'ಅವತಾರ್' ನೀಡಿದ ಸರ್ಪ್ರೈಸ್: ನಿರೀಕ್ಷೆ ಮಾಡಿದ್ದಕ್ಕಿಂತ ಈ ಸಲ ಡಿಫ್ರೆಂಟ್.!

2009ರಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ್ದ 'ಅವತಾರ್' ಸಿನಿಮಾ ಸುಮಾರು 9 ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ. ಆ ಸಮಯಕ್ಕೆ ಹತ್ತು ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದ ಸೂಪರ್ ಹಿಟ್ ಚಿತ್ರ.

ಈ ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮತ್ತು ತಂಡ ಅವತಾರ್ ಚಿತ್ರದ ಮುಂದುವರೆದ ಭಾಗವನ್ನ ತಯಾರು ಮಾಡುತ್ತಿರುವ ಸುದ್ದಿ ಗೊತ್ತಿದೆ. ಹಲವು ವರ್ಷಗಳಿಂದ ಈ ಮೆಗಾ ಚಿತ್ರಕ್ಕಾಗಿ ಸಾಕಷ್ಟು ಕೆಲಸ ಮಾಡ್ತಿದ್ದಾರೆ.

ಇದೀಗ, ಆಲ್ ಮೋಸ್ಟ್ ಒಂದು ದಶಕವನ್ನ ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದ ನಿರ್ದೇಶಕರು ಸಂಪೂರ್ಣ ಮಾಹಿತಿನ್ನ ಬಿಟ್ಟುಕೊಟ್ಟಿದ್ದಾರೆ. ಸಿನಿಮಾದ ಕೆಲಸ ಹೇಗೆ ನಡೆಯತ್ತಿದೆ. ಯಾವಾಗ ಬಿಡುಗಡೆ, ಈ ಭಾರಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಅವತಾರ್-2 ಚಿತ್ರದಲ್ಲಿ ಏನಿರುತ್ತೆ.? ಜೇಮ್ಸ್ ಕ್ಯಾಮರೂನ್ ಬಿಟ್ಟುಕೊಟ್ಟಿದ್ದೇನು.? ಮುಂದೆ ಓದಿ....

ಪಾರ್ಟ್ 2, ಜೊತೆ ಭಾಗ 3 ಮುಕ್ತಾಯ

ಪಾರ್ಟ್ 2, ಜೊತೆ ಭಾಗ 3 ಮುಕ್ತಾಯ

ಅವತಾರ್-2 ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ಜೇಮ್ಸ್ ಕ್ಯಾಮರೂನ್ ಒಂದೇ ಸಲ ಭಾಗ 2, ಭಾಗ 3ರ ಶೂಟಿಂಗ್ ಕೂಡ ಮುಗಿಸಿದ್ದಾರೆ. ಈ ವಿಷ್ಯವನ್ನ ಖುದ್ದು ನಿರ್ದೇಶಕರೇ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಎರಡು ಭಾಗಗಳ ಚಿತ್ರೀಕರಣ ಮುಗಿಸಿ, ಈಗ ಪೋಸ್ಟ್ ಪ್ರೊಡಕ್ಷನ್ ಆರಂಭಿಸಿದ್ದಾರಂತೆ.

ಕಥೆ ಬಿಟ್ಟು ಕೊಟ್ಟ ಡೈರೆಕ್ಟರ್

ಕಥೆ ಬಿಟ್ಟು ಕೊಟ್ಟ ಡೈರೆಕ್ಟರ್

ಅವತಾರ್ 2 ಸಿನಿಮಾ ಮುಖ್ಯವಾಗಿ ಎಲಿಟಾ ಎಂಬುವರ ಪಾತ್ರದ ಸುತ್ತಾ ನಡೆಯುತ್ತಂತೆ. ಎಲಿಟಾ ಅವರ ಯುದ್ಧ ಸನ್ನಿವೇಶಗಳು ನೋಡುಗರನ್ನ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಂತೆ. ಪ್ರೇಕ್ಷಕರಿಗೆ ಈ ದೃಶ್ಯಗಳು ಸಖತ್ ಥ್ರಿಲ್ ನೀಡಲಿದೆ ಎಂದು ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

ಇದು ಹಳೆಯ ಅವತಾರ್ ಅಲ್ಲ

ಇದು ಹಳೆಯ ಅವತಾರ್ ಅಲ್ಲ

ಅಂದ್ಹಾಗೆ, ಅವತಾರ್ ಸಿನಿಮಾದಲ್ಲಿ ನೋಡಿದ್ದು ಇಲ್ಲಿ ಇರುವುದಿಲ್ಲ. ಅದಕ್ಕಿಂತ ಡಿಫ್ರೆಂಟ್ ಆಗಿ ಹೊಸ ಅವತಾರ್ ಪ್ರೆಸೆಂಟ್ ಮಾಡುತ್ತಿದ್ದಾರಂತೆ. ಎಲಿಟಾ ಎಂಬ ಪಾತ್ರ ಹೇಗೆ ಹುಟ್ಟಿಕೊಳ್ಳುತ್ತೆ ಎಂಬುದನ್ನ ಬಹಳ ರೋಚಕವಾಗಿ, ಬಹಳ ಆಸಕ್ತಿದಾಯಕವಾಗಿ ಚಿತ್ರೀಸಿದ್ದಾರಂತೆ.

ಫೆಬ್ರವರಿ 14 ರಂದು.?

ಅಂದ್ಹಾಗೆ, ಫೆಬ್ರವರಿ 14 ರಂದು ಅವತಾರ್-2 ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರಂತೆ. ಸದ್ಯಕ್ಕೆ ಸಿನಿಮಾ ಯಾವಾಗ ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಬಟ್, 2020ಕ್ಕೆ ಹೊಸ ಅವತಾರ್ ನೋಡಬಹುದು ಎಂಬ ಸುಳಿವು ಮಾತ್ರ ಸಿಕ್ಕಿದೆ.

ಅವತಾರ್ ಗಳಿಸಿದ್ದೆಷ್ಟು.?

ಅವತಾರ್ ಗಳಿಸಿದ್ದೆಷ್ಟು.?

ಡಿಸೆಂಬರ್ 10, 2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಚಿತ್ರ ಅಂದಾಜು 17 ಸಾವಿರ ಕೋಟಿ ರೂಪಾಯಿ (2.7 ಬಿಲಿಯನ್ ಡಾಲರ್) ಗಳಿಸಿತ್ತು. ಅಲ್ಲದೇ 2010 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳನ್ನು 'ಅವತಾರ್' ಚಿತ್ರ ತನ್ನದಾಗಿಸಿಕೊಂಡಿತ್ತು.

More from Filmibeat

English summary
Avatar movie director james cameron has revealed that whilst work continues on the Avatar sequels, the principal cast has now all finished filming for both movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X