ಹುಲಿಗಳ ಜೊತೆ ಶೂಟ್ ಇದ್ರೆ ಹೇಳು ಬರ್ತೀನಿ- ಮೌಳಿ ಬಗ್ಗೆ ಜೇಮ್ಸ್ ಕ್ಯಾಮರೂನ್ ಮಾತು
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆಷ್' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಭಾರತದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಎಸ್. ಎಸ್ ರಾಜಮೌಳಿ ಜೊತೆ ವಿಶೇಷ ಸಂದರ್ಶನದಲ್ಲಿ ಜೇಮ್ಸ್ ಕ್ಯಾಮರೂನ್ ಭಾಗಿ ಆಗಿದ್ದಾರೆ.
'ದಿ ಟರ್ಮಿನೇಟರ್', 'ಟೈಟಾನಿಕ್' ಹಾಗೂ 'ಅವತಾರ್' ಸರಣಿ ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಜೇಮ್ಸ್ ಕ್ಯಾಮರೂನ್ ಕಟ್ಟಿಕೊಟ್ಟಿದ್ದಾರೆ. 2 ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ನೋಡಿ ಅವರು ಮೆಚ್ಚಿಕೊಂಡಿದ್ದರು. 'ವಾರಣಾಸಿ' ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಜೇಮ್ಸ್ ಕ್ಯಾಮರೂನ್ ಬರ್ತಾರೆ ಎನ್ನಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಸದ್ಯ ರಾಜಮೌಳಿ ಜೊತೆ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಅವತಾರ್-3 ಸಿನಿಮಾಗಳಲ್ಲಿ ರಾಜಮೌಳಿ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಜೇಮ್ಸ್ ಕ್ಯಾಮರೂನ್ ಉತ್ತರಿಸಿದ್ದಾರೆ. ಬಳಿಕ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಬಗ್ಗೆ ಹಾಲಿವುಡ್ ಫಿಲ್ಮ್ ಮೇಕರ್ ಕುತೂಹಲಭರಿತವಾಗಿ ಪ್ರಶ್ನಿಸಿದ್ದಾರೆ. ಆ ಚಿತ್ರಕ್ಕಾಗಿ ನಾನು ಕಾಯ್ತಿದ್ದೀನಿ. ಸಿನಿಮಾ ಚಿತ್ರೀಕರಣದ ಸೆಟ್‌ಗೆ ಬಂದು ನೋಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.
ಹಾಲಿವುಡ್ ದಿಗ್ಗಜನ ಮಾತಿಗೆ ಖಂಡಿತ ಬಗ್ಗೆ ಸರ್, ಅದಕ್ಕೇನಂತೆ ಎಂದು ರಾಜಮೌಳಿ ಹೇಳಿದ್ದಾರೆ. ಹುಲಿ ಜೊತೆ ಏನಾದರೂ ಮಜವಾದ ಸನ್ನಿವೇಶದ ಚಿತ್ರೀಕರಣ ಇದ್ದರೆ ಹೇಳಿ ಎಂದು ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ. 'RRR' ಚಿತ್ರದಲ್ಲಿ ಹುಲಿ ಸೆಣಸಾಡುವ ದೃಶ್ಯಗಳಿತ್ತು. ಆರಂಭದಲ್ಲಿ ಕೋಮುರಂ ಭೀಮ್(ಜ್ಯೂ. ಎನ್‌ಟಿಆರ್) ಪಾತ್ರ ಪರಿಚಯಿಸುವಾಗ ಹೆಬ್ಬುಲಿಯಿಂದ ತಪ್ಪಿಸಿಕೊಳ್ಳುವುದು ಹಾಗೂ ಪ್ರೀ ಇಂಟರ್‌ವಲ್ ಬ್ಲಾಕ್‌ನಲ್ಲಿ ಏಕಾಏಕಿ ಕ್ರೂರ ಮೃಗಗಳು ಬ್ರಿಟೀಷರ ಕೋಟೆಗೆ ನುಗ್ಗುವ ಸನ್ನಿವೇಶ ಅದು. ಈ ಎರಡು ಸನ್ನಿವೇಶಗಳು ಪ್ರೇಕ್ಷಕರಿಗೆ ಮಜಾ ಕೊಟ್ಟಿತ್ತು.
ಜೇಮ್ಸ್ ಕ್ಯಾಮರೂನ್ ಕೂಡ ಈ ಎರಡು ಸನ್ನಿವೇಶಗಳನ್ನು ಇಷ್ಟಪಟ್ಟಿದ್ದರು. ರಾಜಮೌಳಿ ವಿಷನ್, ಮೇಕಿಂಗ್ ಗಮನ ಸೆಳೆದಿತ್ತು. ಸಿಜಿ ಬಳಸಿ ಆ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದರೂ ಬಹಳ ನೈಜವಾಗಿ ಮೂಡಿಬಂದಿತ್ತು. ಇದೇ ಕಾರಣಕ್ಕೆ ಅಂತಹ ಸನ್ನಿವೇಶಗಳು ಇದ್ದರೆ ಹೇಳು ಸೆಟ್‌ಗೆ ಬರ್ತೀನಿ ಎಂದು ಜೇಮ್ಸ್ ಕ್ಯಾಮರೂನ್ ಈಗ ಹೇಳಿದ್ದಾರೆ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ 'ವಾರಣಾಸಿ' ಸಿನಿಮಾ ಮೂಡಿ ಬರ್ತಿದೆ.
ಇನ್ನು ಏಳೆಂಟು ತಿಂಗಳಲ್ಲಿ 'ವಾರಣಾಸಿ' ಸಿನಿಮಾ ಚಿತ್ರೀಕರಣ ಮುಗಿಯುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ. 2027ರ ಸಮ್ಮರ್ ವೇಳೆಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಹಾಲಿವುಡ್ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿ ಜಕ್ಕಣ್ಣ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.
'ವಾರಣಾಸಿ' ಚಿತ್ರವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಅದಕ್ಕಾಗಿ ಹಾಲಿವುಡ್ ಸಂಸ್ಥೆಗಳ ಜೊತೆ ಮೌಳಿ ಕೈ ಜೋಡಿಸುತ್ತಿದ್ದಾರೆ. ಮಹೇಶ್ ಬಾಬು ಹೀರೊ ಆಗಿ ನಟಿಸುತ್ತಿದ್ದು ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ತಾರಾಗಣದಲ್ಲಿದ್ದಾರೆ. ಕೆ ಎಲ್ ನಾರಾಯಣ, ಎಸ್. ಎಸ್. ಕಾರ್ತಿಕೇಯ ಹಾಗೂ ಎಸ್.ಗೋಪಾಲ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ದೇಶ ವಿದೇಶಗಳಲ್ಲಿ ಸಾಗುವ ಕತೆ 'ವಾರಣಾಸಿ' ಚಿತ್ರದಲ್ಲಿದೆ. ತ್ರೇತಾಯುಗ, ಕಲಿಯುಗಕ್ಕೆ ಲಿಂಕ್ ಮಾಡಿ ಜಕ್ಕಣ್ಣ ಕಥೆ ಮಾಡಿದ್ದಾರೆ. ವಾರಣಾಸಿಯಿಂದ ಅಂಟಾರ್ಟಿಕಾ ಖಂಡದವರೆಗೆ ಚಿತ್ರದ ಕಥೆ ಸಾಗಲಿದೆ. ಈಗಾಗಲೇ ಒರಿಸ್ಸಾ, ಹೈದರಾಬಾದ್ ಹಾಗೂ ಆಫ್ರಿಕಾದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ಕೂಡ ಮಹೇಶ್ ಬಾಬು ಅವರನ್ನು ತೋರಿಸುವ ಪ್ರಯತ್ನ ನಡೀತಿದೆ.


Click it and Unblock the Notifications











