twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್‌ಗೆ ಬಲಿಯಾದ ಜಪಾನ್ ಹಾಸ್ಯ ನಟ ಶಿಮುರಾ

    |

    ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಪಾನ್‌ನ ಖ್ಯಾತ ಹಾಸ್ಯ ನಟ ಕೆನ್ ಶಿಮುರಾ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೈರಸ್‌ಗೆ ಬಲಿಯಾದ ಜಪಾನ್‌ನ ಮೊದಲ ಸೆಲೆಬ್ರಿಟಿ ಎನಿಸಿದ್ದಾರೆ. ಭಾನುವಾರ ರಾತ್ರಿ ಅವರು ಮೃತಪಟ್ಟಿದ್ದು, ಅವರ ಸಾವಿಗೆ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

    Recommended Video

    K.G.F Kannada movie : ಕೆ.ಜಿ.ಎಫ್ ಸಿನಿಮಾದ ಮೂರನೇ ಡೈಲಾಗ್ ವೈರಲ್..! | Filmibeat Kannada

    70 ವರ್ಷದ ಶಿಮುರಾ, ಜಪಾನ್‌ನ ಪ್ರಸಿದ್ಧ ಹಾಸ್ಯನಟರಲ್ಲಿ ಒಬ್ಬರು. 1970ರಲ್ಲಿ ನಟನೆಯ ವೃತ್ತಿ ಆರಂಭಿಸಿದ ಅವರು, 2016ರಲ್ಲಿ ಶ್ವಾಸಕೋಶದ ಶಸ್ತ್ರಚಿಕಿತ್ಸಗೆ ಒಳಗಾಗಿದ್ದರು. ಮಾರ್ಚ್ 19ರಂದು ಅವರಲ್ಲಿ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು.

     Japanese Comedian Ken Shimura Dies Of Coronavirus

    ಕೊರೊನಾ ವೈರಸ್‌ಗೆ ಹಿರಿಯ ಹಾಲಿವುಡ್ ನಟ ಮಾರ್ಕ್ ಬ್ಲಮ್ ಬಲಿಕೊರೊನಾ ವೈರಸ್‌ಗೆ ಹಿರಿಯ ಹಾಲಿವುಡ್ ನಟ ಮಾರ್ಕ್ ಬ್ಲಮ್ ಬಲಿ

    1970-1980ರ ದಶಕದಲ್ಲಿ ಟೆಲಿವಿಷನ್ ಹಾಸ್ಯ ಕಾರ್ಯಕ್ರಮಗಳಲ್ಲಿ ಶಿಮುರಾ ಇರಲೇಬೇಕು ಎನ್ನುವಷ್ಟು ಅವರು ಪ್ರಸಿದ್ಧರಾಗಿದ್ದರು. ಜಪಾನ್ ಸರ್ಕಾರ ಕೂಡ ಶಿಮುರಾ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.

    English summary
    Japanese comedian Ken Shimura (70) has died after hospitalised due to coronavirus.
    Monday, March 30, 2020, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X