For Quick Alerts
  ALLOW NOTIFICATIONS  
  For Daily Alerts

  ನನ್ನ ಜನನಾಂಗದ ಕಾರಣದಿಂದ ನನಗೆ ಹಣ ಕಡಿಮೆ ಕೊಡುತ್ತಾರೆ: ಆಕ್ರೋಶ ಹೊರಹಾಕಿದ ನಟಿ

  |

  ಆಸ್ಕರ್ ವಿಜೇತ ಹಾಲಿವುಡ್ ನಟಿ ಜೆನ್ನಿಫರ್ ಲಾರೆನ್ಸ್ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ. ಸಂದರ್ಶನಗಳಲ್ಲಿ ತಮಾಷೆಯಾಗಿ ಮಾತನಾಡುವ ಜೆನ್ನಿಫರ್, ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತನ್ನ ಜನನಾಂಗದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.

  ಸಿನಿಮಾ ರಂಗದಲ್ಲಿ ಲಿಂಗ ತಾರತಮ್ಯದ ಬಗ್ಗೆ ನಟಿ ಜೆನ್ನಿಫರ್ ಲಾರೆನ್ಸ್ ಹಲವು ವರ್ಷಗಳಿಂದ ದನಿ ಎತ್ತುತ್ತಲೇ ಬಂದಿದ್ದಾರೆ. ಆಸ್ಕರ್ ವಿಜೇತ ನಟಿಯಾಗಿದ್ದರೂ ಸಹ ಸಿನಿಮಾಗಳಲ್ಲಿ ತಮ್ಮ ಸಹನಟರಿಗಿಂತಲೂ ಕಡಿಮೆ ಸಂಭಾವನೆ ಪಡೆಯುತ್ತಿರುವ ಬಗ್ಗೆ ಜೆನ್ನಿಫರ್ ಈ ಮೊದಲೂ ಅಸಮಾಧಾನ ವ್ಯಕ್ತಪಡಿಸಿದ್ದರು.

  ಬ್ಯಾಟ್‌ಮ್ಯಾನ್‌ಗೆ ಪತ್ನಿಯಾದ ಜೆನ್ನಿಫರ್ ಲೊಪೇಜ್: ನಾಲ್ಕನೇ ಮದುವೆಬ್ಯಾಟ್‌ಮ್ಯಾನ್‌ಗೆ ಪತ್ನಿಯಾದ ಜೆನ್ನಿಫರ್ ಲೊಪೇಜ್: ನಾಲ್ಕನೇ ಮದುವೆ

  ಇದೀಗ ವೋಗ್‌ ಮ್ಯಾಗಜೀನ್‌ಗೆ ನೀಡಿರುವ ಸಂದರ್ಶನದಲ್ಲಿ ಮತ್ತೊಮ್ಮೆ ಈ ಬಗ್ಗೆ ತುಸು ಖಾರವಾಗಿಯೇ ಮಾತನಾಡಿರುವ ಜೆನ್ನಿಫರ್ ಲಾರೆನ್ಸ್, ''ನಾನು ಎಷ್ಟು ಕಷ್ಟಪಡುತ್ತೇನೆ ಎಂಬುದು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ನಾನು ಪಾತ್ರಕ್ಕಾಗಿ ಎಷ್ಟೇ ಕಷ್ಟಪಟ್ಟರು ನನ್ನ ಸಹನಟನಿಗಿಂತಲೂ ಕಡಿಮೆ ಸಂಭಾವನೆಯನ್ನೇ ನೀಡಲಾಗುತ್ತದೆ. ನನಗೆ ಯೋನಿ ಇರುವುದೇ ಕಾರಣ ಎನಿಸುತ್ತದೆ'' ಎಂದು ಖಾರವಾಗಿ ಹೇಳಿದ್ದಾರೆ.

  ಅದು ಮಾತ್ರವೇ ಅಲ್ಲದೆ, ಲಿಂಗ ತಾರತಮ್ಯ, ಅಮೆರಿಕ ರಾಜಕೀಯದಲ್ಲಿನ ಸ್ತ್ರೀ ದ್ವೇಷ ಇನ್ನೂ ಹಲವು ವಿಷಯಗಳ ಬಗ್ಗೆ ನಿರ್ಭಿಡೆಯಿಂದ ನಟಿ ಮಾತನಾಡಿದ್ದಾರೆ.

  ಇತ್ತೀಚೆಗಷ್ಟೆ ತಾಯಿಯಾಗಿರುವ ಜೆನ್ನಿಫರ್ ಲಾರೆನ್ಸ್ ತಾಯ್ತನದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದಾರೆ ಹಾಗೂ ತಾಯಿಯಾಗುವ ಮುನ್ನ ಎರಡು ಬಾರಿ ಗರ್ಭಪಾತವಾಗಿದ್ದ ಸಂಗತಿಯನ್ನು ಬೇಸರದಿಂದ ಹಂಚಿಕೊಂಡಿದ್ದಾರೆ.

  ಅಲ್ಲದೆ, ತಮ್ಮ ತಂದೆಯೇ ತಮ್ಮ ತಾಯ್ತನದ ಬಗ್ಗೆ ಅಸಮಾಧಾನಗೊಂಡಿದ್ದ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ತಮ್ಮ ತಂದೆ ಸಹ ಮಹಿಳೆಯರು ಸಮಾನರಲ್ಲ ಎಂದು ನಂಬಿದ್ದಾರೆಂದು ಹೇಳಿದ್ದಾರೆ. ''ನನ್ನ ಕುಟುಂಬವನ್ನು ಅವಮಾನಿಸಲು ನಾನು ಬಯಸುವುದಿಲ್ಲ, ಆದರೆ ಬಹಳ ಕುಟುಂಬಗಳು ಒಂದೇ ರೀತಿ ಯೋಚಿಸುತ್ತವೆ. ಹುಟ್ಟಿನಿಂದಲೇ ಮಗಳನ್ನು ಬೆಳೆಸುವ ಕುಟುಂಬದವರು ಕೂಡ ಅವಳು ಸಮಾನತೆಗೆ ಅರ್ಹಳಲ್ಲ ಎಂದು ಹೇಗೆ ತಾನೇ ನಂಬುತ್ತಾರೆ? ಇದು ನನಗೆ ಅರ್ಥವಾಗುತ್ತಿಲ್ಲ'' ಎಂದು ಜೆನ್ನಿಫರ್ ಪ್ರಶ್ನೆ ಮಾಡಿದ್ದಾರೆ.

  ಜೆನ್ನಿಫರ್ ಲಾರೆನ್ಸ್ ಹಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. 'ಎಕ್ಸ್‌ ಮೆನ್' ಸರಣಿಯ ಮೂರು ಸಿನಿಮಾಗಳಲ್ಲಿ ನಟಿಸಿರುವ ಜೆನ್ನಿಫರ್, 'ಹಂಗರ್ ಗೇಮ್ಸ್', 'ಪ್ಯಾಸೆಂಜರ್', 'ರೆಡ್ ಸ್ಪ್ಯಾರೊ' ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಿಲ್ವಿರ್ ಲಿಂಗ್ಸ್ ಪ್ಲೇಬುಕ್' ಸಿನಿಮಾದ ಅತ್ಯುತ್ತಮ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿಯನ್ನು ಸಹ ಈ ನಟಿ ಪಡೆದಿದ್ದಾರೆ. ಜೊತೆಗೆ ಬ್ರಿಟೀಷ್ ಅಕಾಡೆಮಿ ಪ್ರಶಸ್ತಿ, ಆಕ್ಟಾ ಪ್ರಶಸ್ತಿಗಳು ಸಹ ನಟಿಯ ಪಾಲಾಗಿವೆ. ಪ್ರಸ್ತುತ 'ಕಾಸ್‌ವೇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಜೆನ್ನಿಫರ್ ಲಾರೆನ್ಸ್.

  English summary
  Actress Jennifer Lawrence talks about pay gap in Hollywood. She also talks about her motherhood also
  Wednesday, September 7, 2022, 20:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X