»   » ಸಕತ್ ಹಾಟ್! ಜೆನ್ನಿಫರ್ ಲೋಪೆಜ್ 'ಬೂಟಿ'

ಸಕತ್ ಹಾಟ್! ಜೆನ್ನಿಫರ್ ಲೋಪೆಜ್ 'ಬೂಟಿ'

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪಾಪ್ ತಾರೆ ಜೆನ್ನಿಫರ್ ಲೋಪೆಜ್ ಮತ್ತೆ ಸೊಂಟ ಕುಣಿಸಿದ್ದಾಳೆ. ಸಕತ್ ಸೆಕ್ಸಿ ವಿಡಿಯೋ ತುಣುಕು ಮಾತ್ರ ಸದ್ಯಕ್ಕೆ ಬಿಡುಗಡೆ ಮಾಡಿರುವ ಜೆಎಲ್ಒ ಅಭಿಮಾನಿಗಳಿಗೆ ಕಿಚ್ಚು ಹಬ್ಬಿಸಿದ್ದಾಳೆ. ವಾರ್ನಿಂಗ್ ನೊಂದಿಗೆ ಆರಂಭವಾಗುವ ಈ ಟೀಸರ್ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಾಟ್ ಫೇವರೀಟ್ ಎನಿಸಿದೆ.

ಇಗ್ಗಿ ಅಜಲೀಯಾ ಜೊತೆಗೂಡಿ ಜೆನ್ನಿ ತನ್ನ ನಿತಂಬವನ್ನು ಕುಣಿಸುವ ಪರಿ ನೋಡಿದವರು ಕಣ್ ಮಿಟುಕಿಸಿದೆ ವಿಡಿಯೋ ನೋಡುತ್ತಿದ್ದಾರಂತೆ. ಈ ಹಿಂದೆ ಜನಪ್ರಿಯಗೊಂಡಿದ್ದ ಬೂಟಿ ರಿಮಿಕ್ಸ್ ಸಾಂಗ್ ನ ಹೊಸ ಆವೃತ್ತಿಯನ್ನು ಜೆನ್ನಿ ಹೊರತಂದಿದ್ದಾಳೆ. ಇಬ್ಬರು ಹಾಟ್ ತಾರೆಯ ಮೈಮಾಟ, ನಿತಂಬಗಳ ಕುಲುಕಾಟ, ಪಡ್ಡೆಗಳಿಗೆ ರಸದೂಟ

ಈ ಸೆಕ್ಸಿ ವಿಡಿಯೋವನ್ನು ಹೈಪ್ ವಿಲಿಯಮ್ಸ್ ನಿರ್ದೇಶಿಸಿದ್ದು, ಜೆನ್ನಿ ಕುಣಿದಾಟ ನೋಡುತ್ತಿದ್ದರೆ ಮಿಕ್ಕೆಲ್ಲ ವಿಷಯಗಳು ಮರೆಯಾಗಿಬಿಡುತ್ತದೆ. ಮೋಡಿ ಮಾಡುವ ಈ ನೃತ್ಯ ಶೈಲಿ ರಸಿಕರೆ ಮಾತ್ರ ಎಂದು ಹೈಪ್ ಖುಷಿಯಿಂದ ಹೇಳಿದ್ದಾರೆ.

It's HOT! Watch Jennifer Lopez Ft Iggy Azalea 'Booty' Video

ಸೆಕೆಂಡೊಮ್ಮೆ ಜೆನ್ನಿ ತನ್ನ ಪೃಷ್ಠವನ್ನು ಥಕಥಕ ಕುಣಿಸುತ್ತಿದ್ದರೆ, ಜನ ಕಣ್ಣಗಲಿಸಿ ನೋಡಿ ಪ್ರಶಂಸಿದೇ ಇರಲು ಸಾಧ್ಯವಿಲ್ಲ. ಬೂಟಿ ರಿಮೀಕ್ಸ್ ನಲ್ಲಿ ಇಗ್ಗಿ ಹಾಗೂ ಜೆನ್ನಿ ಇಬ್ಬರ ಕೆಮಿಸ್ಟ್ರಿ ಸಕತ್ ಹಾಟ್ ಆಗಿದ್ದು ಈ ಬೂಟಿ ಡ್ಯಾನ್ಸ್ ವೈರಸ್ ನಂತೆ ಎಲ್ಲರಿಗೂ ಹುಚ್ಚು ಹಿಡಿಸುವ ಸಾಧ್ಯತೆಯಿದೆ. ಪೂರ್ಣ ಪ್ರಮಾಣದ ವಿಡಿಯೋ ಎಂದಿಗೆ ಬಿಡುಗಡೆಯಾಗುವುದೋ ಎಂದು ಅಭಿಮಾನಿಗಳು ಬಕ ಪಕ್ಷಿಯಂತೆ ಕಾದಿದ್ದಾರಂತೆ. ಸದ್ಯಕ್ಕೆ ಬ್ಯೂಟಿಫುಲ್ ಜೆನ್ನಿ ಬೂಟಿ ಸಾಂಗ್ ವಿಡಿಯೋ ನಿಮಗಾಗಿ ಇಲ್ಲಿದೆ.

ಈ ಹಿಂದೆ ಕೂಡಾ 'Follow The Leader' ಎಂದು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು ಹಾಟ್ ಆಗಿ ತನ್ನ ಅಂಗಸೌಷ್ಠವನ್ನು ತೋರಿಸುವ ವಿಡಿಯೋ ರಿಲೀಸ್ ಮಾಡಿದ್ದಳು. ಇತ್ತೀಚೆಗೆ ಬ್ರೆಜಿಲ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಗಾಗಿ ಆಶಯ ಗೀತೆಯನ್ನು ಹಾಡಿ ಕುಣಿದಿದ್ದಳು

ಎಚ್ಚರಿಕೆ: ಒಬ್ಬರೇ ಇದ್ದಾಗ ನೋಡಿ ಆನಂದಿಸಿ.. ಕಚೇರಿಯಲ್ಲಿ, ಅರಸಿಕರ ಮುಂದೆ ವಿಡಿಯೋ ಪ್ಲೇ ಬಟನ್ ಒತ್ತಬೇಡಿ

English summary
It's HOT! Watch Jennifer Lopez Ft Iggy Azalea 'Booty' Video. The countdown began when Jennifer Lopez dropped a small teaser of her Booty remix featuring Iggy Azalea. Well, the long wait is over as the curves are all out!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada