ಲೈಂಗಿಕ ದೌರ್ಜನ್ಯ ಆರೋಪ ಒಪ್ಪಿಕೊಂಡ ನಟ: ಸೆಕ್ಸ್ ಈತನಿಗೆ ಚಟವಂತೆ!

ಹಾಲಿವುಡ್ ಜನಪ್ರಿಯ ನಟ ಜೇಮ್ಸ್ ಫ್ರಾಂಕೋ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ತಮ್ಮ ನಟನಾ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ತಾವು ಲೈಂಗಿಕ ಸಂಪರ್ಕ ನಡೆಸಿದ್ದು ನಿಜ ಎಂದಿದ್ದಾರೆ.

ತಮಗೆ ಲೈಂಗಿಕತೆ ಚಟವಾಗಿದ್ದು ಈ ಚಟದಿಂದ ಹೊರಗೆ ಬರುವ ಪ್ರಯತ್ನದಲ್ಲಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಜೇಮ್ಸ್ ಫ್ರಾಂಕೋ.

ಕೆಲ ವರ್ಷಗಳ ಹಿಂದೆ ಜೇಮ್ಸ್ ಫ್ರಾಂಕೊ ನಟನಾ ಶಾಲೆಯೊಂದನ್ನು ನಡೆಸುತ್ತಿದ್ದರು. ತಮ್ಮದೇ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅವರು ಸತತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು. ಈ ಬಗ್ಗೆ 2019 ರಲ್ಲಿ ದೂರು ದಾಖಲಾಗಿತ್ತು.

James Franco Accepts His Wrong Doings With His Acting Class Students

ಜೇಮ್ಸ್ ಫ್ರಾಂಕೊ ತನ್ನ ನಟನಾ ತರಗತಿ ವಿದ್ಯಾರ್ಥಿನಿಯರಿಗೆ ಸಿನಿಮಾ ಪಾತ್ರ ನೀಡುವುದಾಗಿ ಸುಳ್ಳು ಹೇಳಿ, ನಟನೆ ಹೇಳಿಕೊಡುವುದಾಗಿ ಪುಸಲಾಯಿಸಿ, ಸೆಕ್ಸ್ ದೃಶ್ಯಗಳಲ್ಲಿ ನಟಿಸುವುದನ್ನು ಹೇಳಿಕೊಡುವುದಾಗಿ ನಂಬಿಸಿ ಅವರೊಟ್ಟಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದಾನೆ ಎಂದು ಆರೋಪ ಹೊರಿಸಲಾಗಿತ್ತು. ಆರೋಪಗಳನ್ನು ನಟ ಜೇಮ್ಸ್ ಒಪ್ಪಿಕೊಂಡಿದ್ದಾರೆ.

ಇದೀಗ ತಮ್ಮ ತಪ್ಪನ್ನು ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವ ನಟ ಜೇಮ್ಸ್ ಫ್ರಾಂಕೊ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು 17 ಕೋಟಿ ಹಣ ನೀಡಲು ಒಪ್ಪಿಕೊಂಡಿದ್ದಾರೆ.

ಬಹಳ ಸಣ್ಣ ವಯಸ್ಸಿನಲ್ಲಿಯೇ ಜೇಮ್ಸ್‌ಗೆ ಮದ್ಯಪಾನದ ಚಟವಿತ್ತು. ಬಹು ವರ್ಷಗಳ ಬಳಿಕ ಆ ಚಟದಿಂದ ಬಿಡುಗಡೆ ಹೊಂದಿದ ಜೇಮ್ಸ್‌ಗೆ ನಂತರ ದಿನಗಳಲ್ಲಿ ಸೆಕ್ಸ್‌ ಚಟ ಹತ್ತಿತ್ತು ಎಂದು ಜೇಮ್ಸ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ನಟ ಜೇಮ್ಸ್ ಫ್ರಾಂಕೊ ನಾನು ನನ್ನ ಲೈಂಗಿಕತೆಯ ಚಟದಿಂದ ಹೊರಗೆ ಬರಲು ಯತ್ನಿಸುತ್ತಿದ್ದೇನೆ. 2016ರಿಂದಲೂ ಈ ಕಾರ್ಯದಲ್ಲಿ ನಾನು ನಿರತನಾಗಿದ್ದೇನೆ. ವೈದ್ಯರ ಸಹಾಯ ಪಡೆದುಕೊಳ್ಳುತ್ತಿದ್ದೇನೆ. ನನಗೆ ಬೇರೆ ವ್ಯಕ್ತಿಗಳಿಗೆ ಕಷ್ಟ ಕೊಡುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಜೇಮ್ಸ್ ಫ್ರಾಂಕೊ ಹಾಲಿವುಡ್‌ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸ್ಪೈಡರ್‌ಮ್ಯಾನ್' 'ಸ್ಪೈಡರ್‌ಮ್ಯಾನ್ 2', 'ಸ್ಪೈಡರ್‌ಮ್ಯಾನ್ 3', 'ದಿ ಏಪ್ಸ್', 'ಆನ್ ಅಮೆರಿಕನ್ ಕ್ರೈಂ' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಜೇಮ್ಸ್ ಫ್ರಾಂಕೊ ನಟಿಸಿರುವ '127 ಹವರ್ಸ್' ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾಕ್ಕೆ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು. 2009 ರಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ನಿರೂಪಣೆ ಮಾಡಿದ್ದರು ಜೇಮ್ಸ್ ಫ್ರಾಂಕೊ.

More from Filmibeat

English summary
Hollywood actor James Franco accepts his wrong doings with his acting class students. He agrees to pay 2.20 million dolor to settle the case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X