನ್ನಲಾಗುತ್ತಿದೆ. ಈ ವರೆಗಿನ ಎಲ್ಲ ಜೇಮ್ಸ್ ಬಾಂಡ್‌ಗಳು ಬಿಳಿ ವರ್ಣದ ನಟರೇ ಆಗಿದ್ದಾರೆ.

    'ನೊ ಟೈಮ್ ಟು ಡೈ' ಸಿನಿಮಾವನ್ನು ಕ್ಯಾರಿ ಜೋಜಿ ಫುಕುನಾಗ ನಿರ್ದೇಶನ ಮಾಡಿದ್ದಾರೆ. ಕತೆ-ಚಿತ್ರಕತೆ ಬರೆದಿರುವುದು ನೀಲ್ ಪರ್ವೀಸ್, ಡಾಬರ್ಟ್ ವೇಡ್, ಕ್ಯಾರಿ ಜೋಜಿ ಫುಕುನಾಗ, ವಾಲರ್ ಬ್ರಿಡ್ಜ್. ಸಿನಿಮಾವನ್ನು ಮೆಟ್ರೊ ಗೋಲ್ಡನ್ ಮೇಯರ್ ಮತ್ತು ಇಒನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

    ಸಿನಿಮಾದಲ್ಲಿ ಡ್ಯಾನಿಯಲ್ ಕ್ರೇಗ್ ಎದುರು ವಿಲನ್ ಆಗಿ ರಾಮಿ ಮಲೆಕ್ ನಟಿಸಿದ್ದಾರೆ. ಬಾಂಡ್ ಸಿನಿಮಾ 'ಸ್ಪೆಕ್ಟರ್‌'ನಲ್ಲಿ ನಾಯಕಿಯಾಗಿದ್ದ ಲೀ ಸೆಡೊಕ್ಸ್ ಇದ್ದಾರೆ. ಸಿನಿಮಾದಲ್ಲಿ ಹೊಸ ಏಜೆಂಟ್ ಆಗಿ ಲಶಾನಾ ಲಿಂಚ್ ನಟಿಸಿದ್ದಾರೆ. ಗುಪ್ತಚರ ಸಂಸ್ಥೆಯ ಮುಖ್ಯಸ್ಥ 'ಎಂ' ಪಾತ್ರದಲ್ಲಿ ಬೆನ್ ವಿಶಾವ್ ನಟಿಸಿದ್ದಾರೆ. ಈ ಹಿಂದಿನ ಕೆಲವು ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದ ನಟರು ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ.

    ಸಿನಿಮಾವು ಸೆಪ್ಟೆಂಬರ್ 28ರಂದು ಬ್ರಿಟನ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ ಸೆಪ್ಟೆಂಬರ್ 30 ರಂದು ಭಾರತ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಟೋಬರ್ 08ರಂದು ಅಮೆರಿಕ ಸೇರಿದಂತೆ ಬೇರೆ ಕೆಲವು ದೇಶಗಳಲ್ಲಿ ಬಿಡುಗಡೆ ಆಗಲಿದೆ.

    'ನೋ ಟೈಮ್ ಟು ಡೈ' ಮಾತ್ರವೇ ಅಲ್ಲದೆ 'ಬ್ಲ್ಯಾಕ್ ವಿಡೊ', 'ಶಾಂಗ್ ಚಿ ಆಂಡ್‌ ದಿ ಲಿಜೆಂಡ್ ಆಫ್ ಟೆನ್ ರಿಂಗ್ಸ್', 'ವೆನಮ್; ಲೆಟ್ ದೇರ್ ಬಿ ಕಾರ್ನೆಜ್', 'ಸಿಂಡ್ರೆಲ್ಲಾ' ಇನ್ನೂ ಹಲವು ಹಾಲಿವುಡ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

    English summary
    James Bond movie 'No Time To Die' releasing in India on September 30. Movie will release in USA on October 08.
    Thursday, September 2, 2021, 0:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X